ಮನೋರಂಜನೆ

ಗೂಗಲ್​ ಪ್ರಕಾರ ‘ಅತಿ ಕೆಟ್ಟ ಬಾಲಿವುಡ್ ನಟ’!

Pinterest LinkedIn Tumblr


ಮುಂಬೈ: ಕಳೆದ ಶುಕ್ರವಾರವಷ್ಟೇ ಸಲ್ಮಾನ್​ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ವರ್ಷದ ಚಿತ್ರ ರೇಸ್​-3 ಬಿಡುಗಡೆಯಾಗಿದ್ದು ಅಭಿಮಾನಿಗಳ ವಲಯದಲ್ಲಿ ಭಾರಿ ನಿರಾಸೆ ಮೂಡಿಸಿತ್ತು. ಇದೇ ಬೆನ್ನಲ್ಲೇ ಸಲ್ಮಾನ್​ ಅಭಿಮಾನಿಗಳಿಗೆ ಗೂಗಲ್​ ಮತ್ತೊಂದು ಅಚ್ಚರಿಯ ಸಂಗತಿ ನೀಡಿದೆ.

ಗೂಗಲ್ ಸರ್ಚ್​ಗೆ ಹೋಗಿ ‘ವರ್ಸ್ಟ್​ ಬಾಲಿವುಡ್​ ಆಕ್ಟರ್​’ (ಅತಿ ಕೆಟ್ಟ ಬಾಲಿವುಡ್​ ನಟ) ಯಾರು ಎಂದು ಟೈಪ್​ ಮಾಡಿದಾಗ, ಮೋಸ್ಟ್​ ಎಲಿಜಿಬಲ್​ ಬ್ಯಾಚುಲರ್​ ಸಲ್ಮಾನ್​ ಖಾನ್ ಹೆಸರು ತೋರಿಸುತ್ತಿದೆ. ಹೌದು ಕಷ್ಟವಾದರು ಇದು ಸತ್ಯ. ಆದರೆ, ಗೂಗಲ್​ ನೀಡುತ್ತಿರುವ ಈ ಉತ್ತರ ಸಲ್ಮಾನ್​ ಅಭಿಮಾನಿಗಳಿಗೆ ಬೇಸರ ತಂದಿದ್ದರೆ, ಮತ್ತೊಂದೆಡೆ ಅನೇಕರು ಸ್ಕ್ರೀನ್​ ಶಾಟ್ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಅದನ್ನು ಪೋಸ್ಟ್​ ಮಾಡುತ್ತಿದ್ದಾರೆ.

ಈಗಾಗಲೇ ಬಹುತೇಕರಿಂದ ಸಾಮಾಜಿಕ ಜಾಲತಾಣದಲ್ಲಿ ಇದು ವೈರಲ್​ ಆಗಿದ್ದು, ಕೆಲ ಅಭಿಮಾನಿಗಳು ಸಲ್ಮಾನ್​ರನ್ನು ಟ್ಯಾಗ್​ ಮಾಡಿ ಗೂಗಲ್​ ಸರ್ಚ್​ ಮಾಡಿದಾಗ ಸಲ್ಮಾನ್​ ಹೆಸರು ತೋರಿಸುತ್ತಿರುವುದಾದರೂ ಏಕೆ ಎಂಬುದನ್ನು ತಿಳಿದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

Comments are closed.