ಮುಂಬೈ

ರಸ್ತೆಯಲ್ಲಿಯೇ ಯುವತಿಯರನ್ನು ಚುಂಬಿಸಿದ!

Pinterest LinkedIn Tumblr


ಮುಂಬೈ: ಮುಂಬೈನ ವೆಸ್ಟರ್ನ್ ಲೈನ್ ಬಳಿ ಜನವರಿ 25ರ ಸಂಜೆ ಆಫೀಸ್ ನಿಂದ ಮನೆಗೆ ಮರಳುತ್ತಿದ್ದ ಯುವತಿಯೋರ್ವಳಿಗೆ ಯುವಕನೊಬ್ಬ ಛೇಡಿಸುವ ವಿಡಿಯೋ ಇದೀಗ ಬಹಿರಂಗಗೊಂಡಿದೆ. ಈ ವಿಡಿಯೋದಲ್ಲಿ ಯೋವಕನೋರ್ವ ರಸ್ತೆಯ ಮೇಲೆ ಓಡಾಡುವ ಯುವತಿಯರಿಗೆ ಬಹಿರಂಗವಾಗಿ ಚುಂಬಿಸಿ ಛೇಡಿಸುತ್ತಿದ್ದು, ಅಶ್ಲೀಲವಾಗಿ ವರ್ತಿಸುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಈ ಘಟನೆಯ ಬಳಿಕ ಯಾವುದೇ ಪ್ರಕರಣ ದಾಖಲಿಸಲಾಗದಿದ್ದರೂ ಕೂಡ ಜಿಆರ್ಪಿ ಪೊಲೀಸರು ಆರೋಪಿ ಯುವಕನನ್ನು ಬಂಧಿಸಿದ್ದಾರೆ.

ಈ ಘಟನೆಯಲ್ಲಿ ಬೆಳಕಿಗೆ ಬಂದ ವಿಡಿಯೋದಲ್ಲಿ ಯುವಕ, ಯುವತಿಯರಿಗೆ ಕಿರುಕುಳ ನೀಡುತ್ತಿದ್ದಾನೆ. ಇನ್ನೊಂದು ವಿಡಿಯೋದಲ್ಲಿ ಆತ ಎದುರುಗಡೆಯಿಂದ ಬರುತ್ತಿದ್ದ ಇಬ್ಬರು ಯುವತಿಯರ ಜೊತೆ ಏಕಕಾಲಕ್ಕೆ ಅಶ್ಲೀಲವಾಗಿ ವರ್ತಿಸಿದ್ದಾನೆ. ಬೆದರಿಕೆಯ ಕಾರಣ ಈ ಯುವತಿಯರು ಅವನನ್ನು ವಿರೋಧಿಸದೆ ಮುಂದಕ್ಕೆ ಸಾಗುತ್ತಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ಆಟ ಫುಟ್ ಪಾತ್ ಬ್ರಿಡ್ಜ್ ನಿಂದ ಕೆಳಕ್ಕೆ ಇಳಿಯುತ್ತಿದ್ದ ಯುವತಿಗೆ ಚುಂಬಿಸಿ ಪರಾರಿಯಾಗುತ್ತಾನೆ. ಯುವತಿ ಆತನಿಗೆ ಉತ್ತರಿಸುವ ಮುನ್ನವೇ ಆತ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.

ಯುವಕನ ವಿರುದ್ಧ ಕಾರ್ಯಾಚರಣೆಗೆ ಇಳಿದ GPR ಪೊಲೀಸರು ಆರೋಪಿ ಯುವಕನನ್ನು ಇದೀಗ ಬಂಧಿಸಿದ್ದಾರೆ. ಆದರೆ, ಈ ಘಟನೆಯಲ್ಲಿ ಯಾರೂ ಕೂಡ ಯುವಕನ ವಿರುದ್ಧ ದೂರು ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದು, ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದಿದ್ದಾರೆ.

Comments are closed.