ಮನೋರಂಜನೆ

ನವಾಜುದ್ದೀನ್ ಸಿದ್ದಿಕಿ ಈಗ ಬಾಳಾ ಠಾಕ್ರೆ

Pinterest LinkedIn Tumblr


ಹೊಸದಿಲ್ಲಿ : ಶಿವಸೇನೆಯ ಪರಮೋಚ್ಚ ದಿವಂಗತ ನಾಯಕ ಬಾಳಾ ಸಾಹೇಬ್‌ ಠಾಕರೆ ಅವರ ಬಯೋಪಿಕ್‌ ನಲ್ಲಿ ಠಾಕರೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಹಿಂದಿ ಚಿತ್ರರಂಗದ ಪ್ರತಿಭಾವಂತ ನಟ ನವಾಜುದ್ದೀನ್‌ ಸಿದ್ದಿಕಿ ಅವರ ಠಾಕರೆ ಮೇಕಪ್‌ ಎಲ್ಲರನ್ನೂ ನಿಬ್ಬೆರಗಾಗಿಸಿದೆ. ಸಿದ್ದಿಕಿ ಅವರು ಥೇಟ್‌ ಠಾಕರೆಯಾಗಿ ರೂಪಾಂತರಗೊಂಡಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಸಂಪೂರ್ಣವಾಗಿ ಬಾಳಾ ಸಾಹೇಬ್‌ ಠಾಕರೆ ಅವರನ್ನು ಹೋಲುವ ನವಾಜುದ್ದೀನ್‌ ಸಿದ್ದಿಕಿ ಅವರ ಫೋಟೋಗಳನ್ನು ಖ್ಯಾತ ಚಿತ್ರ ವಿಮರ್ಶಕ ಮತ್ತು ವಾಣಿಜ್ಯ ವಿಶ್ಲೇಷಕ ತರಣ್‌ ಆದರ್ಶ್‌ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ತರಣ್‌ ಹೀಗೆ ಬರೆದಿದ್ದಾರೆ : ಕಾರ್ನಿವಾಲ್‌ ಮೋಷನ್‌ ಪಿಕ್ಚರ್‌ ಸಂಸ್ಥೆ ಸಂಜಯ್‌ ರಾವತ್‌ ಜತೆ ಸೇರಿಕೊಂಡು “ಠಾಕರೆ’ ಚಿತ್ರವನ್ನು ನಿರ್ಮಿಸುತ್ತಿದೆ. ನವಾಜುದ್ದೀನ್‌ ಸಿದ್ದಿಕಿ ನಟನೆಯ ಈ ಚಿತ್ರವೊನ್ನು ಅಭಿಜಿತ್‌ ಪಾನ್ಸೆ ನಿರ್ದೇಶಿಸುತ್ತಿದ್ದಾರೆ; ಸಂಜಯ್‌ ರಾವತ್‌ ಮತ್ತು ಡಾ. ಶ್ರೀಕಾಂತ್‌ ಭಾಸಿ ನಿರ್ಮಾಪಕರಾಗಿದ್ದಾರೆ. ಚಿತ್ರವನ್ನು 2019ರ ಜನವರಿ 23ರಂದು, ಬಾಳಾಸಾಹೇಬ್‌ ಅವರ ಜನ್ಮ ದಿನದಂದು ಬಿಡುಗಡೆ ಮಾಡಲಾಗುತ್ತದೆ.

ನವಾಜುದ್ದೀನ್‌ ಅವರು ಈ ಚಿತ್ರದಲ್ಲಿ ಸಂಪೂರ್ಣವಾಗಿ ಠಾಕರೆ ಯಾಗಿ ರೂಪಾಂತರಗೊಂಡಿದ್ದಾರೆ. ಈ ಬಯೋಪಿಕ್‌ನ ಸ್ಟೋರಿ ಲೈನ್‌ ಬರೆದಿರುವವರು ರಾಜ್ಯಸಭಾ ಸದಸ್ಯ ಮತ್ತು ಶಿವಸೇನೆ ವಕ್ತಾರ ಸಂಜಯ್‌ ರಾವತ್‌.

ಚಿತ್ರದ ಟೀಸರನ್ನು ಕಳೆದ ವರ್ಷ ಡಿಸೆಂಬರ್‌ನಲ್ಲೇ ಶಿವಸೇನೆಯ ಮುಖ್ಯಸ್ಥ ಉದ್ಧವ್‌ ಠಾಕರೆ ಮತ್ತು ಬಿಗ್‌ ಬಿ ಅಮಿತಾಭ್‌ ಬಚ್ಚನ್‌ ಅವರ ಉಪಸ್ಥಿತಿಯಲ್ಲಿ ಬಿಡಗಡೆಗೊಳಿಸಲಾಗಿತ್ತು.

Comments are closed.