ರಾಷ್ಟ್ರೀಯ

ಪತಿ ಕೆಲಸಕ್ಕೆ ಹೋದ ನಂತರ ಕಳ್ಳತನಕ್ಕೆ ಇಳಿಯುತ್ತಿದ್ದ ಪತ್ನಿ!

Pinterest LinkedIn Tumblr


ಹೈದರಾಬಾದ್: ಐಷಾರಾಮಿ ಬದುಕಿಗೆ ಅಂಟಿಕೊಂಡು ಕಳ್ಳಿಯಾಗಿದ್ದ ವಿವಾಹಿತೆಯೊಬ್ಬಳನ್ನು ಚಾರ್ಮಿನಾರ್ ಪೊಲೀಸರು ಬಂಧಿಸಿದ್ದಾರೆ. ಆಕೆಯಿಂದ 1 ಲಕ್ಷ ರೂಪಾಯಿ ಮೊತ್ತದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಶಂಕಿತ ಆರೋಪಿಯನ್ನು ಆಯೇಷಾ ಸಿದ್ದಿಕಾ ಅಲಿಯಾಸ್ ಶ್ರಾವಂತಿ (26) ಎಂದು ಗುರುತಿಸಲಾಗಿದೆ. ಈಕೆ ವಿವಾಹಿತಳಾಗಿದ್ದು ಸೈದಾಬಾದ್ ಕಾಲೋನಿ ನಿವಾಸಿಯಾಗಿದ್ದಾಳೆ.

ಮಿಟ್ಟಿಕಾ ಶೇರ್ ಪ್ರದೇಶದಲ್ಲಿರುವ ಚಿನ್ನದ ಅಂಗಡಿಯೊಂದಕ್ಕೆ ಗ್ರಾಹಕರ ಸೋಗಿನಲ್ಲಿ ಹೋದ ಆತ ಕೆಲಸಗಾರರ ಕಣ್ಣು ತಪ್ಪಿಸಿ ತನ್ನ ಬುರ್ಖಾದಡಿ 40 ಗ್ರಾಂ ಚಿನ್ನಾಭರಣಗಳನ್ನು ಅಡಗಿಸಿಟ್ಟಿಕೊಂಡಳು.

ಇದಕ್ಕೂ ಮೊದಲು ಆಕೆ ದಿಲ್ಸುಖ್ ನಗರದಲ್ಲಿರುವ ಖಾಸಗಿ ವಸತಿ ನಿಲಯವೊಂದರಿಂದ ಲ್ಯಾಪ್‌ಟಾಪ್‌ಗಳನ್ನು ಕದ್ದಿದ್ದಳು.

ಐಷಾರಾಮಿ ಬದುಕು ನಡೆಸುವ ಹುಚ್ಚು ಬೆಳೆಸಿಕೊಂಡ ಆಕೆ ಅದಕ್ಕಾಗಿ ಆಯ್ದುಕೊಂಡಿದ್ದು ಕಳ್ಳತನ. ಆಕೆಯ ಪತಿಗಿದು ತಿಳಿದಿರಲಿಲ್ಲ. ನಗರದ ಹಲವೆಡೆಗಳಲ್ಲಿ ಕಳ್ಳತನ ಮಾಡಿದ್ದ ವಸ್ತುಗಳನ್ನು ಮಾರಿ ಬಂದ ಹಣದಿಂದ ಆಕೆ ಅದ್ದೂರಿ ಜೀವನವನ್ನು ನಡೆಸುತ್ತಿದ್ದಳು. ದುಬಾರಿ ಹೋಟೆಲ್‌ಗಳಲ್ಲಿ ಊಟ ಮಾಡುತ್ತಿದ್ದಳು.

ಆಕೆಯ ಪತಿ ಕಡಿಮೆ ಸಂಬಳದ ಕೆಲಸದಲ್ಲಿದ್ದು ಆಕೆಯ ಅವಶ್ಯಕತೆ ಪೂರೈಸುವಲ್ಲಿ ವಿಫಲನಾಗಿದ್ದ. ಹೀಗಾಗಿ ಕಳ್ಳತನದ ಮಾರ್ಗ ಕಂಡುಕೊಂಡಿದ್ದ ಆಕೆ ತನಗೆ ಹಣ ಬೇಕೆನಿಸಿದಾಗಲೆಲ್ಲ ಕಳ್ಳತನಕ್ಕೆ ಇಳಿಯುತ್ತಿದ್ದಳು. ಗಂಡ ಕೆಲಸಕ್ಕೆ ಹೋದ ಮೇಲೆ ಕಳ್ಳತನಕ್ಕಿಳಿಯುತ್ತಿದ್ದ ಈಕೆ, ಆತ ಮರಳಿ ಬರುವುದರೊಳಗೆ ಮನೆ ಸೇರಿರುತ್ತಿದ್ದಳು.

Comments are closed.