ಮುಂಬೈ

ಮೋದಿ ಸರ್ಕಾರದ ಪರ ಮತಚಲಾಯಿಸುವಂತೆ ಸೂಚಿಸಿಲ್ಲ: ಶಿವಸೇನೆಯ ಉದ್ದವ್​ ಠಾಕ್ರೆ

Pinterest LinkedIn Tumblr


ನವದೆಹಲಿ: ಸಂಸತ್​ನಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿ ಮತದಾನ ನಡೆದ ಬಳಿಕ ಈ ಕುರಿತು ಶಿವಸೇನಾ ಮುಖ್ಯಸ್ಥ ಉದ್ಧವ್​ ಠಾಕ್ರೆ ಪ್ರತಿಕ್ರಿಯಿಸಿದ್ಧಾರೆ. ಈ ವೇಳೆ ನಾನು ಮೋದಿ ಸರ್ಕಾರದ ಪರ ಮತಚಲಾಯಿಸುವಂತೆ ಸೂಚಿಸಿಲ್ಲ ಎಂದು ಉದ್ದವ್​ ಠಾಕ್ರೆ ಸ್ಪಷ್ಟಪಡಿಸಿದ್ಧಾರೆ.

ಈ ಸಂಬಂಧ ನ್ಯೂಸ್​-18 ಜತೆಗೆ ಮಾತಾಡಿದ ಶಿವಸೇನಾ ಮುಖ್ಯಸ್ಥ ಉದ್ಧವ್​ ಠಾಕ್ರೆ ಅವರು, ನಾವು ಈ ಹಿಂದೆ ಬಹಿರಂಗವಾಗಿ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರವನ್ನು ಬೆಂಬಲಿಸಿದ್ದೆವು. ಅದೇ ರೀತಿಯಲ್ಲಿಯೇ ಈಗ ಬಿಜೆಪಿಯನ್ನು ಬಹಿರಂಗವಾಗಿ ವಿರೋಧಿಸುತ್ತಿದ್ದೇವೆ. ನಾವು ಪ್ರಧಾನಿ ಸರ್ಕಾರದ ಪರ ಮತಚಲಾಯಿಸಿಲ್ಲ ಎಂದು ಠಾಕ್ರೆ ಹೇಳಿದ್ದಾರೆ.

ಶುಕ್ರವಾರದವರೆಗೂ ಬಿಜೆಪಿ ಮತ್ತು ಶಿವಸೇನಾ ನಡುವಿನ ಮೈತ್ರಿ ಸಂಬಂಧ ಜೀವಂತವಾಗಿತ್ತು ಎನ್ನಲಾಗಿತ್ತು. ಆದರೆ, ಉದ್ಧವ್​ ಠಾಕ್ರೆ ತಮ್ಮ ಪಕ್ಷದ 18 ಜನ ಸಂಸದರಿಗೆ ಬಿಜೆಪಿಗೆ ಬೆಂಬಲಿ ನೀಡದಂತೆ ಸೂಚಿಸಿದ್ದರು. ಬಳಿಕ ಶುಕ್ರವಾರದಂದು ಅವಿಶ್ವಾಸ ನಿರ್ಣಯ ಪರ-ವಿರೋಧ ಮತಯಾಚನೆ ವೇಳೆ ಅಧಿಕೃತವಾಗಿ ಶಿವಸೇನಾ ಮೋದಿಪರ ಮತಚಲಾಯಿಸಿದೇ ನಿರ್ಣಯ ತೆಗೆದುಕೊಂಡಿದ್ದು, ಅಧಿಕೃತವಾಗಿ ಬಿಜೆಪಿ ಜತೆಗಿನ ಸಂಬಂಧ ಮುರಿದು ಬಿದ್ದಿದೆ.

ಇನ್ನು ಸಂಸತ್​ನಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅವರು, ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಒಂದು ಗಂಟೆಗಳ ಕಾಲ ವಾಗ್ದಾಳಿ ನಡೆಸಿದ್ದರು. ವಾಗ್ದಾಳಿ ಬಳಿಕ ರಾಹುಲ್​ ಗಾಂಧಿ ಪ್ರೀತಿಯಿಂದ ಪ್ರಧಾನಿಗಳನ್ನು ಅಪ್ಪಿಕೊಂಡರು. ಈ ವಿಚಾರ ತಿಳಿದ ಕೂಡಲೇ ರಾಹುಲ್​ ಜೀ ನಾವು ಗೆದ್ದೆವು ಎಂದು ಹೊಗಳಿದೆ ಎಂಬ ಮಾತನ್ನು ಠಾಕ್ರೆ ಬಿಚ್ಚಿಟ್ಟರು. ​

ಇನ್ನು ಮಹತ್ವದ ಅವಿಶ್ವಾಸ ಮತಯಾಚನೆ ಹಿನ್ನೆಲೆಯಲ್ಲಿ, ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆಗೆ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಹಲವು ಬಾರಿ ಕರೆ ಮಾಡಿದ್ದಾರೆ. ಶಿವಸೇನಾ ಬಿಜೆಪಿ ನೇತೃತ್ವದ ಎನ್‌ಡಿಏ ಮೈತ್ರಿಕೂಟದ ಭಾಗವಾಗಿದೆ. ಕೇಂದ್ರ ಸಂಪುಟದಲ್ಲಿ ಶಿವಸೇನಾದ ಮೂರು ಸಂಸದರು ಸಚಿವರಾಗಿದ್ದಾರೆ. ಹೀಗಾಗಿ ಬೆಂಬಲ ನೀಡುವಂತೆ ಕೋರಿ ಶಾ ಕರೆ ಮಾಡಿದ್ಧಾರೆ.

ಆದರೆ, ಶಿವಸೇನಾ ಮುಖ್ಯಸ್ಥ ಉದ್ಧವ್​ ಠಾಕ್ರೆ ಅವರ ಕರೆಗಳಿಗೆ ಪ್ರಕತಿಕ್ರಿಯಿಸಿಲ್ಲ. ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನ ಶಿವಸೇನಾದ ಮುನಿಸನ್ನು ಶಮನ ಮಾಡುವ ನಿಟ್ಟಿನಲ್ಲಿ ಅಮಿ‌ತ್‌ ಶಾ ಇತ್ತೀಚೆಗಷ್ಟೇ ಉದ್ಧವ್‌ ಠಾಕ್ರೆ ನಿವಾಸಕ್ಕೆ ಭೇಟಿ ನೀಡಿದ್ದರು. ಈಗ ಅವಿಶ್ವಾಸ ಮತಯಾಚನೆಯಲ್ಲಿ ಕೇಂದ್ರ ಸರಕಾರಕ್ಕೆ ಬೆಂಬಲ ನೀಡಲು ಅಮಿತ್‌ ಶಾ ಠಾಕ್ರೆಗೆ ಕೋರಿದ್ದಾರೆ ಎಂದು ಶಿವಸೇನಾ ಹಿರಿಯ ನಾಯಕರೊಬ್ಬರು ಹೇಳಿದ್ದರು.

Comments are closed.