ಮುಂಬೈ

ಸೊಹ್ರಾಬುದ್ದಿನ್​ ಶೇಕ್ ಎನ್​ಕೌಂಟರ್​ ಪ್ರಕರಣ; 22 ಆರೋಪಿಗಳ ಖುಲಾಸೆ, ಮುಂಬೈ ವಿಶೇಷ ಸಿಬಿಐ ಕೋರ್ಟ್ ತೀರ್ಪು

Pinterest LinkedIn Tumblr

ಮುಂಬೈ: ದೇಶದಾದ್ಯಂತ ಭಾರೀ ಸುದ್ದಿಗೆ ಗ್ರಾಸವಾಗಿದ್ದ ಸೊಹ್ರಾಬುದ್ದೀನ್ ಶೇಕ್ ಮತ್ತು ತುಳಸಿರಾಮ್ ಪ್ರಜಾಪತಿ ಎನ್’ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ತೀರ್ಪು ನೀಡಿರುವ ಸಿಬಿಐ ವಿಶೇಷ ನ್ಯಾಯಾಲಯ, ಎಲ್ಲಾ 22 ಆರೋಪಿಗಳನ್ನು ಖುಲಾಸೆಗೊಳಿಸಿದೆ.

ಸೂಕ್ತ ಸಾಕ್ಷ್ಯಧಾರಗಳು ಸಿಗದ ಹಿನ್ನಲೆ ಈ ಎನ್​ಕೌಂಟರ್​ ಅನ್ನು ಕೊಲೆ ಹಾಗೂ ಪಿತೂರಿ ಎಂದು ಹೇಳಲು ಸಾಧ್ಯವಿಲ್ಲ ಎಂದು ಸಿಬಿಐ ವಿಶೇಷ ನ್ಯಾ. ಎಸ್​ಜೆ ಶರ್ಮಾ ತೀರ್ಪು ನೀಡಿದ್ದಾರೆ. ಅಷ್ಟೇ ಅಲ್ಲದೇ ಸಾಂದರ್ಭಿಕ ಸಾಕ್ಷಿಗಳನ್ನು ಗಣನೆಗೆ ಪರಿಗಣಿಸಲು ಸಾಧ್ಯವಿಲ್ಲ ಎಂದು ಕೂಡ ತಿಳಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಸಿಬ್ಬಂದಿಗಳು ಹಾಗೂ ನ್ಯಾಯಾಲಯ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. 210 ಸಾಕ್ಷ್ಯಾಧಾರಗಳು ನ್ಯಾಯಾಲಯದ ಮುಂದೆ ಹಾಜರಾದರು ಅವರು ಸರಿಯಾದ ಮಾಹಿತಿಯನ್ನು ಕೋರ್ಟ್​ ಮುಂದೆ ಹಾಜರುಪಡಿಸಿಲ್ಲ. ಅಲ್ಲದೇ ಅವರು ಸಾಮಾಧಾನಕರ ಎನ್ನುವಂತಹ ಮಾಹಿತಿಯನ್ನು ನ್ಯಾಯಾಲಯದ​ ಮುಂದೆ ತಿಳಿಸುವಲ್ಲಿ ವಿಫಲರಾಗಿದ್ದಾರೆ ಎಂದಿದ್ದಾರೆ.

ಇನ್ನು ಪ್ರಕರಣದಲ್ಲಿ ಬಹುತೇಕ ಆರೋಪಿಗಳು ಗುಜರಾತ್​ ಹಾಗೂ ರಾಜಸ್ಥಾನದ ಕಿರಿಯಮಟ್ಟದ ಅಧಿಕಾರಿಗಳಾಗಿದ್ದಾರೆ.

ಇದಕ್ಕೆ ಮುಂಚೆಯೇ ಈ ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ ಸಾಕ್ಷಾಧಾರ ಸಿಗದ ಹಿನ್ನಲೆ ವಜಾಗೊಳಿಸಿತು. ಇನ್ನು ಈ ಪ್ರಕರಣದಲ್ಲಿ ಗುಜರಾತ್​ ಮಾಜಿ ಗೃಹ ಸಚಿವ ಅಮಿತ್​ ಷಾ, ರಾಜಸ್ಥಾನ ಗೃಹ ಸಚಿವ ಗುಲಾಬ್​ಚಂದ್​ ಕಟಾರಿಯಾ, ಮಾಜಿ ಗುಜರಾತ್​ ಪೊಲೀಸ್​ ಮುಖ್ಯಸ್ಥ ಪಿಸಿ ಪಾಂಡೆ, ಹಾಗೂ ಗುಜರಾತ್​ ಹಿರಿಯ ಅಧಿಕಾರಿ ಡಿಜಿ ವನ್ಜಾರ್​ ಹೆಸರು ಕೇಳಿ ಬಂದಿತ್ತು.

ಗುಜರಾತ್ ಪೋಲೀಸರು ನವೆಂಬರ್ 2005 ರಲ್ಲಿ ನಡೆಸಿದ್ದ ಎನ್ ಕೌಂಟರ್ ನಲ್ಲಿ ಶಂಕಿತ ಉಗ್ರ ಸೋಹ್ರಾಬುದ್ದೀನ್ ಶೇಖ್ ಮತ್ತು ಅವರ ಪತ್ನಿ ಕೌಸರ್ ಬೀ ಹತ್ಯೆಯಾಗಿದ್ದರರು. ಇನ್ನು 2006ರಲ್ಲಿ ಸೊಹ್ರಾಬುದ್ದಿನ್​ ಸಹಚರ ತುಳಸಿರಾಮ್​ ಪ್ರಜಾಪತಿಯನ್ನು ಎನ್​ಕೌಂಟರ್​ ಮಾಡಲಾಗಿತ್ತು. ಈ ಎರಡು ಎನ್​ಕೌಂಟರ್​ಗಳು ನಕಲಿ ಎಂಬ ಆರೋಪ ಕೇಳಿ ಬಂದಿತು.

Comments are closed.