ಮುಂಬೈ

2ನೇ ತ್ತೈಮಾಸಿಕದಲ್ಲಿ 24.000 ಕೋಟಿ ರೂ. ನಷ್ಟ ಹೊಂದಿದ ಏರ್‌ಟೆಲ್‌

Pinterest LinkedIn Tumblr


ಮುಂಬಯಿ: ನಷ್ಟ ಅನುಭವಿಸುತ್ತಿರುವ ಟೆಲಿಕಾಂ ಕಂಪೆನಿಗಳ ಪಟ್ಟಿ ಮುಂದುವರಿದಿದ್ದು, ಇದೀಗ ಭಾರ್ತಿ ಏರ್‌ಟೆಲ್‌ ಲಿ. 2ನೇ ತ್ತೈಮಾಸಿಕದಲ್ಲಿ ಬರೋಬ್ಬರಿ 24 ಸಾವಿರ ಕೋಟಿ ರೂ. ನಷ್ಟ ಅನುಭವಿಸಿದೆ. ರಿಲಯನ್ಸ್‌ ಜಿಯೋದೊಂದಿಗೆ ಅದು ದರ ಸಮರಕ್ಕಿಳಿದಿದ್ದು ಈ ನಷ್ಟ ಅನುಭವಿಸಲು ಕಾರಣ ಎಂದು ಹೇಳಲಾಗಿದೆ.

ಸೆ.30ಕ್ಕೆ ಮುಕ್ತಾಯವಾದ 2ನೇ ತ್ತೈಮಾಸಿಕದಲ್ಲಿ 23,045 ಕೋಟಿ ನಷ್ಟವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪೆನಿ ಲಾಭ ಪಡೆದಿದ್ದು 118 ಕೋಟಿ ರೂ. ಆಗಿತ್ತು. ಇದರೊಂದಿಗೆ ಕಂಪೆನಿ ನಷ್ಟ ಒಟ್ಟು ನಿರ್ವಹಣಾ ಲಾಭಕ್ಕಿಂತ ಶೇ.4.9ರಷ್ಟು ಹೆಚ್ಚಾಗಿದೆ. ಇದು ಸೆಪ್ಟೆಂಬರ್‌ನಲ್ಲಿ 21,131 ಕೋಟಿ ರೂ. ಆಗಿದೆ.

ಟೆಲಿಕಾಂ ಕಂಪೆನಿಗಳು ಸರಕಾರದ ಟೆಲಿಕಾಂ ಇಲಾಖೆಗೆ 92 ಸಾವಿರ ಕೋಟಿ ರೂ. ಲೆವಿ ಪಾವತಿಸಬೇಕೆಂದು ಸುಪ್ರೀಂ ಕೋರ್ಟ್‌ ಹೇಳಿದ ಬೆನ್ನಲ್ಲೇ ಏರ್‌ ಟೆಲ್‌ ನಷ್ಟದ ವಿಚಾರ ಹೊರಬಿದ್ದಿದೆ.

Comments are closed.