ಮುಂಬೈ

ಬಿಜೆಪಿ ತೊರೆಯಲ್ಲ, ತಾಕತ್ತಿದ್ದರೆ ವಜಾಗೊಳಿಸಲಿ: ಪಂಕಜಾ ಮುಂಡೆ!

Pinterest LinkedIn Tumblr


ಮುಂಬಯಿ: ”ನಾನು ಪಕ್ಷ ತೊರೆಯುವುದಿಲ್ಲ, ಆದರೆ ನನ್ನನ್ನು ಪಕ್ಷದಲ್ಲಿಇರಿಸಿಕೊಳ್ಳಬೇಕೋ ಬೇಡವೊ ಎನ್ನುವುದು ಮುಖಂಡರಿಗೆ ಬಿಟ್ಟಿದ್ದು,” ಎನ್ನುವ ಮೂಲಕ ಬಿಜೆಪಿ ಅತೃಪ್ತ ನಾಯಕಿ ಪಂಕಜಾ ಮುಂಡೆ ಪಕ್ಷದ ವರಿಷ್ಠರಿಗೆ ಸವಾಲು ಹಾಕಿದ್ದಾರೆ.

ಬೀಡ್‌ ಜಿಲ್ಲೆಯ ಗೋಪಿನಾಥಗಢದಲ್ಲಿಗುರುವಾರ ನಡೆದ ತಮ್ಮ ತಂದೆ ದಿ.ಗೋಪಿನಾಥ ಮುಂಡೆ ಅವರ ಜನ್ಮದಿನ ಕಾರ್ಯಕ್ರಮದಲ್ಲಿಮಾತನಾಡಿದ ಪಂಕಜಾ, ”ನಾನು ಬಿಜೆಪಿ ತೊರೆಯುತ್ತೇನೆ ಎನ್ನುವುದು ಕೇವಲ ಊಹಾಪೋಹ. ಆದರೆ ಪಕ್ಷದ ಕೋರ್‌ ಕಮಿಟಿ ಸದಸ್ಯೆಯಾಗಿ ಮುಂದುವರಿಯಲ್ಲ ಎಂದಿದ್ದಾರೆ.

ಪಕ್ಷ ಅಥವಾ ಯಾವುದೇ ವ್ಯಕ್ತಿಯ ವಿರುದ್ಧ ನನಗೆ ಅಸಮಾಧಾನವಿಲ್ಲ. ಪಕ್ಷಕ್ಕೆ ನನ್ನ ಅಗತ್ಯವಿಲ್ಲಎಂದಾದರೆ ನನ್ನನ್ನು ಹೊರಹಾಕಬಹುದು,” ಎಂದು ಹೇಳಿದರು.

ಬರುವ ಜ.26ರಂದು ಮುಂಬಯಿಯಲ್ಲಿ ಗೋಪಿನಾಥ ಮುಂಡೆ ಪ್ರತಿಷ್ಠಾನ ಕಾರ್ಯಾರಂಭ ಮಾಡಲಿದೆ. ಆ ಬಳಿಕ ತಾವು ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಮಶಾಲ್‌ ರಾರ‍ಯಲಿ (ಬೆಳಕಿನ ರಾರ‍ಯಲಿ) ಹಮ್ಮಿಕೊಳ್ಳುವುದಾಗಿ ಪಂಕಜಾ ಪ್ರಕಟಿಸಿದರು.

ಇನ್ನೊಂದೆಡೆ, ಮಾಜಿ ಸಿಎಂ ದೇವೇಂದ್ರ ಫಡ್ನವಿಸ್‌ ವಿರುದ್ಧ ಅಸಮಾಧಾನವನ್ನು ಮತ್ತೊಮ್ಮೆ ಹೊರಹಾಕಿರುವ ಹಿರಿಯ ನಾಯಕ ಏಕನಾಥ ಖಡ್ಸೆ ಅವರು, ”ಪಕ್ಷದಲ್ಲಿನ ರಾಜ್ಯ ನಾಯಕತ್ವವು ದ್ವೇಷ, ಅಸೂಸೆಯನ್ನೇ ಮೈಗೂಡಿಸಿಕೊಂಡಿದೆ,” ಎಂದು ಟೀಕಿಸಿದ್ದಾರೆ.

Comments are closed.