ಮುಂಬೈ

ಅಪ್ರಾಪ್ತೆಗೆ ಚುಂಬಿಸಿದ ತೀರ್ಪುಗಾರ: ದೂರು ದಾಖಲು

Pinterest LinkedIn Tumblr


ಮುಂಬೈ: ರಿಯಾಲಿಟೀ ಶೋ ಒಂದರಲ್ಲಿ ಅಪ್ರಾಪ್ತ ವಯಸ್ಸಿನ ಸ್ಪರ್ಧಿಯೊಬ್ಬಳನ್ನು ಅನುಚಿತವಾಗಿ ಚುಂಬಿಸಿದ ಮತ್ತು ಆಕೆಗೆ ಬಣ್ಣಗಳನ್ನು ಎರಚಿದ ವಿಡಿಯೋ ಒಂದು ವೈರಲ್ ಆಗಿದ್ದು, ಈ ಆರೋಪದ ಮೇಲೆ ಸ್ಪರ್ಧೆಯ ತೀರ್ಪುಗಾರರಾದ ಪ್ರಖ್ಯಾತ ಗಾಯಕ ಮತ್ತು ಸಂಗೀತ ಸಂಯೋಜಕನಾದ ಪ್ಯಾಪಾನ್ ವಿರುದ್ಧ ಪ್ರಕರಣ ದಾಖಲಾಗಿದೆ.

ಸುಪ್ರೀಂ ಕೋರ್ಟ್‌ನ ವಕೀಲರಾಗಿರುವ ರುಣ ಭೂಯಣ್ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಈ ಕುರಿತಾದಂತೆ, ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆ (ಪೋಸ್ಕೊ)ಕಾಯ್ದೆಯಡಿ ದೂರು ಸಲ್ಲಿಸಿದ್ದಾರೆ. ಪ್ರಕರಣದ ಕುರಿತಾದಂತೆ ಅಪ್ರಾಪ್ತೆಯ ತಂದೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಇದೊಂದು ಅನಿರೀಕ್ಷಿತ ಘಟನೆಯಾಗಿದೆ. ಆರೋಪಿ ಸ್ಥಾನದಲ್ಲಿರುವ ಪ್ಯಾಪಾನ್ ಆ ಸ್ಪರ್ಧ್ಯೆಲ್ಲಿ ಆಕೆಯ ಮೆಂಟರ್ ಆಗಿದ್ದವರು. ಆತ ಆಕೆಯ ಕನಸುಗಳನ್ನು ಸದಾಪ್ರೋತ್ಸಾಹಿಸುತ್ತಾ ಬಂದವರಾಗಿದ್ದು ಈ ಪ್ರಕರಣದ ಹಿಂದೆ ಯಾವುದೇ ದುರುದ್ದೇಶವಿಲ್ಲ. ಇದನ್ನು ತೀವ್ರ ಸ್ವರೂಪಕ್ಕೆ ಕೊಂಡೊಯ್ಯುವಂತೆ ಪ್ರಚಾರ ಪಡಿಸಬಾರದು ತಿಳಿಸಿದ್ದಾರೆ. ರಿಯಾಲಿಟೀ ಶೋ ನ ಈ ಭಾಗ ಪ್ಯಾಪಾನ್ ಅವರ ಫೇಸ್‌ಬುಕ್ ಖಾತೆಯಲ್ಲಿ ಲೈವ್ ಟೆಲೆಕಾಸ್ಟ್ ನಡೆಯುತ್ತಿದ್ದಿದ್ದರಿಂದ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Comments are closed.