ಮುಂಬೈ

ಮುಂಬೈನ ಘಟ್ಕೋಪರ್ ವಸತಿ ಪ್ರದೇಶದಲ್ಲಿ ಲಘು ವಿಮಾನ ಪತನ; ಓರ್ವ ಸಜೀವ ದಹನ

Pinterest LinkedIn Tumblr

ಮುಂಬೈ: ಮುಂಬೈನ ವಸತಿ ಪ್ರದೇಶದಲ್ಲಿ ಲಘು ವಿಮಾನವೊಂದು ಪತನಗೊಂಡಿದ್ದು ಪರಿಣಾಮ ಓರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ.

ಉತ್ತರಪ್ರದೇಶ ಸರ್ಕಾರದ ಚಾರ್ಟರ್ಡ್ ವಿಮಾನ ಇದಾಗಿತ್ತು ಎಂದು ಹೇಳಲಾಗಿತ್ತು. ಘಾಟ್ ಕೋಪರ್ ಬಳಿ ಸರ್ವೋದಯ ನಗರದಲ್ಲಿ ಈ ವಿಮಾನ ಪತನಗೊಂಡಿದೆ.

ವಿಮಾನ ಪತನದಿಂದ ಕಟ್ಟಡಕ್ಕೂ ಬೆಂಕಿ ತಲುಗಿದ್ದು ಇದರಲ್ಲಿ ಓರ್ವ ಸಜೀವ ದಹನವಾಗಿದ್ದಾನೆ.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

Comments are closed.