ಮನೋರಂಜನೆ

ಬಾಲಿವುಡ್ ನಟಿ ಪ್ರಿಯಾಂಕಾರಂತೆ ಬಟ್ಟೆ ಧರಿಸುವಂತೆ ಸವಾಲ್ ಹಾಕಿದ ನಟಿ ಹೀನಾ

Pinterest LinkedIn Tumblr


ಮುಂಬೈ: ಬಾಲಿವುಡ್ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಬೋಲ್ಡ್ ಡ್ರೆಸ್ ಧರಿಸಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಇತ್ತೀಚಿಗಷ್ಟೇ ಪ್ರಿಯಾಂಕಾ ಅವರ ತಾಯಿ ಟ್ರೋಲಿಗರ ಚಳಿ ಬಿಡಿಸಿದ್ದರು. ಇದರ ಬೆನ್ನಲೇ ನಟಿ ಹೀನಾ ಖಾನ್ ಪ್ರಿಯಾಂಕಾ ಅವರ ಪರ ಬ್ಯಾಟ್ ಬೀಸುವ ಮೂಲಕ ನೆಟ್ಟಿಗರಿಗೆ ಸವಾಲ್ ಹಾಕಿದ್ದಾರೆ.

ಇತ್ತೀಚೆಗೆ ಪ್ರಿಯಾಂಕಾ ತಮ್ಮ ಪತಿ ನಿಕ್ ಜೋನಸ್ ಜೊತೆ ಗ್ರ್ಯಾಮಿ ಅವಾರ್ಡ್ 2020 ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಗ್ಲಾಮರಸ್ ಡ್ರೆಸ್ ಹಾಕಿದ್ದ ಕಾರಣ ಸಿಕ್ಕಪಟ್ಟೆ ಟ್ರೋಲ್ ಆಗುತ್ತಿದ್ದರು. ಈ ಬಗ್ಗೆ ಕಿರುತೆರೆ ನಟಿ ಹೀನಾ ಖಾನ್ ಪ್ರತಿಕ್ರಿಯಿಸಿ, ತಾಕತ್ ಇದ್ರೆ ಪ್ರಿಯಾಂಕಾರಂತೆ ಬಟ್ಟೆ ಧರಿಸಿ ಎಂದು ಚಾಲೆಂಜ್ ಮಾಡಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿದ ಹೀನಾ, ಇಂತಹ ಉಡುಪು ಧರಿಸಲು ಧೈರ್ಯ ಬೇಕಾಗುತ್ತದೆ. ತಾಕತ್ ಇದ್ದರೆ ಪ್ರಿಯಾಂಕಾ ಚೋಪ್ರಾ ಅವರಂತೆ ಬಟ್ಟೆ ಧರಿಸಿ ಎಂದು ಚಾಲೆಂಜ್ ಮಾಡಿದ್ದಾರೆ. ಅಲ್ಲದೆ ಪ್ರಿಯಾಂಕಾ ಅವರು ಟ್ರೋಲ್‍ಗಳಿಗೆ ತಲೆ ಕಡಿಸಿಕೊಳ್ಳುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಮೊದಲು ಪ್ರಿಯಾಂಕಾ ಅವರ ತಾಯಿ ಮಧು ಅವರು, ಪ್ರಿಯಾಂಕಾ ಯಾರಿಗೂ ನೋವು ಮಾಡದಂತೆ ತನ್ನದೇ ಆದ ರೀತಿಯಲ್ಲಿ ಜೀವನ ನಡೆಸುತ್ತಾಳೆ. ಅದು ಅವಳ ದೇಹ. ಅವಳಿಗೆ ಹೇಗೆ ಇಷ್ಟ ಇದೆಯೋ ಹಾಗೇ ಇರಲಿ ಎಂದು ಟ್ರೋಲ್ ಮಾಡಿದವರಿಗೆ ಚಾಟಿ ಬೀಸಿದ್ದರು.

Comments are closed.