ಮನೋರಂಜನೆ

ರಸ್ತೆ ಅಪಘಾತ: ರಣವೀರ್ ಸಿಂಗ್ ಪಾರು

Pinterest LinkedIn Tumblr


ಮುಂಬೈ: ಬಾಲಿವುಡ್ ನ ‘ಅಲ್ಲಾಹುದ್ದೀನ್ ಖಿಲ್ಜಿ’ ಖ್ಯಾತಿಯ ರಣವೀರ್ ಸಿಂಗ್ ರಸ್ತೆ ಅಪಘಾತದಲ್ಲಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ರಣವೀರ್ ಚಾಲ ಕನ ಜೊತೆ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು.

ಚಾಲಕನ ನಿಯಂತ್ರಣ ತಪ್ಪಿ ಕಾರು ಗೋಡೆಗೆ ಗುದ್ದಿದೆ. ಹಿಂದೆ ಬರುತ್ತಿದ್ದ ಇನ್ನೊಂದು ಕಾರು ರಣವೀರ್ ಕಾರಿಗೆ ಗುದ್ದಿದೆ. ಅದೃಷ್ಟವಶಾತ್ ನಟ ಯಾವು ದೇ ಗಾಯಗಳಾಗಿಲ್ಲ. ಘಟನೆ ನಡೆದ ತಕ್ಷಣ ರಣವೀರ್ ಚಾಲಕನನ್ನು ತರಾಟೆಗೆ ತೆಗೆದುಕೊಂಡಿ ದ್ದಾರೆ. ಆದ್ರೆ ನಟಿ ದೀಪಿಕಾ ಪಡುಕೋಣೆ ಕಾರು ಚಾಲಕನನ್ನು ಕೆಲಸದಿಂದ ತೆಗೆದು ಹಾಕಿದ್ದಾರಂತೆ.

ಚಾಲಕನಿಗೆ ಬೈದ ದೀಪಿಕಾ, ಘಟನೆಯಲ್ಲಿ ರಣವೀರ್ ಗೆ ದೊಡ್ಡ ಗಾಯಗಳಾಗುವ ಸಾಧ್ಯತೆಯಿತ್ತು ಎಂದಿದ್ದಾರೆ. ಈ ಹಿಂದೆ ಕೂಡ ಇದೇ ಚಾಲಕ ದೀಪಿಕಾ ಕಾರು ಚಲಾಯಿಸುತ್ತಿದ್ದ.

Comments are closed.