ಮುಂಬೈ

ನೀರವ್ ಮೋದಿ ಕಾರುಗಳು ಏ.18ಕ್ಕೆ ಹರಾಜು!

Pinterest LinkedIn Tumblr


ಮುಂಬೈ: ಭಾರತೀಯ ಬ್ಯಾಂಕ್‌ಗಳಿಗೆ ವಂಚಿಸಿ ವಿದೇಶದಲ್ಲಿ ಬಂಧನಕ್ಕೊಳಗಾಗಿರುವ ಉದ್ಯಮಿ ನೀರವ್ ಮೋದಿ ದಿನಂದಿಂದ ದಿನಕ್ಕೆ ಹಿನ್ನಡೆಯಾಗುತ್ತಿದೆ. ಬರೋಬ್ಬರಿ 13,000 ಕೋಟಿ ರೂಪಾಯಿ ವಸೂಲಿಗೆ ಇಡಿ(Enforcement Directorate) ಅಧಿಕಾರಿಗಳು ಮುಂದಾಗಿದ್ದಾರೆ. ಈಗಾಗಲೇ ನೀರವ್ ಮೋದಿಯಿಂದ ಜಪ್ತಿ ಮಾಡಿರುವ ಐಷಾರಾಮಿ ಕಾರುಗಳು ಹರಾಜಿಗಿಡಲಾಗಿದೆ.

ED ಅಧಿಕಾರಿಗಳು ಇದೀಗ ನೀರವ್ ಮೋದಿ 11 ಕಾರುಗಳನ್ನು ಹರಾಜಿಗೆ ಹಾಕಲು ಅನುಮತಿ ಪಡೆದಿದ್ದಾರೆ. ಮುಂಬೈ ನ್ಯಾಯಾಲಯದಿಂದ ಅನುಮತಿ ಪಡೆದಿರುವ ED ಅಧಿಕಾರಿಗಳು ನೀರವ್ ಮೋದಿಯ ದುಬಾರಿ ಕಾರುಗಳನ್ನು ಎಪ್ರಿಲ್ 18ರಂದು ಹರಾಜು ಮಾಡಲಿದ್ದಾರೆ. ಆನ್‌ಲೈನ್ ಮೂಲಕ ರಿಜಿಸ್ಟ್ರೇಶನ್ ಮಾಡಿಕೊಂಡು ಹರಾಜಿನಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗಿದೆ.

ರೋಲ್ಸ್ ರಾಯ್ಸ್ ಘೋಸ್ಟ್, ಪೋರ್ಶೆ ಪನಾಮೆರ, ಮರ್ಸಡೀಸ್ ಬೆಂಝ್ GLS 350 CDI, ಮರ್ಸಡೀಸ್ ಬೆಂಝ್ CLS-Class, ಟೊಯೊಟಾ ಫಾರ್ಚುನರ್ , ಹೊಂಡಾ CR-V,ಟೊಯೊಟಾ ಇನೋವಾ , ಮರ್ಸಡೀಸ್ ಬೆಂಝ್ ಸಿ ಕ್ಲಾಸ್ ಸೇರಿದಂತೆ 11 ಕಾರುಗಳನ್ನು ಪೊಲೀಸರು ಹರಾಜು ಮಾಡಲಿದ್ದಾರೆ. 11 ಕಾರುಗಳ ಜೊತೆಗೆ 173 ಪೈಟಿಂಗ್ಸ್ ಕೂಡ ಹರಾಜಾಗಲಿದೆ. ಹರಾಜಿನ ಒಟ್ಟು ಮೌಲ್ಯ ಸರಿಸುಮಾರು 57.72 ಕೋಟಿ ರೂಪಾಯಿ ಎಂದು ಪೊಲೀಸರು ಹೇಳಿದ್ದಾರೆ.

Comments are closed.