ಮುಂಬೈ

ಕ್ರೈಸ್ತರು ಅಂಗ್ರೇಜಿಗಳು,ಸ್ವಾತಂತ್ರ್ಯ ಹೋರಾಟಕ್ಕೆ ಯಾವುದೇ ಕೊಡುಗೆ ನೀಡಿಲ್ಲ: ಬಿಜೆಪಿ ಸಂಸದ ಗೋಪಾಲ್‌ ಶೆಟ್ಟಿ

Pinterest LinkedIn Tumblr


ಮುಂಬಯಿ: ಸಂಸದ ಗೋಪಾಲ್‌ ಶೆಟ್ಟಿ ಅವರು ವಿವಾದಾತ್ಮಕ ಹೇಳಿಕೊಂದನ್ನು ನೀಡಿ ಬಿಜೆಪಿಗೆ ಮುಜುಗರ ತಂದಿಟ್ಟಿದ್ದಾರೆ. ಕ್ರೈಸ್ತರು ಅಂಗ್ರೇಜಿಗರು, ಅವರು ಸ್ವಾತಂತ್ರ್ಯ ಹೋರಾಟಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಆದರೆ ಹಿಂದು ಮತ್ತು ಮುಸ್ಲಿಮರು ಜೊತೆಯಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು ಎಂದು ಹೇಳಿಕೆ ನೀಡಿದ್ದಾರೆ.

ಭಾನುವಾರ ಮುಂಬಯಿಯ ಶಿಯಾ ಕಬ್ರಸ್ಥಾನ್‌ ಕಮಿಟಿ ಆಯೋಜಿಸಿದ್ದ ಈದ್‌-ಇ-ಮೀಲಾದ್‌ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಗೋಪಾಲ್‌ ಶೆಟ್ಟಿ ಅವರು ಈ ಹೇಳಿಕೆ ನೀಡಿದ್ದು, ವಿಡಿಯೋ ಈಗ ಸುದ್ದಿಯಾಗಿದೆ.

ಈ ಬಗ್ಗೆ ಕಾಂಗ್ರೆಸ್‌ ತಿರುಗೇಟು ನೀಡಿದ್ದು, ಬಿಜೆಪಿ ಸಂಸದರಿಗೆ ಇತಿಹಾಸನ ಜ್ಞಾನ ಸ್ವಲ್ಪವೂ ಇಲ್ಲ .ಬಿಜೆಪಿ ದೇಶವನ್ನು ಕೋಮು ವಿಚಾರದಲ್ಲಿ ವಿಭಜಸಿ ರಾಜಕಾರಣ ಮಾಡುತ್ತಿದೆ ಎಂದಿದೆ.

Comments are closed.