ಮುಂಬೈ

ದಿವಾಳಿಯಂಚಿಗೆ ಬಂದು ತಲುಪಿದ ಅನಿಲ್ ಅಂಬಾನಿ|

Pinterest LinkedIn Tumblr


ಮುಂಬೈ: ಅನಿಲ್ ಅಂಬಾನಿ ಒಡೆತನದ ರೆಲ್.ಕಾಂ ಸಂಸ್ಥೆ ದಿವಾಳಿ ಅಂಚಿಗೆ ಬಂದು ನಿಂತಿದೆ. ಮಾಡಿದ ಸಾಲ ತೀರಿಸಲು ಅನಿಲ್ ಮೇಲೆ ಒತ್ತಡ ಹೆಚ್ಚಾಗುತ್ತಿದೆ.

ಈ ಹಿನ್ನೆಲೆಯಲ್ಲಿ ತಮ್ಮ ಸಂಸ್ಥೆಗೆ ಸೇರಿದ ಎಲ್ಲಾ ಆಸ್ತಿಯನ್ನು ಮಾರಲು ಮುಂದಾಗಿರುವ ಅನಿಲ್ ಅಂಬಾನಿ, ನ್ಯಾಶನಲ್ ಕಂಪನಿ ಲಾ ಟ್ರಿಬ್ಯುನಲ್ ಮೊರೆ ಹೋಗಿದ್ದಾರೆ.

ಅನಿಲ್ ಅಂಬಾನಿ ಒಟ್ಟು 46,000 ಕೋಟಿ ರೂ. ಸಾಲ ನೀಡಬೇಕಾಗಿದ್ದು, ಇದನ್ನು 270 ದಿನದಲ್ಲಿ ತೀರಿಸಬೇಕಾಗಿದೆ. ಆದರೆ ಕಳೆದ ಒಂದುವರೆ ವರ್ಷದಿಂದ ಸಾಲ ತೀರಿಸಲು ಸಾಧ್ಯವಾಗದೆ ಪರದಾಡುತ್ತಿರುವ ಅನಿಲ್, ಇದೀಗ ಕಂಪನಿಗೆ ಸೇರಿದ ಆಸ್ತಿಯನ್ನು ಮಾರಲು ಮುಂದಾಗಿದ್ದಾರೆ.

ಅನಿಲ್ ಈ ಮೊದಲು ರೆಲ್.ಕಾಂ ಸ್ಪೆಕ್ಟ್ರಮ್ ಮಾರಲು ಪ್ರಯತ್ನಿಸದರಾದರೂ, ಅದೂ ಕೂಡ ಕೈಗೂಡಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಶನಲ್ ಕಂಪನಿ ಲಾ ಟ್ರಿಬ್ಯುನಲ್ ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಲು ಮುಂದಾಗಲಿದೆ ಎನ್ನಲಾಗಿದೆ.

ಈ ಮಧ್ಯೆ ಕಂಪನಿಯ ಷೇರು ಖರೀದಿದಾರರಿಗೆ ನೀಡಬೇಕಾದ ಮೊತ್ತ, ಸಾಲಗಾರರಿಗೆ ಪಾವತಿಸಬೇಕಾದ ಒಟ್ಟು ಮೊತ್ತದ ಕುರಿತು ಪರಿಶೀಲನೆ ನಡೆಸಿ ಆಸ್ತಿ ಮಾರಾಟದ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

Comments are closed.