ಮುಂಬೈ

ಮಹಾರಾಷ್ಟ್ರ ಉಗ್ರ ನಿಗ್ರಹ ದಳದ ಮಾಜಿ ಮುಖ್ಯಸ್ಥ ಹಿಮಾಂಶು ರಾಯ್‌ ಆತ್ಮಹತ್ಯೆ

Pinterest LinkedIn Tumblr

ಮುಂಬೈ: ಉಗ್ರ ನಿಗ್ರಹ ದಳದ ಮಾಜಿ ಮುಖ್ಯಸ್ಥ, ಪೋಲೀಸ್ ಅಧಿಕಾರಿ ಹಿಮಾಂಶು ರಾಯ್ ಮುಂಬೈನ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಾಣಾಗಿದ್ದಾರೆ.

ಹಿಮಾಂಶು ಅವರು ಸ್ವಯಂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದರು.ಎನ್ನಲಾಗಿದೆ.

ಎಡಿಜಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ರಾಯ್ 1988 ಮಹಾರಾಷ್ಟ್ರ ಕ್ಯಾಡರ್ ಆಗಿದ್ದಾರೆ. ಇವರು ಮುಂಬಯಿಯ ಸೇಂಟ್ ಕ್ಸೇವಿಯರ್ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದರು.

2013ರ ಐಪಿಎಲ್ ಸರಣಿ ವೇಳೆ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣ ನಡೆದಿದ್ದು ಆ ಸಂದರ್ಭ ಬಾಲಿವುಡ್ ನ ವಿಂಧುಧರ ಸಿಂಗ್ ಬುಕ್ಕಿಗಳೊಡನೆ ಸಂಬಂಧ ಹೊಂದಿದ್ದ ಮಾಹಿತಿ ಪಡೆದಿದ್ದ ರಾಯ್ ಅವರನ್ನು ಬಂಧಿಸಿದ್ದರು.

Comments are closed.