ಮುಂಬೈ

ಚುನಾವಣಾ ಆಯೋಗದಿಂದ ಹಲವು ಕ್ರಮ: ಬಿಜೆಪಿ ಶಾಸಕನ ಬಳಿ 20000 ಕೋಟಿ ಪತ್ತೆಯಾಗಿದ್ದು ನಿಜಾನಾ..?

Pinterest LinkedIn Tumblr

ಮುಂಬೈ: 2019ರ ಲೋಕಸಭಾ ಚುನಾವಣೆ ಗೆಲ್ಲಲು ವಿವಿಧ ರಾಜಕೀಯ ಪಕ್ಷಗಳು ಮತದಾರರಿಗೆ ಹಣ ಹಂಚದಂತೆ ಹಾಗೂ ಇದಕ್ಕಾಗಿ ಕಪ್ಪು ಹಣ ಬಳಕೆ ಮಾಡದಂತೆ ತಡೆಯಲು ಚುನಾವಣಾ ಆಯೋಗ ಹಲವು ಕ್ರಮಗಳನ್ನು ಕೈಗೊಂಡಿದೆ. ಈ ಪ್ರಕಾರವಾಗಿ ಮಹಾರಾಷ್ಟ್ರದ ಬಿಜೆಪಿ ಶಾಸಕ ಸುಧೀರ್‌ ಗಡ್ಗಿಲ್‌ ಅವರ ಕಾರಲ್ಲಿ ಶೇಖರಿಸಿಡಲಾಗಿದ್ದ 20 ಸಾವಿರ ಕೋಟಿ ರು. ಅನ್ನು ಜಪ್ತಿ ಮಾಡಲಾಗಿದೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.

ಈ ಸುದ್ದಿ ಹಾಗೂ ಅಧಿಕಾರಿಗಳು ಕಾರಲ್ಲಿದ್ದ ಹಣ ಜಪ್ತಿ ಮಾಡಿದ ಫೋಟೋಗಳನ್ನು ‘ಕಾಂಗ್ರೆಸ್‌ ಸಮರ್ಥಕ್‌’ ಸೇರಿದಂತೆ ಫೇಸ್‌ಬುಕ್‌ ಪೇಜ್‌ಗಳಲ್ಲಿ ಹಂಚಿಕೊಳ್ಳಲಾಗಿದೆ. ಅಲ್ಲದೆ, ಈ ಸುದ್ದಿಯನ್ನು ಪ್ರಸಾರ ಮಾಡಲು ಯಾವುದೇ ಮಾಧ್ಯಮಗಳಿಗೆ ಧೈರ್ಯವಿಲ್ಲ. ಹಾಗಾಗಿ, ಇದನ್ನು ಹೆಚ್ಚು ಶೇರ್‌ ಮಾಡಿ ಎಂದು ಉಲ್ಲೇಖಿಸಲಾಗಿದೆ.

ಆದರೆ, ಈ ಬಗ್ಗೆ ಇಂಡಿಯಾ ಟುಡೇ ವಾಹಿನಿ ಪರಿಶೀಲನೆ ಇಳಿದಾಗ, ಈ ಫೋಟೋ 2016ರಲ್ಲಿ ನಡೆದ ಘಟನೆ ಎಂಬುದು ದೃಢವಾಗಿದೆ. 2016ರಲ್ಲಿ ಮಹಾರಾಷ್ಟ್ರದ ಒಸ್ಮನಾಬಾದ್‌ ಜಿಲ್ಲೆಯ ಚುನಾವಣಾಧಿಕಾರಿಗಳು 6 ಲಕ್ಷ ರು. ಅನ್ನು ವಶಕ್ಕೆ ಪಡೆದಿದ್ದ ಚಿತ್ರ ಇದಾಗಿದೆ ಎಂಬುದು ತಿಳಿದುಬಂದಿದೆ.

Comments are closed.