ಮುಂಬೈ

ಮುಂಬೈ ಹತ್ತಿರದ ಸಮುದ್ರ ತೀರದಲ್ಲಿ 40 ಅಡಿ ಉದ್ದದ ಕೊಳೆತ ತಿಮಿಂಗಿಲ

Pinterest LinkedIn Tumblr


ಮುಂಬಯಿ : ಮಹಾರಾಷ್ಟ್ರದ ರಾಯಗಢ ಜಿಲ್ಲೆಗೆ ಸಮೀಪದ ಅರಬ್ಬೀ ಸಮುದ್ರದ ತೀರಕ್ಕೆ 40 ಅಡಿ ಉದ್ದ ಬೃಹತ್‌ ಗಾತ್ರದ ಕೊಳೆತ ತಿಮಿಂಗಿಲ ಬಂದು ಬಿದ್ದಿದೆ.

ಉರಾನ್‌ ಸಮೀಪದ ಖರದಂಡ ಎಂಬಲ್ಲಿನ ಸಮುದ್ರ ತೀರದಲ್ಲಿ ಬಂದು ಬಿದ್ದಿದ್ದ ಕೊಳೆತ ತಿಮಿಂಗಿಲವನ್ನು ಕಂಡ ರೋಮಾಂಚಿತರಾದ ಜನರು ಅಧಿಕಾರಿಗಳಿಗೆ ತಿಳಿಸಿದರು.

ಇದು ಬ್ಲೂವೇಲ್‌ ವರ್ಗಕ್ಕೆ ಸೇರಿದ್ದೆಂದು ಹೆಚ್ಚುವರಿ ಮುಖ್ಯ ಅರಣ್ಯ ಸಂರಕ್ಷಕ ಎನ್‌ ವಾಸುದೇವನ್‌ ಹೇಳಿದರು. ಇದನ್ನು ಇದೇ ತಾಣದಲ್ಲಿ ಹೂಳಲಾಗುವುದು ಎಂದವರು ಹೇಳಿದರು.

ಕಳೆದ 3 ವರ್ಷಗಳಲ್ಲಿ ಮಹಾರಾಷ್ಟ್ರ ಕಡಲ ತೀರಕ್ಕೆ ಬಂದು ಬಿದ್ದಿರುವ 8ನೇ ತಿಮಿಂಗಿಲ ಇದಾಗಿದೆ. 1978ರಲ್ಲಿ ಉರಾನ್‌ ಕರಾವಳಿ ತೀರಕ್ಕೆ ಬಂದು ಬಿದ್ದಿದ್ದ 48 ಅಡಿ ಉದ್ದದ ತಿಮಿಂಗಿಲ ಈ ವರೆಗಿನ ಅತೀ ದೊಡ್ಡ ತಿಮಿಂಗಿಲವಾಗಿದೆ.

Comments are closed.