ಮುಂಬೈ

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ 10 ಲಕ್ಷ ಡೌನ್‌ಲೋಡ್‌ ದಾಟಿದ ಜಿಯೋ ಮಾರ್ಟ್‌

Pinterest LinkedIn Tumblr


ಮುಂಬೈ (ಜುಲೈ 24); ರಿಲಯನ್ಸ್ ರಿಟೇಲ್‌ನ ಬೀಟಾ ಆನ್‌ಲೈನ್ ಗ್ರಾಹಕ ದಿನಸಿ ಪ್ಲಾಟ್‌ಫಾರ್ಮ್‌ ಜಿಯೋಮಾರ್ಟ್ ತನ್ನ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಐಒಎಸ್ ಆಪ್ ಸ್ಟೋರ್‌ನಲ್ಲಿ ಪ್ರಾರಂಭಿಸಿದೆ. ಪ್ರಾರಂಭವಾದ ಕೆಲವೇ ದಿನಗಳಲ್ಲಿ ಜಿಯೋಮಾರ್ಟ್ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ 10 ಲಕ್ಷ ಡೌನ್ಲೋಡ್ ಗುರಿಯನ್ನು ದಾಟಿದೆ. ಅಲ್ಲದೆ ಶಾಪಿಂಗ್ ವಿಭಾಗದಲ್ಲಿ ಅಗ್ರ ಮೂರು ಅಪ್ಲಿಕೇಶನ್‌ಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

ಅಪ್ಲಿಕೇಶನ್ ಆಧಾರಿತ ಇಂಟರ್ಫೇಸ್ ಮೂಲಕ ಸುಲಭವಾಗಿ ತಮ್ಮ ಪ್ರವೇಶವನ್ನು ಕಂಡುಕೊಳ್ಳುವ ಇಂದಿನ ಮೊಬೈಲ್ ಪೀಳಿಗೆಯು ಈಗ ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳಿಗೆ ಲಭ್ಯವಿರುವ ಜಿಯೋಮಾರ್ಟ್ ಅಪ್ಲಿಕೇಶನ್ ಇಂಟರ್ಫೇಸ್ ಮೂಲಕ ಆದೇಶಗಳನ್ನು ನೀಡುವ ಅನುಕೂಲವನ್ನು ಆನಂದಿಸಬಹುದಾಗಿದೆ ಎಂದು ಜಿಯೋ ತಿಳಿಸಿದೆ.

ಎರಡೂ ಅಪ್ಲಿಕೇಶನ್‌ಗಳನ್ನು ಮತ್ತು ವಿವಿಧ ಸಾಧನಗಳಲ್ಲಿ ಪೋರ್ಟಲ್ ಇಂಟರ್ಫೇಸ್ ಅನ್ನು ಬಳಸುವ ಗ್ರಾಹಕರು ತಮ್ಮ ಲಾಗಿನ್ ಐಡಿಯೊಂದಿಗೆ ಪ್ಲಾಟ್‌ಫಾರ್ಮ್‌‌ಗಳ ನಡುವೆ ತಮಗೆ ಇಷ್ಟವಾದ ಉತ್ಪನ್ನಗಳನ್ನು ಕೊಳ್ಳಬಹುದು ಅಥವಾ ಅವರ ಹಿಂದಿನ ಆದೇಶಗಳು ಮತ್ತು ಕಾರ್ಟ್ ವಸ್ತುಗಳನ್ನು ಪ್ರವೇಶಿಸಬಹುದು. ಬೀಟಾ ಪ್ಲಾಟ್‌ಫಾರ್ಮ್‌ ಜಿಯೋಮಾರ್ಟ್.ಕಾಮ್ ಅನ್ನು ಮಾರ್ಚ್ ಅಂತ್ಯದ ವೇಳೆಗಾಗಲೆ ದೇಶದ ಸುಮಾರು 200 ನಗರಗಳು ಮತ್ತು ಪಟ್ಟಣಗಳಲ್ಲಿ ಪ್ರಾರಂಭಿಸಲಾಗಿದೆ.

ದೇಶಾದ್ಯಂತ ಜಿಯೋಮಾರ್ಟ್ ಪ್ಲಾಟ್‌ಫಾರ್ಮ್‌ ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಲಭ್ಯವಾಗುವಂತೆ ನೋಡಿಕೊಳ್ಳಲಾಗಿದೆ. ಮೊದಲ ಬಾರಿಗೆ ಗ್ರಾಹಕರು ಕಿರಾಣಿ, ಹಣ್ಣುಗಳು, ತರಕಾರಿಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಆನ್ಲೈನ್ ಶಾಪಿಂಗ್ ಮೂಲಕ ಮನೆ ಮನೆಗೆ ತರಿಸಿಕೊಳ್ಳುತ್ತಿದ್ದಾರೆ.

ಜಿಯೋಮಾರ್ಟ್ ಪ್ರತಿದಿನ ತನ್ನ ಡಿಜಿಟಲ್ ಸೇವೆಯಲ್ಲಿ ಹೊಸ ಉತ್ಪನ್ನಗಳು, ವೈಶಿಷ್ಟ್ಯ ಬ್ರ್ಯಾಂಟ್‌ಗಳನ್ನು ನಿರಂತರವಾಗಿ ಸೇರಿಸುತ್ತಿದೆ. ಪ್ರತಿ ಬಾರಿ ಶಾಪಿಂಗ್ ಮಾಡುವಾಗ ತನ್ನ ಗ್ರಾಹಕರಿಗೆ ಸಂಪೂರ್ಣ ಹೊಸ ಅನುಭವ ಮತ್ತು ಸಂತೃಪ್ತಿ ನೀಡುವಲ್ಲಿ ಯಶಸ್ವಿಯಾಗಿದೆ ಎಂದು ಹಲವು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮನೆ ಮತ್ತು ಅಡುಗೆ ಉತ್ಪನ್ನಗಳು, ಪೂಜಾ ಅಗತ್ಯಗಳು, ಮಗುವಿಗೆ ಅಗತ್ಯವಾದ ಉತ್ಪನ್ನಗಳು, ಬ್ರಾಂಡ್ ಆಹಾರ ಪದಾರ್ಥಗಳನ್ನು ಸ್ಮಾರ್ಟ್ ಸ್ಟೋರ್ ಬೆಲೆ ಭರವಸೆಯೊಂದಿಗೆ, ಜಿಯೋಮಾರ್ಟ್ ಎಲ್ಲಾ ಉತ್ಪನ್ನಗಳಿಗೆ ಕನಿಷ್ಠ 5 ಶೇಕಡಾ ರಿಯಾಯಿತಿಯೊಂದಿಗೆ ಅಗತ್ಯ ವಸ್ತುಗಳ ಮೇಲೆ ಆಕರ್ಷಕ ಬೆಲೆಗಳನ್ನು ನೀಡುತ್ತಿದೆ

ಇತ್ತೀಚಿನ ಎಜಿಎಂ ವಾರ್ಷಿಕ ಸಭೆಯಲ್ಲಿ ಜಿಯೋ ಮಾರ್ಟ್‌‌ನ ಮಹತ್ವಾಕಾಂಕ್ಷೆಯ ವಿಸ್ತರಣಾ ಯೋಜನೆಯನ್ನು ವಿವರಿಸಿದ ಆರ್‌ಐಎಲ್‌ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ, “ಜಿಯೋಮಾರ್ಟ್ ಈಗ ದೇಶಾದ್ಯಂತ 2.5 ಲಕ್ಷ ದೈನಂದಿನ ಆದೇಶಗಳನ್ನು ತೆಗೆದುಕೊಳ್ಳುತ್ತಿದೆ ಮತ್ತು ಪ್ರತಿ ದಿನವೂ ಈ ಸಂಖ್ಯೆ ಬಹಳ ವೇಗವಾಗಿ ಏರುತ್ತಿದೆ. ಜಿಯೋಮಾರ್ಟ್ ಈಗ ಅದರ ಭೌಗೋಳಿಕ ವ್ಯಾಪ್ತಿ ಮತ್ತು ವಿತರಣಾ ಸಾಮರ್ಥ್ಯಗಳನ್ನು ಹೆಚ್ಚಳ ಮಾಡುವತ್ತ ಗಮನ ಹರಿಸಿದೆ” ಎಂದು ತಿಳಿಸಿದ್ದರು.

“ಜಿಯೋಮಾರ್ಟ್ ಗ್ರಾಹಕರಿಗೆ ಉತ್ತಮ ಶಾಪಿಂಗ್ ಅನುಭವವನ್ನು ನೀಡುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ದಿನಸಿ ಜೊತೆಗೆ, ಮುಂದಿನ ದಿನಗಳಲ್ಲಿ ನಾವು ಎಲೆಕ್ಟ್ರಾನಿಕ್ಸ್, ಫ್ಯಾಷನ್, ಔಷಧೀಯ ಮತ್ತು ಆರೋಗ್ಯ ರಕ್ಷಣೆಗಾಗಿ ಜಿಯೋಮಾರ್ಟ್ ಅನ್ನು ವಿಸ್ತರಿಸಲಿದ್ದೇವೆ. ಮುಂಬರುವ ವರ್ಷಗಳಲ್ಲಿ ನಾವು ಭಾರತದಾದ್ಯಂತ ಇನ್ನೂ ಅನೇಕ ನಗರಗಳನ್ನು ಹೆಚ್ಚಿನ ಗ್ರಾಹಕರನ್ನು ತಲುಪಲಿದ್ದೇವೆ” ಎಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ.

Comments are closed.