ಮುಂಬೈ

ಮಾವೋವಾದಿಗಳ ಸಂಪರ್ಕ ಆರೋಪ: ಶಿಕ್ಷಕ ಆತ್ಮಹತ್ಯೆ

Pinterest LinkedIn Tumblr


ಮುಂಬಯಿ: ಏಳು ಮಾವೋವಾದಿಗಳ ಜತೆ ಸಂಪರ್ಕ ಇದೆ ಎಂಬ ಆರೋಪದಡಿ ಉಗ್ರ ನಿಗ್ರಹ ದಳದಿಂದ ವಿಚಾರಣೆಗೆ ಒಳಗಗಿದ್ದ ಶಾಲಾ ಶಿಕ್ಷಕ ಪ್ರಭಾಕರ್‌ ಮಚಾ ಎಂಬವರು ಪ್ರತೀಕ್ಷಾ ನಗರದಲ್ಲಿರುವ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರಭಾಕರ್‌ ಅವರನ್ನು ತನಿಖಾ ತಂಡ ಬಂಧಿಸಿರಲಿಲ್ಲ, ಇತರ ಆರೋಪಿಗಳನ್ನು ಬಂಧಿಸಿದೆ. ಗುಜರಾತ್‌ ಮತ್ತು ಮಹಾರಾಷ್ಟ್ರಗಳಿಂದ ಮಾವೋವಾದಿ ಸಂಘಟನೆಗೆ ಸದಸ್ಯರನ್ನು ಸೇರ್ಪಡೆಗೊಳಿಸುತ್ತಿರುವ ಆರೋಪದಡಿ ಏಳು ಮಂದಿಯನ್ನು ಕಾನೂನು ಬಾಹಿರ ಚಟುವಟಿಕೆ ನಿಯಂತ್ರಣ ಕಾಯಿದೆಯಡಿ ಎಟಿಎಸ್‌ ಬಂಧಿಸಿದೆ.

ವಡಾಲದ ಶಾಲೆಯಲ್ಲಿ ಶಿಕ್ಷಕರಾಗಿದ್ದ ಪ್ರಭಾಕರ್‌ ಅವರ ಪತ್ನಿ ಎರಡು ರಿಂಗಳ ಹಿಂದೆ ತೀರಿಕೊಂಡಿದ್ದು, ಮಗ ಪುಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪುತ್ರಿ ಅಮೆರಿಕದಲ್ಲಿ ವಾಸವಿದ್ದಾರೆ.

ಮರಾಠಿಯಿಂದ ಬಹಳಷ್ಟು ಲೇಖನಗಳನ್ನು ಪ್ರಭಾಕರ್‌ ತೆಲುಗಿಗೆ ಅನುವಾದಿಸುತ್ತಿದ್ದರು, ಪತ್ನಿ ಅವರಿಗೆ ನೆರವಾಗುತ್ತಿದ್ದರು. ಪತ್ನಿಯ ಅಗಲಿಕೆ ಬಳಿಕ ಅವರು ಬಹಳ ಸಂಕಟ ಅನುಭವಿಸುತ್ತಿದ್ದು, ಒಂಟಿತನ ಕಾಡುತ್ತಿತ್ತು. ಮಾವೋವಾದಿಗಳ ಸಂಪರ್ಕದ ಆರೋಪದಡಿ ಅವರ ನಿವಾಸಕ್ಕೆ ತನಿಖಾಧಿಕಾರಿಗಳು ದಾಳಿ ನಡೆಸಿ ಹಲವು ವಶಕ್ಕೆ ಪಡೆದಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ.

Comments are closed.