ಮುಂಬೈ

ರಕ್ಷಣೆ ಮಾಡಿದ ಎನ್​​ಡಿಆರ್​ಎಫ್​​​ ಸಿಬ್ಬಂದಿಗೆ ಮಹಿಳೆ ಧನ್ಯವಾದ ಅರ್ಪಿಸಿದ್ದು ಹೀಗೆ..

Pinterest LinkedIn Tumblr


ಮುಂಬೈ (10) : ಮಹಾರಾಷ್ಟ್ರದಲ್ಲಿ ಬಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೋಲ್ಹಾಪುರ, ಬೆಳಗಾವಿ, ಚಿಕ್ಕೋಡಿ ಸೇರಿದಂತೆ ಹಲವು ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿವೆ. ಪ್ರವಾಹದಲ್ಲಿ ಸಿಲುಕಿದ ಜನರ ರಕ್ಷಣೆಗೆ ಎನ್‍ಡಿಆರ್​​​​ಎಫ್ ಸಿಬ್ಬಂದಿ ಮಳೆಯನ್ನು ಲೆಕ್ಕಿಸದೇ ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಿರಾಶ್ರಿತ ಮಹಿಳೆ ತಮ್ಮನ್ನು ರಕ್ಷಿಸಿದ ಎನ್‍ಡಿಆರ್​ಎಫ್ ಸಿಬ್ಬಂದಿಯ ಕಾಲಿಗೆ ನಮಸ್ಕರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುವಾಗ ದೋಣಿಯಲ್ಲಿ ಕುಳಿತಿರುವ ಮಹಿಳೆಯೊಬ್ಬರು ತಮ್ಮನ್ನು ರಕ್ಷಿಸಿದ ಯೋಧನ ಕಾಲಿಗೆ ನಮಸ್ಕರಿಸುವ ಮೂಲಕ ಧನ್ಯವಾದ ಅರ್ಪಿಸಿದ್ದಾರೆ.

ಮಹಾರಾಷ್ಟ್ರದ ಕರಾವಳಿಯಲ್ಲಿ ಮಳೆ ಮುಂದುವರೆದಿದ್ದು, ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಇಲ್ಲಿನ ಚಿಕಲಿ ಗ್ರಾಮ ಹಾಗೂ ಕೊಲ್ಹಾಪುರ, ಸಾಂಗ್ಲಿಯಲ್ಲಿ ಜಲಪ್ರಳಕ್ಕೆ ಜನರು ಹೈರಾಣಗಾಗಿದ್ದಾರೆ. ಅನೇಕ ಗ್ರಾಮಗಳು ಜಲಾವೃತ್ತಗೊಂಡಿದ್ದು ಇಲ್ಲಿಯವರೆಗೆ 1.32 ಲಕ್ಷ ಜನರ ರಕ್ಷಣಾ ಕಾರ್ಯ ನಡೆಸಲಾಗಿದೆ.

ಇದನ್ನೂ ಓದಿ : ಪ್ರವಾಹದಲ್ಲಿ ಸಿಲುಕಿದ್ದ ಜನಾರ್ದನ ಪೂಜಾರಿ ರಕ್ಷಣೆ ಮಾಡಿದ ಎನ್​​ಡಿಆರ್​​ಎಫ್​​ ತಂಡ

ಇತ್ತ ಕರ್ನಾಟಕದ ಬಹುತೇಕ ಜಿಲ್ಲೆಗಳು ನದಿಗಳ ಅಬ್ಬರಕ್ಕೆ ಬೆಚ್ಚಿ ಬೀಳುತ್ತಿವೆ. ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಗ್ರಾಮಗಳು ಜಲಾವೃತಗೊಂಡಿವೆ. ನಿರಾಶ್ರಿತರಿಗಾಗಿ ಸ್ಥಳೀಯ ಸುರಕ್ಷಿತ ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ.

Comments are closed.