ಮುಂಬೈ

ಮಹಾರಾಷ್ಟ್ರ ಪ್ರಾಥಮಿಕ ಶಾಲಾ ಪಠ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಠ್ಯ

Pinterest LinkedIn Tumblr


ಮುಂಬಯಿ: ಸರ್ವ ಶಿಕ್ಷ ಅಭಿಯಾನದಡಿ ಕೇಂದ್ರ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಇಲಾಖೆ ಹೊರತಂದಿರುವ ಚಾಚಾ ಚೌಧರಿ ಮತ್ತು ನರೇಂದ್ರ ಮೋದಿ ಪಠ್ಯಪುಸ್ತಕದಲ್ಲಿ ಪ್ರಧಾನಿ ಮೋದಿ ಅವರನ್ನು ವೈಭವೀಕರಿಸಿ ಚಿತ್ರಿಸಲಾಗಿದೆ ಎಂಬ ವಿವಾದ ಪುಣೆಯಲ್ಲಿ ಕೇಳಿಬಂದಿದೆ.

ಪ್ರಧಾನಿ ಮೋದಿ ಮತ್ತು ಕೇಂದ್ರ ಸರಕಾರದ ವಿವಿಧ ಯೋಜನೆಗಳ ಬಗ್ಗೆ ಪಠ್ಯಪುಸ್ತಕದಲ್ಲಿ ವಿವರಿಸಲಾಗಿದ್ದು, ಪ್ರಾಥಮಿಕ ಶಾಲೆಯ ಮಕ್ಕಳಿಗೆ ಹೆಚ್ಚುವರಿ ಓದಿಗೆ ನೀಡಲಾಗುತ್ತದೆ. ಜಿಎಸ್‌ಟಿ, ಉಜ್ವಲ ಯೋಜನಾ, ಡಿಜಿಟಲ್ ಇಂಡಿಯಾ ಸಹಿತ ವಿವಿಧ ಯೋಜನೆಗಳ ಕುರಿತು ಮನರಂಜನೆ ಮತ್ತು ಆಕರ್ಷಕ ಮಾದರಿಯಲ್ಲಿ ಪ್ರಸ್ತುತಪಡಿಸಲಾಗಿದೆ. ಇದೇ ಮಾದರಿಯಲ್ಲಿ 69 ಪುಸ್ತಕ ಸಿದ್ಧಪಡಿಸಲಾಗಿದ್ದು, ಪುಣೆ ಜಿಲ್ಲಾ ಪರಿಷತ್ ಮೂಲಕ ಎಲ್ಲ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ಹಂಚಲಾಗುತ್ತದೆ.

ಪಠ್ಯದಲ್ಲಿ ಮೋದಿ ವಿಚಾರ ಸೇರ್ಪಡೆಗೊಳಿಸಿರುವ ಕ್ರಮಕ್ಕೆ ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಆಕ್ಷೇಪಿಸಿದ್ದು, ಮೋದಿಯ ಬದಲಾಗಿ, ಸರಕಾರ ಸಂತ ಗಾಜಿಬಾಬರಂತಹ ಶ್ರೇಷ್ಠ ವ್ಯಕ್ತಿಗಳ ಜೀವನಚರಿತ್ರೆಯನ್ನು ಸೇರಿಸಬಹುದಿತ್ತು ಎಂದು ಹೇಳಿದ್ದಾರೆ.

ಪುಣೆ ಜಿಲ್ಲಾ ಪರಿಷತ್‌ನ ಉಪಾಧ್ಯಕ್ಷ ವಿವೇಕ್ ವಾಳ್ಸೆ ಪಾಟೀಲ್ ಕೂಡ ಸರಕಾರದ ಕ್ರಮವನ್ನು ಖಂಡಿಸಿದ್ದಾರೆ.

Comments are closed.