ಮನೋರಂಜನೆ

ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ

Pinterest LinkedIn Tumblr


ಮುಂಬೈ: ಕುಡ್ಲದ ಬೆಡಗಿ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ. ತಮ್ಮ ಬೆರಳು ಹಿಡಿದಿರುವ ಮಗಳ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಶಿಲ್ಪಾ, ನಿಮ್ಮ ಆಶೀರ್ವಾದ ಮತ್ತು ಪ್ರೀತಿ ಪುತ್ರಿಯ ಮೇಲಿರಲಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ಶಿಲ್ಪಾ ಸಾರ್ವಜನಿಕ ಸಮಾರಂಭಗಳಲ್ಲಿ ಕಾಣಿಸಿಕೊಂಡಿದ್ದರು. ಎರಡನೇ ಮಗುನಾ ಎಂಬ ಪ್ರಶ್ನೆ ಹುಟ್ಟಿಕೊಳ್ಳುವುದು ಸಹಜ. ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ದಂಪತಿ ಸರ್‍ಗೋಸಿ (ಬಾಡಿಗೆ ತಾಯ್ತನ) ವಿಧಾನದ ಮೂಲಕ ಮಗು ಪಡೆದಿದ್ದಾರೆ. ದಂಪತಿಗೆ ಏಳು ವರ್ಷದ ವಿಯಾನ್ ಎಂಬ ಮಗನಿದ್ದಾನೆ.

ಇನ್‍ಸ್ಟಾಗ್ರಾಂನಲ್ಲಿ ಗುಡ್ ನ್ಯೂಸ್ ಹಂಚಿಕೊಂಡಿರುವ ಶಿಲ್ಪಾ ಶೆಟ್ಟಿ, ಓಂ ಶ್ರೀ ಗಣೇಶಯಾ ನಮಃ. ನಮ್ಮ ಪ್ರಾರ್ಥನೆ ದೇವರಿಗೆ ತಲುಪಿದ್ದು, ಮನೆಗೆ ಆಗಮಿಸಿರುವ ಪುಟ್ಟ ದೇವತೆ ಶಮಿಶಾ ಶೆಟ್ಟಿಯನ್ನು ನಿಮಗೆ ಪರಿಚಯಿಸುತ್ತಿದ್ದೇನೆ. ಜೂನಿಯರ್ ಶಿಲ್ಪಾ ಶೆಟ್ಟಿ ಕುಂದ್ರಾ ಫೆಬ್ರವರಿ 15ರಂದು ಜನಿಸಿದ್ದಾಳೆ. ಸ ಅಂದ್ರೆ ಸಂಸ್ಕøತದಲ್ಲಿ ನಮ್ಮವಳು ಮತ್ತು ಮಿಶಾದ ಅಂದ್ರೆ ದೇವರ ರೀತಿಯಲ್ಲಿರುವ ಎಂದರ್ಥ. ಹಾಗಾಗಿ ನಮ್ಮ ಮನೆಗೆ ಆಗಮಿಸಿರುವ ಲಕ್ಷ್ಮಿಗೆ ಸಮಿಶಾ ಎಂದು ಹೆಸರಿಟ್ಟಿದ್ದೇವೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನಮ್ಮ ಮಕ್ಕಳ ಮೇಲಿರಲಿ. ವಿಯಾನ್ ರಾಜ್ ಕುಂದ್ರಾ ಜೊತೆ ಆಡಲು ಪುಟ್ಟ ಸೋದರಿ ಆಗಮಿಸಿದ್ದಾಳೆ ಎಂದು ಬರೆದುಕೊಂಡಿದ್ದಾರೆ.

37ನೇ ವರ್ಷದಲ್ಲಿ ನಾನು ತಾಯಿಯಾಗಬೇಕೆಂಬ ಇಚ್ಛೆ ನನ್ನದಾಗಿರಲಿಲ್ಲ. ಸೂಕ್ತ ಸಮಯದಲ್ಲಿ ಮಹಿಳೆ ತಾಯ್ತನದ ಅನುಭವ ಪಡೆಯಬೇಕು. ಆದರೆ ನನಗೆ ರಾಜ್ ಕುಂದ್ರಾ ಸರಿಯಾದ ಸಮಯದಲ್ಲಿ ಸಿಗದಿದ್ದಕ್ಕೆ 37ನೇ ವಯಸ್ಸಿನಲ್ಲಿ ತಾಯಿಯಾದೆ ಎಂದು ಈ ಹಿಂದೆ ಶಿಲ್ಪಾ ಹೇಳಿಕೊಂಡಿದ್ದರು.

Comments are closed.