ಮುಂಬೈ

20 ವರ್ಷಗಳ ನಂತರ ವರ್ಸೋವಾ ಬೀಚ್‌ಗೆ ಅಪರೂಪದ ಅತಿಥಿಗಳ ಆಗಮನ

Pinterest LinkedIn Tumblr


ಮುಂಬೈ: ಮುಂಬಯಿಯಲ್ಲಿ ಕಂಡುಬರುವ ಕಲುಷಿತ ಕಡಲ ತೀರಗಳ ಹೊರತಾಗಿ ಸ್ವಚ್ಛವಾದ ಹೊಸ ಬೀಚ್‌ವೊಂದರಲ್ಲಿ ಆಲಿವ್‌ ರಿಡ್ಲೆ ಆಮೆಗಳು ಸಂತಾನೋತ್ಪತ್ತಿಯಲ್ಲಿ ತೊಡಗಿಸಿಕೊಂಡು ಪರಿಸರ ಪ್ರೇಮಿಗಳಿಗೆ ಖುಷಿ ನೀಡಿವೆ.

ಸ್ವಯಂಸೇವಕರ ಗುಂಪೊಂದು ಗುರುವಾರ ವರ್ಸೋವಾ ಕಡಲ ತೀರವನ್ನು ಸ್ವಚ್ಛಗೊಳಿಸಲು ಮುಂದಾಗಿದ್ದಾಗ ಅಲ್ಲಿ ಸುಮಾರು 80 ಆಲಿವ್‌ ರಿಡ್ಲೆ ಆಮೆ ಮರಿಗಳು ಇರುವುದನ್ನು ಪತ್ತೆ ಹಚ್ಚಿದ್ದಾರೆ. ಈ ಕುರಿತು ಅರಣ್ಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ಅವು ಅಲ್ಲಿಂದ ಸಮುದ್ರಕ್ಕೆ ದಾರಿ ಮಾಡಿಕೊಂಡಿದ್ದವು ಎಂದು ತಿಳಿಸಿದ್ದಾರೆ.

2015ರಲ್ಲಿ ಬೀಚ್‌ಗಳನ್ನು ಸ್ವಚ್ಛಗೊಳಿಸುವ ಅಭಿಯಾನ ಕೈಗೊಂಡಿದ್ದ ನಗರದ ಲಾಯರ್‌ ಮತ್ತು ಪರಿಸರವಾದಿ ಅಫ್ರೋಜ್‌ ಶಾ, ಆಲಿವ್‌ ರಿಡ್ಲೆ ಮರಿಗಳನ್ನು ಕಂಡು, 20 ವರ್ಷಗಳ ಹಿಂದೆ ಬೀಚ್‌ಗಳಲ್ಲಿ ಆಲಿವ್‌ ರಿಡ್ಲೆ ಆಮೆಗಳನ್ನು ಕೊನೆಯ ಬಾರಿ ಕಂಡಿದ್ದೆವು ಎಂದು ಅಧಿಕಾರಿಗಳು ನಮಗೆ ತಿಳಿಸಿದ್ದಾರೆ ಎಂದು ಹೇಳಿದರು.

ಕಳೆದ ಹಲವು ವರ್ಷಗಳಿಂದಲೂ ವರ್ಸೋವಾ ಬೀಚ್‌ನಲ್ಲಿ ಆಲಿವ್‌ ರಿಡ್ಲೆ ಆಮೆಗಳು ಗೂಡು ಕಟ್ಟುವುದನ್ನು ನಾವು ನೋಡಿರಲಿಲ್ಲ. ಆಲಿವ್‌ ರಿಡ್ಲೆ ಆಮೆಗಳು ಸಾಮಾನ್ಯವಾಗಿ ಸುರಕ್ಷಿತ ಎನಿಸುವಂತ ಸ್ಥಳಗಳಲ್ಲಿ ಮೊಟ್ಟೆಗಳನ್ನು ಇಡುತ್ತವೆ ಎಂದು ಅರಣ್ಯದ ಹೆಚ್ಚುವರಿ ಮುಖ್ಯ ಸಂರಕ್ಷಣಾಧಿಕಾರಿ ಎನ್‌ ವಾಸುದೇವನ್‌ ತಿಳಿಸಿದ್ದಾರೆ.

Comments are closed.