ಮುಂಬೈ

ಸುಪ್ರೀಂ ಕೋರ್ಟ್​ ಮೊರೆ ಹೋಗಲು ಶಿವಸೇನೆ ಸಿದ್ಧತೆ

Pinterest LinkedIn Tumblr

ಮುಂಬೈ: ಸರ್ಕಾರ ರಚನೆಗೆ ಅಗತ್ಯ ಕಾಲಾವಕಾಶ ನೀಡದೆ ರಾಷ್ಟ್ರಪತಿ ಆಡಳಿತ ಹೇರುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಕ್ರಮ ಪ್ರಶ್ನಿಸಿ ಸುಪ್ರೀಂ ಕೋರ್ಟ್​ ಮೊರೆ ಹೋಗಲು ಶಿವಸೇನೆ ಮುಂದಾಗಿದೆ.

ಶಿವಸೇನೆ ಮುಖ್ಯಸ್ಥ ಉದ್ದವ್ ಠಾಕ್ರೆ ಕ್ಷಣ ಕ್ಷಣ ಬೆಳವಣಿಗೆಗಳ ನಡುವೆ ಕಾಂಗ್ರೆಸ್​​ನ ಹಿರಿಯ ನಾಯಕ ಕಪಿಲ್ ಸಿಬಲ್​ರನ್ನು ಭೇಟಿಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ರಾಜ್ಯಪಾಲರು ಮೂರು ದಿನ ಹೆಚ್ಚುವರಿ ಕಾಲಾವಕಾಶ ಏಕೆ ಕೊಡಲಿಲ್ಲ ಎಂಬುದರ ಬಗ್ಗೆ ಕಾನೂನು ಸಲಹೆ ಪಡೆದಿದ್ದಾರೆ.

ಬಿಜೆಪಿ ಜತೆ ಸಖ್ಯ ಕಡಿದುಕೊಂಡ ನಂತರ ಎನ್​ಸಿಪಿ ಹಾಗೂ ಕಾಂಗ್ರೆಸ್​ ಬೆಂಬಲದೊಂದಿಗೆ ಸರ್ಕಾರ ರಚಿಸಲು ಮೂರು ದಿನ ಹೆಚ್ಚುವರಿ ಕಾಲಾವಕಾಶ ಕೊಡುವಂತೆ ರಾಜ್ಯಪಾಲರಲ್ಲಿ ಶಿವಸೈನಿಕರು ಮನವಿ ಮಾಡಿದ್ದರು. ಹೆಚ್ಚುವರಿ ಕಾಲಾವಕಾಶ ನಿರಾಕರಿಸಿದ ರಾಜ್ಯಪಾಲರು ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದ್ದರು.

ದಿನದಿಂದ ದಿನಕ್ಕೆ ಸಾಕಷ್ಟು ರಂಗೇರುತ್ತಿದ್ದ ಮಹಾರಾಷ್ಟ್ರ ರಾಜಕೀಯ ಇದೀಗ ಮತ್ತೊಂದು ಮಜಲು ತಲುಪಿದೆ.

Comments are closed.