ಮುಂಬೈ

ಮುಂದಿನ ಲೋಕಸಭೆ ಚುನಾವಣೆಯಲ್ಲಿ ನನ್ನ ತಂದೆ ಬರುವುದಿಲ್ಲ: ಪ್ರಣಬ್ ಮುಖರ್ಜಿ ಪುತ್ರಿ

Pinterest LinkedIn Tumblr

ಮುಂಬೈ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬಿಜೆಪಿಗೆ ಬೆಂಬಲ ನೀಡಲಿದ್ದಾರೆ, ಹಾಗಾಗಿ ಆರೆಸ್ಸೆಸ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನ ನೀಡಿತ್ತು ಎಂದು ಬಿಜೆಪಿ ಮಿತ್ರ ಪಕ್ಷ ಶಿವಸೇನೆಯ ಹಿರಿಯ ನಾಯಕ ಸಂಜಯ್ ರಾವತ್ ಹೇಳಿಕೆಗೆ ಪ್ರಣಬ್ ಮುಖರ್ಜಿ ಪುತ್ರಿ ಸರ್ಮಿಷ್ಠ ತಿರುಗೇಟು ನೀಡಿದ್ದಾರೆ.

ಸಂಜಯ್ ರಾವತ್ ಹೇಳಿಕೆಗೆ ಟ್ವಟರ್ ಮೂಲಕ ಪ್ರತಿಕ್ರೀಯೆ ನೀಡಿರುವ ಸರ್ಮಿಷ್ಠಾ, ದೇಶದ ರಾಷ್ಟ್ರಪತಿಯಾಗಿ ನಿವೃತ್ತಿಯಾದ ಬಳಿಕ ನನ್ನ ತಂದೆ ಮತ್ತೆ ಸಕ್ರೀಯ ರಾಜಕಾರಣಕ್ಕೆ ಮರುಳುವುದಿಲ್ಲ ಎಂದು ಹೇಳಿದ್ದಾರೆ. ಪ್ರಣಬ್ ಮುಖರ್ಜಿ ಆರೆಸ್ಸೆಸ್ ಕಾರ್ಯಕ್ರಮಕ್ಕೆ ಹೋಗಿದ್ದಕ್ಕೆ ಸ್ವತಃ ವಿರೊಧ ವ್ಯಕ್ತಪಡಿಸಿದ್ದ ಅವರು, ತಮ್ಮಿಂದ ಈ ನಡೆ ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳಿದ್ದಾರೆ.

ಪ್ರಣಬ್ ಆರೆಸ್ಸೆಸ್ ಕಾರ್ಯಕ್ರಮಕ್ಕೆ ಹೋದ ಬಗ್ಗೆ ಪ್ರತಿಕ್ರೀಯಿಸುತ್ತಾ, ಮುಮದಿನ ಚುನಾವಣೆಯಲ್ಲಿ ಬಿಜೆಪಿ 110 ಸೀಟು ಮಾತ್ರ ಗೆಲ್ಲಲಿದೆ ಹಾಗಾಗಿ ಬಿಜೆಪಿ ಪ್ರಣಬ್ ರನನ್ಉ ಕಾರ್ಯಕ್ರಮಕ್ಕೆ ಆಹ್ವಾನಿಸಿದೆ ಎಂದು ಸಂಜಯ್ ರಾವತ್ ಹೇಳಿದ್ದರು.

Comments are closed.