ಮುಂಬೈ

45 ಸಾವಿರ ತಲುಪಿದ ಬಂಗಾರದ ದರ

Pinterest LinkedIn Tumblr


ಮುಂಬಯಿ: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಮತ್ತೆ ದುಬಾರಿಯಾಗಿದ್ದು, ಸಾರ್ವಕಾಲಿಕ ದಾಖಲೆಯ ಮಟ್ಟವನ್ನು ತಲುಪಿದೆ. ಷೇರು ಮಾರುಕಟ್ಟೆಯಲ್ಲಿನ ಕುಸಿತದ ಪರಿಣಾಮವಾಗಿ ಹೂಡಿಕೆದಾರರು ಚಿನ್ನದತ್ತ ಮುಖಮಾಡುತ್ತಿದ್ದಾರೆ. ದಿಲ್ಲಿಯ ಬುಲಿಯನ್‌ ಮಾರುಕಟ್ಟೆಯಲ್ಲಿ 10 ಗ್ರಾಂ. ಚಿನ್ನದ ಬೆಲೆ 1,155 ರೂ. ಏರಿಕೆಯಾಗಿದೆ. ಜತೆಗೆ ಒಂದು ಕಿಲೋ ಗ್ರಾಂ ಬೆಳ್ಳಿಯ ಬೆಲೆಯಲ್ಲಿಯೂ 1,198 ರೂ. ಹೆಚ್ಚಾಗಿದೆ.

ಈ ಬಾರಿಯ ಚಿನ್ನದ ದರ ಏರಿಕೆಗೆ ಕರೋನಾ ವೈರಸ್‌ ಕಾರಣವಾಗಿದೆ. ಚಿನ್ನದ ಮೇಲೆ ಹೂಡಿಕೆಗೆ ಆದ್ಯತೆ ನೀಡುತ್ತಿದ್ದಾರೆ. ಚಿನ್ನ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹತ್ತು ಗ್ರಾಂಗೆ 43,228 ರೂ.ಗಳಿಂದ 44,383 ರೂ.ಗೆ ಏರಿಕೆಯಾಗಿದೆ.

Comments are closed.