ಮುಂಬೈ

ಆರ್ ಬಿಐ ಬಡ್ಡಿದರದಲ್ಲಿ ಯಥಾ ಸ್ಥಿತಿ: ಈ ಕುರಿತು ಇನ್ನೊಂದಿಷ್ಟು ಮಾಹಿತಿ

Pinterest LinkedIn Tumblr


ಮುಂಬೈ: ಅಮೆರಿಕದಲ್ಲಿ ಹೆಚ್ಚುತ್ತಿರುವ ಫೆಡರಲ್ ಬಡ್ಡಿ ದರ, ಜಾಗತಿಕ ಆರ್ಥಿಕ ಅಸ್ಥಿರತೆಯ ನಡುವೆಯೂ ಆರ್ ಬಿಐ ತನ್ನ ಬಡ್ಡಿ ದರದಲ್ಲಿ ಯಥಾ ಸ್ಥಿತಿ ಕಾಯ್ದುಕೊಂಡಿರುವುದನ್ನು ಆರ್ಥಿಕ ತಜ್ಞರು ಸ್ವಾಗತಿಸಿದ್ದು, ರಿಯಲ್ ಎಸ್ಟೇಟ್ ಕ್ಷೇತ್ರದ ಪುನಶ್ಚೇತನಕ್ಕೆ ಅಗತ್ಯವಿದ್ದ ಕ್ರಮ ಎಂದು ಬಣ್ಣಿಸಿದ್ದಾರೆ.
ಸೆ.05 ರಂದು ಆರ್ ಬಿಐ ರೆಪೋ ದರ ಮತ್ತು ರಿವರ್ಸ್ ರೆಪೋ ದರಗಳನ್ನು ಪ್ರಕಟಿಸಿದ್ದು, ಯಾವುದೇ ಬದಲಾವಣೆ ಮಾಡದೇ ಇರಲು ನಿರ್ಧರಿಸಿರುವುದನ್ನು ಘೋಷಿಸಿತ್ತು. ಆರ್ ಬಿಐ ನ ಈ ಕ್ರಮದಿಂದಾಗಿ ಹೆಚ್ಚು ಲಾಭ ಪಡೆಯುವವರು ಗೃಹ ಖರೀದಿದಾರರು. ಕಳೆದ ಆರು ತಿಂಗಳುಗಳಿಂದ ರಿಯಲ್ ಎಸ್ಟೇಟ್ ಕ್ಷೇತ್ರ ಚೇತರಿಕೆಯ ಲಕ್ಷಣಗಳನ್ನು ತೋರುತ್ತಿದ್ದು, ಇಂತಹ ಸಂದರ್ಭದಲ್ಲಿ ಆರ್ ಬಿಐ ತನ್ನ ವಿತ್ತೀಯ ನೀತಿ ಪ್ರಕಟಿಸಿ ರೆಪೋ ದರವನ್ನು ಯಥಾಸ್ಥಿತಿ ಮುಂದುವರೆಸುವುದಾಗಿ ಘೋಷಿಸಿರುವುದು ಹೊಸದಾಗಿ ಗೃಹ ಖರೀದಿದಾರರಿಗೆ ಸಂತಸ ಮೂಡಿಸಿದ್ದು ರಿಯಲ್ ಎಸ್ಟೇಟ್ ಕ್ಷೇತ್ರ ಮತ್ತಷ್ಟು ಚೇತರಿಕೆ ಕಾಣಲು ಸಹಕಾರಿಯಾಗಿದೆ. ರೆಪೋ ದರ ಬದಲಾವಣೆಯಾಗದೇ ಇರುವುದು ಸ್ಥಳೀಯ ಬ್ಯಾಂಕ್ ಗಳಲ್ಲಿ ನೀಡುವ ಗೃಹ ಖರೀದಿ ಸಾಲದ ಮೇಲಿನ ಬಡ್ಡಿ ದರದ ಮೇಲೂ ಪರಿಣಾಮ ಬೀರಲಿದೆ. ದೇಶದಲ್ಲಿ ಈಗ ಗೃಹ, ನಿವೇಶನ ಬೆಲೆ ಗಣನೀಯವಾಗಿ ಕಡಿಮೆ ಇದ್ದು, ಆರ್ ಬಿಐ ರೆಪೋ ದರದಲ್ಲಿ ಯಾವುದೇ ಏರಿಕೆ ಮಾಡದೇ ಇರುವುದು ಮಾರುಕಟ್ಟೆಯಲ್ಲಿ ಜನರ ಕೊಳ್ಳುವ ಭಾವನೆಗಳ ಮೇಲೆಯೂ ಪರಿಣಾಮ ಬೀರಲಿದೆ.
ಈ ನಡುವೆ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವುದು ಭಾರತದಲ್ಲಿ ಗೃಹ, ನಿವೇಷನ ಕೊಳ್ಳುವುದಕ್ಕೆ ಎನ್ ಆರ್ ಐ ಗಳನ್ನು ಆಕರ್ಷಿಸುವ ಸಾಧ್ಯತೆ ಇದೆ ಎಂದ್ಲು ವಿಶ್ಲೇಷಿಸಲಾಗುತ್ತಿದೆ. ಒಂದು ವೇಳೆ ರೆಪೋ ದರ ಏರಿಕೆಯಾಗಿದ್ದಲ್ಲಿ ಬ್ಯಾಂಕ್ ಗಳಲ್ಲಿ ನೀಡುವ ಸಾಲದ ಮೇಲಿನ ಬಡ್ಡಿ ದರ (ಇಎಂಐ ದರ) ಗಳೂ ಏರಿಕೆಯಾಗುತ್ತಿದ್ದವು. ಆಗ ಗೃಹ ಖರೀದಿದಾರರ ಭಾವನೆಗಳು ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತಿದ್ದವು. ಹೌಸ್ ಆಫ್ ಹರಿನಂದನಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ಸುರೇಂದ್ರ ಹರಿನಂದನಿ ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆ ರೆಪೋ ದರವನ್ನು ಯಥಾಸ್ಥಿತಿ ಮುಂದುವರೆಸುವ ಆರ್ ಬಿಐ ನ ನಿರ್ಧಾರ ಗೃಹ ಖರೀದಿದಾರರು ಹಾಗೂ ಡೆವಲಪರ್ ಗಳಿಗೆ ಸಂತಸ ಉಂಟು ಮಾಡಿದೆ.

Comments are closed.