ಮುಂಬೈ

ಮುಂಬೈ ಜಿಲ್ಲಾಧಿಕಾರಿಯಿಂದ ಆಸೀಫ್ ಕರಾಡಿಯಾಗೆ ದೇಶನಿಷ್ಠೆಯ ಪ್ರಮಾಣವಚನ ಬೋಧನೆ

Pinterest LinkedIn Tumblr


ಮುಂಬಯಿ: ಕಳೆದ 50 ವರ್ಷಗಳಿಂದ ಭಾರತದಲ್ಲಿ ನೆಲೆದ್ದರೂ, ಇಲ್ಲಿನ ಪೌರತ್ವ ಪಡೆಯಲಾಗದೆ ಒದ್ದಾಡುತ್ತಿದ್ದ ಮುಂಬೈ ನಿವಾಸಿ ಕೊನೆಗೂ ಮೊದಲ ಯಶಸ್ಸು ಗಳಿಸಿದ್ದಾರೆ. ಮುಂಬೈ ಜಿಲ್ಲಾಧಿಕಾರಿ ಆತನಿಗೆ ದೇಶನಿಷ್ಠೆಯ ಪ್ರಮಾಣವಚನ ಬೋಧಿಸಿದ್ದು, ಇದು ಭಾರತದ ಪೌರತ್ವ ನೀಡುವ ಮೊದಲ ಅಧಿಕೃತ ಹೆಜ್ಜೆಯಾಗಿದೆ.

ಆಸೀಫ್ ಕರಾಡಿಯಾ ( 53) ತಂದೆ ಅಬ್ಬಾಸ್ ಕರಾಡಿಯಾ ಭಾರತೀಯ ಪೌರರಾಗಿದ್ದು 1962ರಲ್ಲಿಗುಜರಾತಿನಲ್ಲಿ ಮದುವೆಯಾಗಿದ್ದರು. ಪಾಕ್ ಪಾಸ್ಪೋರ್ಟ್ ಹೊಂದಿದ್ದ ಅವರ ಪತ್ನಿ ಹುಟ್ಟಿದ್ದು ಸಹ ಭಾರತದಲ್ಲಿ. ಭಾರತದಲ್ಲೇ ಗರ್ಭ ಧರಿಸಿದ್ದ ಆಕೆ ಬಾಣಂತನಕ್ಕಾಗಿ ಸಂಪ್ರದಾಯದಂತೆ ಕರಾಚಿಯಲ್ಲಿರುವ ತನ್ನ ತವರಿಗೆ ಹೋಗಿದ್ದಳು. ಅಲ್ಲಿಯೇ ಆಸೀಫ್ ಜನಿಸಿದ್ದರು. 1967ರಲ್ಲಿ ತಾಯಿ ಮಗ ಮರಳಿ ಭಾರತಕ್ಕೆ ಬಂದಿದ್ದರು.

ದೀರ್ಘ ಕಾಲಿಕ ವೀಸಾ ಪಡೆದು ಭಾರತದಲ್ಲಿದ್ದ ಆಸೀಫ್‌ಗೆ ಗಡೀಪಾರು ಭೀತಿ ಕಾಡಿದಾಗ, ಅವರ ತಂದೆ ಮಗನಿಗೆ ಪೌರತ್ವ ನೀಡಿಸಬೇಕೆಂದು ಹೆಣಗಾಡಿ ಸೋತಿದ್ದರು. 2015ರಲ್ಲಿ ಆಸೀಫ್ ಭಾರತದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದರು.

ಪೌರತ್ವ ಕಾಯ್ದೆ ಸೆಕ್ಷನ್ 5 ರ ಅಡಿಯಲ್ಲಿ, ಆಸಿಫ್ ಭಾರತೀಯ ನಾಗರಿಕತ್ವವನ್ನು ಪಡೆಯುವ ಅರ್ಹತೆ ಹೊಂದಿದ್ದವು. ಜೊತೆಗೆ, ಭಾರತೀಯ ಸಂವಿಧಾನದ ಆರ್ಟಿಕಲ್ 5ರ ಪ್ರಕಾರ “ಭಾರತದ ಪೋಷಕರಿಗೆ ಜನಿಸಿದವರು ಇಲ್ಲಿನ ಪೌರರಾಗಲು ಅರ್ಹರಿರುತ್ತಾರೆ. ಇಷ್ಟೆಲ್ಲ ಇದ್ದರೂ ಆದರೆ ಆಸೀಫ್‌ಗೆ ಭಾರತದ ಪೌರತ್ವ ಪಡೆಯಲು ಅಡ್ಡಿಗಳು ಎದುರಾಗುತ್ತಲೇ ಹೋದವು.

ಆಸೀಫ್ ಕರಾಚಿಯಲ್ಲಿ ಜನಿಸಿದ್ದರಿಂದ ಆತನ ಹೆಸರು ತಾಯಿಯ ಪಾಕಿಸ್ತಾನಿ ಪಾಸ್ಪೋರ್ಟ್‌ನಲ್ಲಿತ್ತು. 1972ರಲ್ಲಿ ಆ ಪಾಸ್ಟೋರ್ಟ್‌ನ್ನು ಹಿಂತಿರುಗಿಸುವುದರ ಮೂಲಕ ತಾಯಿ ಭಾರತದ ಪೌರತ್ವವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದರೆ ಆಸೀಫ್‌ಗೆ ಭಾರತದ ಪೌರತ್ವ ದೊರೆತಿರಲಿಲ್ಲ.

ಆಸೀಫ್ ಭಾರತೀಯಳನ್ನು ಮದುವೆಯಾಗಿದ್ದು ಆತನ ಮೂರು ಮಕ್ಕಳಿಗೂ ಸಹ ಭಾರತೀಯ ಪೌರತ್ವ ದೊರೆತಿದೆ.

Comments are closed.