ಮುಂಬೈ

ಬಾಂದ್ರಾ – ವರ್ಲಿಯಲ್ಲಿ “ತೇಲುವ ಬಾಸ್ಕೆಟ್‌ ಬಾಲ್ ಕೋರ್ಟ್” ಆರಂಭ

Pinterest LinkedIn Tumblr

ಮುಂಬೈ: ಅರಬ್ಬಿ ಸಮುದ್ರ ಬಳಿಯ ಬಾಂದ್ರಾ – ವರ್ಲಿಯ ಸಮುದ್ರ ಭಾಗದಲ್ಲಿ ಭಾರತದ ಮೊದಲ ಬಾಸ್ಕೆಟ್‌ ಬಾಲ್ ಕೋರ್ಟ್ ನಿರ್ಮಾಣವಾಗಿದೆ. ರಾಷ್ಟ್ರೀಯ ಬಾಸ್ಕೆಟ್‌ ಬಾಲ್ ಅಸೋಸಿಯೇಷನ್ ಮೂಲಕ ಇದನ್ನು ನಿರ್ಮಿಸಲಾಗಿದೆ.

ತೇಲುವ ಬಾಸ್ಕೆಟ್‌ ಬಾಲ್ ಕೋರ್ಟ್ ನಲ್ಲಿ ಈಗ ಆಟಗಾರರು ಬಹಳ ಎಂಜಾಯ್ ಮಾಡುತ್ತಿದ್ದು, ಬುಧವಾರ ಖ್ಯಾತ ಬಾಸ್ಕೆಟ್‌ಬಾಲ್ ಪಟು ಜಾಸನ್ ವಿಲಿಯಮ್ಸ್‌ ಸಹ ಪಾಲ್ಗೊಂಡಿದ್ದರು.

2019 ರ ಅಕ್ಟೋಬರ್‌ ನಲ್ಲಿ ಮುಂಬೈನಲ್ಲಿ ಬಾಸ್ಕೆಟ್‌ಬಾಲ್ ಪಂದ್ಯ ಆಯೋಜಿಸುವುದಾಗಿ ಡಿಸೆಂಬರ್ 2018ರಲ್ಲಿ ಎನ್.ಬಿ.ಎ. ಹೇಳಿಕೊಂಡಿತ್ತು. ಅ. 4-5 ರಂದು ಡೋಮ್ ನಲ್ಲಿ ಪಂದ್ಯಾವಳಿಯನ್ನು ಆಯೋಜಿಸಿದೆ.

Comments are closed.