ಮುಂಬೈ

ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಸ್ಥಿತಿ ಗಂಭೀರ

Pinterest LinkedIn Tumblr

ಮುಂಬೈ: ತೀವ್ರ ಉಸಿರಾಟ ತೊಂದರೆಯಿಂದ ಬ್ರೀಚ್​ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿರುವ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಸ್ಥಿತಿ ಗಂಭೀರವಾಗಿದೆ.

ತೊಂಬತ್ತು ವರ್ಷ ವಯಸ್ಸಿನ ಲತಾ ಮಂಗೇಶ್ಕರ್ ಅವರು ತೀವ್ರ ಉಸಿರಾಟದ ತೊಂದರೆಯಿಂದ ಸೋಮವಾರ ಬೆಳಗಿನ ಜಾವ ಸುಮಾರು 1:30 ಗಂಟೆಗೆ ಆಸ್ಪತ್ರೆಗೆ ದಾಖಲಾಗಿದ್ದರು.

ನ್ಯುಮೋನಿಯಾ ಸೇರಿದಂತೆ ಲತಾ ಮಂಗೇಶ್ಕರ್ ಅವರು ಎಡಕುಹರ ವೈಫಲ್ಯದಿಂದ ಬಳಲುತ್ತಿದ್ದಾರೆ. ವೆಂಟಿಲೇಟರ್​​ನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಜೀವರಕ್ಷಕ ಸಾಧನಗಳು ಅಳವಡಿಸಲಾಗಿದೆ. ಆರೋಗ್ಯದಲ್ಲಿ ತಕ್ಕಮಟ್ಟಿಗೆ ಚೇತರಿಕೆ ಕಂಡುಬಂದಿದ್ದರೂ ಪರಿಸ್ಥಿತಿ ಗಂಭೀರವಾಗಿದೆ ಎಂದು ಡಾ. ಪ್ರತಿತ್ ಸಾಮ್ದಾನಿ ಹೇಳಿದ್ದಾರೆ.

ಹೃದಯದ ಕಾರ್ಯಚರಣೆಯಲ್ಲೂ ಏರುಪೇರಾಗಿದ್ದು, ಹೃದಯದಿಂದ ಸರಿಯಾದ ಪ್ರಮಾಣದಲ್ಲಿ ರಕ್ತ ರವಾನೆಯಾಗುತ್ತಿಲ್ಲ ಎಂಬುದು ತಿಳಿದುಬಂದಿದೆ.ಲತಾ ಮಂಗೇಶ್ಕರ್ ಅವರ ಸಂಪೂರ್ಣ ಆರೋಗ್ಯ ಸ್ಥಿತಿ ತಿಳಿಸಲು ಆಸ್ಪತ್ರೆ ವೈದ್ಯರು ನಿರಾಕರಿಸಿದ್ದಾರೆ. ಮಂಗೇಶ್ಕರ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಹೇಳುತ್ತಿದ್ದಾರೆ.

Comments are closed.