ಮುಂಬೈ

ಹಬ್ಬಕ್ಕೆ ಭಾರೀ ಬೇಡಿಕೆ ಹಿನ್ನೆಲೆ ಚಿನ್ನದ ದರ ಏರಿಕೆ

Pinterest LinkedIn Tumblr


ಮುಂಬಯಿ : ದೇಶಾದ್ಯಂತ ನವರಾತ್ರಿ, ದೀಪಾವಳಿ ಹಬ್ಬದ ಸಂಭ್ರಮದ ವಾತಾವರಣ ಸೃಷ್ಟಿಯಾಗಿದೆ. ಇದರ ಜತೆಗೆ ಬಂಗಾರದ ಬೇಡಿಕೆಯೂ ಹೆಚ್ಚಿದೆ. ಹೀಗಾಗಿ ದರ ಕೂಡ ಕಳೆದ ಮೂರು ತಿಂಗಳಿನಲ್ಲಿ ಗರಿಷ್ಠ ಮಟ್ಟಕ್ಕೇರಿದೆ. ಡಾಲರ್‌ ಎದುರು ರೂಪಾಯಿ ದುರ್ಬಲವಾಗಿರುವುದು ಕೂಡ ಪ್ರಭಾವ ಬೀರಿದೆ.

ನವೆಂಬರ್‌ 5ರಂದು ಧನ್‌ತೇರಾಸ್‌ ದಿನವಾಗಿದ್ದು, ಚಿನ್ನ ಖರೀದಿಸಲು ಪ್ರಶಸ್ತ ದಿನ ಎಂದು ಪರಿಗಣಿಸಲಾಗಿದೆ.

ಈ ಸಲ ದೀಪಾವಳಿಗೆ 2 ದಿನ ಮುನ್ನ ಧನ್‌ತೇರಾಸ್‌ ಬಂದಿದ್ದು, ಸ್ವರ್ಣದ ಬೇಡಿಕೆ ಹೆಚ್ಚಿದೆ. ಕಳೆದ ವರ್ಷಗಳಲ್ಲಿ ಅಕ್ಟೋಬರ್‌-ಡಿಸೆಂಬರ್‌ ಅವಧಿಯಲ್ಲಿ ಸರಾಸರಿ 240 ಟನ್‌ ಬಂಗಾರವನ್ನು ಭಾರತೀಯರು ಖರೀದಿಸಿದ್ದರು.

ಬೆಂಗಳೂರಿನಲ್ಲಿ ಸ್ಟ್ಯಾಂಡರ್ಡ್‌ ಚಿನ್ನದ ದರ ಬುಧವಾರ ಪ್ರತಿ 10 ಗ್ರಾಮ್‌ಗೆ 32,450 ರೂ. ಹಾಗೂ ಆಭರಣ ಬಂಗಾರದ ದರ 10 ಗ್ರಾಮ್‌ಗೆ 30,670 ರೂ. ದಾಖಲಾಗಿತ್ತು.

ಈ ವರ್ಷ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಏರಿಸಿರುವುದರಿಂದ ಅವರ ಖರೀದಿ ಸಾಮರ್ಥ್ಯ‌ ಕೂಡ ಹೆಚ್ಚಲಿದೆ. ಹೀಗಾಗಿ ಬಂಗಾರದ ಬೇಡಿಕೆ ಕೂಡ ವೃದ್ಧಿಸಲು ಕಾರಣಗಳಲ್ಲೊಂದಾಗಲಿದೆ ಎನ್ನುತ್ತಾರೆ ಚಿನಿವಾರಪೇಟೆಯ ವಿಶ್ಲೇಷಕರು.

Comments are closed.