ಮುಂಬೈ

ಬಿಜೆಪಿ ಜೊತೆ ಮತ್ತೆ ಕೈ ಜೋಡಿಸುತ್ತಿರುವುದಕ್ಕೆ ಶಿವಸೇನಾ ಹೇಳಿದ್ದೇನು ಗೊತ್ತೇ?

Pinterest LinkedIn Tumblr

ಮುಂಬೈ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಜೊತೆ ಕೈ ಜೋಡಿಸುವ ವಿಚಾರವಾಗಿ ಮನ ಬಿಚ್ಚಿ ಮಾತನಾಡಿರುವ ಶಿವಸೇನಾ ಮುಖ್ಯಸ್ಥ ಉದ್ದವ್ ಠಾಕ್ರೆ ಬಿಜೆಪಿ ಈಗ ಮೈತ್ರಿಯನ್ನು ನೋಡುತ್ತಿರುವ ಮನೋಭಾವ ಬದಲಿಸಿಕೊಂಡಿದೆ ಎಂದು ಅಭಿಪ್ರಾಯಪಟ್ಟರು.

ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು ಮಂಗಳವಾರ ಸಾಯಂಕಾಲ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಜೊತೆಗೆ ಕೈ ಜೊಡಿಸುವುದಾಗಿ ಘೋಷಿಸಿದರು.ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ವಿಚಾರವಾಗಿ ಮಾತನಾಡುತ್ತಾ “ಅವರು ಈಗ ಮೈತ್ರಿ ಪಕ್ಷಗಳನ್ನು ನೋಡುವ ರೀತಿ ಬದಲಾಗಿದೆ. ಆದ್ದರಿಂದ ನಾನು ಈಗ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತಿರುವೆ” ಎಂದು ತಿಳಿಸಿದರು.

ಅಲ್ಲದೆ ವಿಧಾನ ಸಭೆಗೆ ಅತಿ ಹೆಚ್ಚು ಸದಸ್ಯರನ್ನು ಕಳಿಸುವ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನ ಎನ್ನುವ ಬಿಜೆಪಿ ಬೇಡಿಕೆಯನ್ನು ಅವರು ತಿರಸ್ಕರಿಸಿದರು.

“ನಾವು ಶಿವಸೇನಾದ ಮುಖ್ಯಮಂತ್ರಿಯನ್ನು ನೋಡಲು ಇಚ್ಚಿಸುತ್ತೇವೆ ಆದ್ದರಿಂದ ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತೇವೆ” ಎಂದು ತಿಳಿಸಿದರು.”ಈಗಾಗಲೇ ನಾವು ಒಪ್ಪಂದದಲ್ಲಿ ಗೆಲುವು ಸಾಧಿಸಿದ್ದೇವೆ.ಈಗ ನಾವು ನಿಜವಾದ ಯುದ್ದವಾಗಿರುವ ಚುನಾವಣೆಯನ್ನು ಗೆಲ್ಲಬೇಕಾಗಿದೆ”ಎಂದು ಉದ್ಧವ್ ಠಾಕ್ರೆ ತಿಳಿಸಿದರು.

Comments are closed.