ಮುಂಬೈ

ರ‍್ಯಾಗಿಂಗ್‌ಗೆ ರೋಸಿಹೋಗಿ ವೈದ್ಯೆ ಆತ್ಮಹತ್ಯೆ

Pinterest LinkedIn Tumblr

ಮುಂಬಯಿ: ಮುಂಬಯಿ ನಾಯರ್‌ ಆಸ್ಪತ್ರೆಯಲ್ಲಿ ವೈದ್ಯೆಗೆ ರ‍್ಯಾಗಿಂಗ್‌ ಮಾಡುತ್ತಿದ್ದರಿಂದ ರೋಸಿಹೋಗಿ ಆಕೆ ಆತ್ಮಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಮೂಲತಃ ಜಲ್ಗಾಂವ್‌ ನಿವಾಸಿ ಯಾಗಿದ್ದ ಪಾಯಲ್‌ ಸಲ್ಮಾನ್‌ ತಡ್ವಿ (23) ಅವರಿಗೆ, ಸ್ತ್ರೀ ರೋಗ ತಜ್ಞ ಹಿರಿಯ ವೈದ್ಯರು ರ‍್ಯಾಗಿಂಗ್‌ ಮಾಡುತ್ತಿದ್ದರು. ಇದರಿಂದ ರೋಸಿ ಹೋದ ಪಾಯಲ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ಪಾಯಲ್‌ ಶವವನ್ನು ಜಲ್ಗಾಂವ್‌ ಜಿಲ್ಲಾಧಿಕಾರಿ ಕಾರ್ಯಾಲಯಕ್ಕೆ ತರಲಾಯಿತು. ಈ ಪ್ರಕರಣದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳಿಗೆ ಶಿಕ್ಷೆ ನೀಡಬೇಕೆಂದು ಸಂಬಂಧಿಕರು ಜಿಲ್ಲಾಧಿಕಾರಿಗಳಲ್ಲಿ ಬೇಡಿಕೆ ಇರಿಸಿದ್ದಾರೆ.

ಪಾಯಲ್‌ ಅವರ ತಾಯಿ ರ‍್ಯಾಗಿಂಗ್‌ ಕುರಿತು ಮೇ 10ರಂದು ಆಸ್ಪತ್ರೆ ಆಡಳಿತದ ಬಳಿ ದೂರು ನೀಡಿದರು. ಡಾ| ಹೇಮಾ ಅಹುಜಾ, ಡಾ| ಭಕ್ತಿ ಆಹಿರೆ ಹಾಗೂ ಡಾ| ಅಂಕಿತ ಖಂಡೆಲ್‌ವಾಲ ಅವರು ಪಾಯಲ್‌ ಮೇಲೆ ರ್ಯಾಗಿಂಗ್‌ ಮಾಡುತ್ತಿದ್ದರು ಎಂದು ದೂರಿನಲ್ಲಿ ಹೇಳಿದ್ದರು. ಆದರೆ ಆಸ್ಪತ್ರೆಯ ಆಡಳಿತ ನಿರ್ಲಕ್ಷé ಮಾಡಿದ ಕಾರಣ ಈ ಘಟನೆ ಸಂಭವಿಸಿದೆ. ಆಸ್ಪತ್ರೆ ಆಡಳಿತ ವೇಳೆಯಲ್ಲಿ ಕಾರ್ಯಾಚರಣೆ ನಡೆಸಿದ್ದರೆ ಈ ದುರ್ಘ‌ಟನೆ ನಡೆಯುತ್ತಿರಲಿಲ್ಲ ಎಂದು ಸಂಬಂಧಿಕರು ಹೇಳಿದ್ದಾರೆ. ಈ ಪ್ರಕರಣದ ಕುರಿತು ಕಾರ್ಯಾಚರಣೆ ನಡೆಸಿದ ಮುಂಬಯಿ ಆಗ್ರಿಪಾಡಾ ಪೊಲೀಸರು ಮೂವರು ವೈದ್ಯರನ್ನು ಬಂಧಿಸಿದ್ದಾರೆ.

Comments are closed.