ಕರ್ನಾಟಕ

ಲೋಕಸಭಾ ಚುನಾವಣೆ: ಸಾಮಾಜಿಕ ಜಾಲತಾಣ ನಿರ್ವಹಣೆಗೆ 14 ಸಾವಿರ ಬಿಜೆಪಿ ಯೋಧರ ಸೇನೆ

Pinterest LinkedIn Tumblr


ಬೆಂಗಳೂರು: ಲೋಕಸಭಾ ಚುನಾವಣೆ ಎದುರಾಗುತ್ತಿದ್ದಂತೆ ಸಿದ್ದತಾ ಕಾರ್ಯಗಳಿಗೆ ವೇಗ ನೀಡಿರುವ ಕಮಲ ಪಾಳೆಯ ಸುಮಾರು 14,000 ಸ್ವಯಂಸೇವಕರಿಗೆ ಲೋಕಸಭಾ ಕ್ಷೇತ್ರವಾರು ಪ್ರತ್ಯೇಕ ಸಭೆಗಳನ್ನು ನಡೆಸಿ ಸಾಮಾಜಿಕ ಜಾಲತಾಣ ನಿರ್ವಹಣೆ ಬಗ್ಗೆ ಮಾಹಿತಿ ನೀಡಿ ಪ್ರಚಾರಕ್ಕೆ ಸಜ್ಜುಗೊಳಿಸಲು ಅಣಿಯಾಗಿದೆ.

ಮಾರ್ಚ್‌ ಮೊದಲ ವಾರದಲ್ಲಿ ಲೋಕಸಭಾ ಕ್ಷೇತ್ರವಾರು ಸಾಮಾಜಿಕ ಜಾಲತಾಣ ಸ್ವಯಂಸೇವಕರ ಸಭೆಗಳನ್ನು ಆಯೋಜಿಸಲು ಸಿದಟಛಿತೆ ನಡೆದಿದೆ. ಕೇಂದ್ರ ಸರ್ಕಾರದ ಸಾಧನೆಗಳು, ಪ್ರಧಾನಿ ನರೇಂದ್ರ ಮೋದಿಯವರ ಕೊಡುಗೆ ಕುರಿತ ಸಂದೇಶಗಳನ್ನು ಪೋಸ್ಟ್‌ ಮಾಡುವ ಜತೆಗೆ ಅನ್ಯಪಕ್ಷಗಳ ಸಂದೇಶಗಳಿಗೆ ಪ್ರತಿ ಸಂದೇಶ, ಪ್ರತ್ಯುತ್ತರ ನೀಡುವ ಕಾರ್ಯದಲ್ಲೂ ಈ ಪಡೆ ತೊಡಗಿಸಿಕೊಳ್ಳಲಿದೆ.

ಇಂಟರ್‌ನೆಟ್‌ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಇತರೆ ಪ್ರಚಾರ ಮಾಧ್ಯಮಗಳ ಜತೆಗೆ ಸಾಮಾಜಿಕ ಜಾಲತಾಣಗಳನ್ನು ರಾಜ್ಯ ಬಿಜೆಪಿ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದೆ. ಸಾಮಾಜಿಕ ತಾಲತಾಣಗಳಲ್ಲಿ ಪ್ರಮುಖವಾದ ಫೇಸ್‌ಬುಕ್‌, ಟ್ವಿಟರ್‌ಗಳಲ್ಲಿ ಕಮಲ ಪಾಳೆಯದ ನಾಯಕರು, ಜನಪ್ರತಿನಿಧಿಗಳು, ಬೆಂಬಲಿಗರು, ಕಾರ್ಯ ಞಕರ್ತರು ಹೆಚ್ಚು ಸಕ್ರಿಯ ರಾಗಿದ್ದಾರೆ. ಇದಕ್ಕೆ ಸಾಮಾನ್ಯರ ಬೆಂಬಲವೂ ಸಿಗುತ್ತಿರುವುದು ಪಕ್ಷದ ಉತ್ಸಾಹವನ್ನು ಹೆಚ್ಚಿಸಿದೆ.

ಲೋಕಸಭಾ ಚುನಾವಣೆಗೂ ಸಕ್ರಿಯ: ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಠ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿತ್ತು. ಅದೇ ರೀತಿಯಲ್ಲಿ ಮುಂದಿನ ಲೋಕಸಭಾ ಚುನಾವಣೆಗೂ ಹೊಸ ತಲೆಮಾರಿನ ಮಾಧ್ಯಮವನ್ನು ದೊಡ್ಡ ಪ್ರಮಾಣದಲ್ಲಿ ಬಳಸಿಕೊಳ್ಳಲು ಮುಂದಾಗಿದೆ. ಇದಕ್ಕಾಗಿ ಲೋಕಸಭಾ ಕ್ಷೇತ್ರವಾರು ಸಾಮಾಜಿಕ ಜಾಲತಾಣ ಸ್ವಯಂಸೇವಕರಿಗೆ ಮಾರ್ಗದರ್ಶನ ನೀಡಲು ಕೆಲ ದಿನಗಳ ಹಿಂದೆ ಚರ್ಚಿಸಿನಿರ್ಧರಿಸಲಾಗಿದೆ. ರಾಜ್ಯ ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಪ್ರಭಾರಿ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಈ ಪ್ರಕ್ರಿಯೆ ನಡೆಯಲಿದೆ.

ಪ್ರತಿ ಕ್ಷೇತ್ರದಲ್ಲಿ 500 ಮಂದಿ: ಈಗಾಗಲೇ ಲೋಕಸಭಾ ಕ್ಷೇತ್ರವಾರು ಸಾಮಾಜಿಕ ಜಾಲತಾಣ ಉಸ್ತುವಾರಿ ಹಾಗೂ ಸಹ ಉಸ್ತುವಾರಿಗಳನ್ನು ನಿಯೋಜಿಸಲಾಗಿದೆ.

ಆಯಾ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು 50ರಿ ಂದ 100 ಸ್ವಯಂಸೇವಕರಂತೆ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 500 ಮಂದಿ ಸಾಮಾಜಿಕ ಜಾಲತಾಣ ಸ್ವಯಂಸೇವಕರನ್ನು ಒಟ್ಟುಗೂಡಿಸಿ ಸಭೆ ನಡೆಸಲು ನಿರ್ಧರಿಸಿದೆ. ಈ ಸಭೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಯಾವ ಸಂದೇಶ, ವಿಚಾರಗಳನ್ನು ಪೋಸ್ಟ್‌ ಮಾಡಬೇಕು, ಕಂಟೆಂಟ್‌ ಸಿದಟಛಿಪಡಿಸುವುದು, ಮಾಹಿತಿ ಶೇರ್‌ ಮಾಡುವುದು ಸೇರಿದಂತೆ ಇತರೆ ಅಗತ್ಯ ಮಾಹಿತಿಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ಮುಂಬರುವ ಚುನಾವಣೆ ಸಂದರ್ಭದಲ್ಲಿ ಈ ಮಾಧ್ಯಮವನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿಸಲಾಗುತ್ತದೆ. ಮಾರ್ಚ್‌ ಮೊದಲ ವಾರದಲ್ಲಿ ಸಭೆ ಆರಂಭಿಸಲು ನಿರ್ಧರಿಸಿದ್ದು, ತ್ವರಿತವಾಗಿ ಕ್ಷೇತ್ರವಾರು ಸಭೆಗಳನ್ನು ಆಯೋಜಿಸಿ ಮಾರ್ಗದರ್ಶನ ನೀಡಲು ಯೋಜನೆ ಸಿದಟಛಿಪಡಿಸಿದೆ.

ಅನ್ಯ ಪಕ್ಷಗಳಿಗೂ ಪ್ರತ್ಯುತ್ತರ: ಕೇಂದ್ರ ಸರ್ಕಾರದ ಜನಪ್ರಿಯ ಯೋಜನೆಗಳು, ಅರ್ಹ ಫ‌ಲಾನುಭವಿಗಳಿಗೆ ಸಿಗುವ ಸೌಲಭ್ಯ, ಫ‌ಲಾನುಭವಿಗಳಿಗೆ ಸಿಕ್ಕಿರುವ ಸೌಕರ್ಯ ಇತರೆ ಮಾಹಿತಿಯನ್ನು ಈ ಸ್ವಯಂಸೇವಕರು ಶೇರ್‌ ಮಾಡಲಿದ್ದಾರೆ. ಜತೆಗೆ ಸಂದರ್ಭ, ಪ್ರಚಲಿತ ಘಟನಾವಳಿ, ರಾಜಕೀಯ ಬೆಳವಣಿಗೆ ಆಧರಿಸಿ ಅನ್ಯ ಪಕ್ಷಗಳು ಹಾಗೂ ಆ ಪಕ್ಷಗಳ ನಾಯಕರಿಗೆ ಪ್ರತ್ಯುತ್ತರ, ಟಾಂಗ್‌ ನೀಡುವ ಕಾರ್ಯದಲ್ಲೂ ತೊಡಗಿಸಿಕೊಳ್ಳಲಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳಿಗೂ ಸಾಮಾಜಿಕ ಜಾಲತಾಣ ಸಂಚಾಲಕರು ಮತ್ತು ಸಹ ಸಂಚಾಲಕರ ನೇಮಕವಾಗಿದೆ. ಮತ್ತೂಮ್ಮೆ ಮೋದಿಯವರನ್ನು ಪ್ರಧಾನಿ ಮಾಡಬೇಕೆಂಬ ಗುರಿಯೊಂದಿಗೆ ಕೇಂದ್ರದ ಯೋಜನೆಗಳ ಬಗ್ಗೆ ಜನತೆಗೆ ತಿಳಿಸುವುದು. ನಂತರ ಲೋಕಸಭಾ ಚುನಾವಣೆಗೆ ಸಂಬಂಧಪಟ್ಟಂತೆಯೂ ಸಾಮಾಜಿಕ ಜಾಲತಾಣ ಸ್ವಯಂಸೇವಕರು ಕಾರ್ಯ ನಿರ್ವಹಿಸಲಿದ್ದಾರೆ.
● ಬಾಲಾಜಿ ಶ್ರೀನಿವಾಸ್‌, ಬಿಜೆಪಿ ಕರ್ನಾಟಕ ಸಾಮಾಜಿಕ ಜಾಲತಾಣ
ಪ್ರಕೋಷ್ಠದ ಸಂಚಾಲಕರು

Comments are closed.