ಮುಂಬೈ

ಶ್ರೀರಾಮನ ಆಶೀರ್ವಾದದಿಂದ ಕೊರೋನಾ ಕಣ್ಮರೆಯಾಗಲಿದೆ: ಶಿವಸೇನೆ

Pinterest LinkedIn Tumblr

ಶ್ರೀರಾಮನ ಆಶೀರ್ವಾದದಿಂದ ಕೊರೋನಾ ಕಣ್ಮರೆಯಾಗಲಿದೆ: ಶಿವಸೇನ

ಭಗವಾನ್ ಶ್ರೀರಾಮನ ಆಶೀರ್ವಾದದಿಂದ ದೇಶದಲ್ಲಿ ಕೋವಿಡ್ -19 ಬಿಕ್ಕಟ್ಟು ಕಣ್ಮರೆಯಾಗಲಿದೆ ಎಂದು ಶಿವಸೇನೆ ಮಂಗಳವಾರ ತಿಳಿಸಿದೆ.

ಮುಂಬೈ: ಭಗವಾನ್ ಶ್ರೀರಾಮನ ಆಶೀರ್ವಾದದಿಂದ ದೇಶದಲ್ಲಿ ಕೋವಿಡ್ -19 ಬಿಕ್ಕಟ್ಟು ಕಣ್ಮರೆಯಾಗಲಿದೆ ಎಂದು ಶಿವಸೇನೆ ಮಂಗಳವಾರ ತಿಳಿಸಿದೆ.

ಕೊರೋನಾವೈರಸ್ ಪ್ರಕರಣಗಳ ನಡುವೆ ಆಗಸ್ಟ್ 5 ರಂದು ನಡೆಯುತ್ತಿರುವ ಸಮಾರಂಭದ ಕುರಿತು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಬರೆದುಕೊಂಡಿದೆ.

“ಪ್ರಧಾನಿ ಮೋದಿಯವರು ಅಯೋಧ್ಯೆಯಲ್ಲಿ ‘ಭೂಮಿ ಪೂಜೆಯನ್ನು’ ನಿರ್ವಹಿಸುವಂತಹಾ ಮತ್ತೊಂದು  ಸುವರ್ಣ ಕ್ಷಣ ಬರಲು ಸಾಧ್ಯವಿಲ್ಲ.  ಕೊರೋನಾವೈರಸ್ ಹಾವಳಿ ಶ್ರೀರಾಮನ ಆಶೀರ್ವಾದದಿಂದ ಕಣ್ಮರೆಯಾಗಲಿದೆ”

ರಾಮ ಮಂದಿರ ನಿರ್ಮಾಣ ಅಭಿಯಾನಕ್ಕೆ ಸಂಬಂಧಿಸಿದ ಪ್ರಮುಖ ನಾಯಕರಾದ ಅಡ್ವಾಣಿ ಮತ್ತು ಜೋಶಿ ದೆಹಲಿಯಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಸಾಮ್ನಾ ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ,  ಅವರ ವಯಸ್ಸು ಮತ್ತು ಅಯೋಧ್ಯೆಯಲ್ಲಿ ಕೋವಿಡ್ 19 ಸೋಂಕು  ಗಮನದಲ್ಲಿಟ್ಟುಕೊಂಡು ಸಮಾರಂಭಕ್ಕೆ ಹಾಜರಾಗದಂತೆ ಅವರಿಗೆ ಸೂಚಿಸಲಾಗಿದೆ ಎಂದು ಅದು ಹೇಳಿದೆ

ಈ ಅಭಿಯಾನಕ್ಕೆಕಾರಣವಾದ ಇನ್ನೋರ್ವ ಪ್ರಮುಖ ನಾಯಕಿ  ಉಮಾ ಭಾರತಿ ಕೂಡ ಸಮಾರಂಭಕ್ಕೆ ಹಾಜರಾಗುವುದಿಲ್ಲ ಮತ್ತು ಬದಲಾಗಿ ಸರಯೂ ನದಿಯ ದಡವನ್ನು ತನ್ನ ಮನಸ್ಸಿನ ಕಣ್ಣುಗಳ ಮೂಲಕ ವೀಕ್ಷಿಸಲಿದ್ದಾರೆ.

ಭೂಮಿ ಪೂಜೆ ಸಮಾರಂಭ ದೇಶಾದ್ಯಂತ ಸಂಭ್ರಮ ಮನೆ ಮಾಡುವಂತೆ ಮಾಡಿದೆ ಎಂದು ಶಿವಸೇನೆ ಹೇಳಿದೆ. “ಕೊರೋನಾ ಅಯೋಧ್ಯೆ, ಉತ್ತರ ಪ್ರದೇಶ ಮತ್ತು ಇಡೀ ದೇಶದಲ್ಲಿ ಹರಡಿದ್ದು ಈ ಬಿಕ್ಕಟ್ಟು ಕೂಡ ಭಗವಾನ್ ರಾಮನ ಆಶೀರ್ವಾದದಿಂದ ಮಸುಕಾಗುತ್ತದೆ” ಎಂದು ಅದು ಹೇಳಿದೆ. ಅಯೋಧ್ಯೆಯಲ್ಲಿ ಭದ್ರತಾ ವ್ಯವಸ್ಥೆಗಳ ಜವಾಬ್ದಾರಿ ಗೃಹ ಸಚಿವಾಲಯದ ಮೇಲಿತ್ತು, ಆದರೆ ಗೃಹ ಸಚಿವ ಅಮಿತ್ ಷಾ ಅವರು ಕೊರೋನಾ ಸೋಂಕಿಗೆ ತುತ್ತಾಗಿದ್ದು ದುರದೃಷ್ಟಕರ ಎಂದು ಸಾಮ್ನಾದಲ್ಲಿ ಉಲ್ಲೇಖಿಸಿದೆ. ಪ್ರಧಾನಿ, ಆರ್‌ಎಸ್‌ಎಸ್ ಮುಖ್ಯಸ್ಥ, ಉತ್ತರ ಪ್ರದೇಶದ ಮುಖ್ಯಮಂತ್ರಿ ಮತ್ತು ಇತರರು ಇದ್ದರೂ, ಶಾ ಇಲ್ಲದೆ ಸಮಾರಂಭವು ನಿರಾಶೆ ತರಿಸಲಿದೆ ಎಂದೂ ಶಿವಸೇನೆ ಹೇಳಿಕೆ ತಿಳಿಸಿದೆ,

ಕಳೆದ ಶನಿವಾರ ದೆಹಲಿಯಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಶಾಭಾಗವಹಿಸಿದ್ದರು ಮತ್ತು ಕಳೆದ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಾಮಾಜಿಕ  ಅಂತರದೊಂದಿಗೆ ಭಾಗವಹಿಸಿದ್ದರು. ಳೆದ ಕೆಲವು ದಿನಗಳಲ್ಲಿ ತಮ್ಮ ಸಂಪರ್ಕಕ್ಕೆ ಬಂದವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸುವಂತೆ ಕೇಳಿದ್ದಾರೆ.ಗೃಹ ಸಚಿವರು ಇದನ್ನು ಹೇಳುತ್ತಿದ್ದಾರೆಂದರೆ ಇಡೀ ಸಚಿವ ಸಂಪುಟವನ್ನೇ ಪ್ರತ್ಯೇಕತೆಯಲ್ಲಿಡುವುದು ಅನಿವಾರ್ಯವಾಗಿದೆ. ಶಾ ಅವರು ಮೋದಿಗೆ ಹತ್ತಿರವಾಗಿದ್ದಾರೆ ಆದರೆ ರಾಮನ ಆಶೀರ್ವಾದದಿಂದಾಗಿ ಪ್ರಧಾನಿ ಮತ್ತು ಗೃಹ ಸಚಿವರಿಗೆ ಏನೂ ಆಗುವುದಿಲ್ಲ ಎಂದು ಸೇನೆ ಹೇಳಿದೆ.

Comments are closed.