ಮುಂಬೈ

ವಿರಾಟ್ ಕೊಹ್ಲಿ-ಅನಿಲ್ ಕುಂಬ್ಳೆ ನಡುವಿನ ಮುನಿಸು ಮರೆಯಾಯಿತೇ?! ಕುಂಬ್ಳೆ ಕೊಟ್ಟ ಚಮಕ್ ಹೇಗಿತ್ತು ಗೊತ್ತಾ?!

Pinterest LinkedIn Tumblr


ಮುಂಬೈ: ಟೀಂ ಇಂಡಿಯಾ ಕೋಚ್ ಆಗಿದ್ದಾಗ ಅನಿಲ್ ಕುಂಬ್ಳೆ ಮೇಲೆ ವಿರಾಟ್ ಕೊಹ್ಲಿಗೆ ಅಸಮಾಧಾನವಿತ್ತು. ಇದೇ ಕಾರಣಕ್ಕೆ ಕುಂಬ್ಳೆ ರಾಜೀನಾಮೆಯನ್ನೂ ನೀಡಿದ್ದರು. ನಂತರವೂ ಇವರಿಬ್ಬರ ನಡುವೆ ಸಂಬಂಧ ಹಳಸಿತ್ತು ಎಂದೇ ಲೆಕ್ಕಾಚಾರ ಹಾಕಲಾಗಿತ್ತು.

ಆದರೆ ಮುಂಬೈನಲ್ಲಿ ವಿರಾಟ್ ಕೊಹ್ಲಿ ತಮ್ಮ ಮದುವೆಯ ನಿಮಿತ್ತ ನೀಡಿದ್ದ ಆರತಕ್ಷತೆ ಕಾರ್ಯಕ್ರಮದಲ್ಲಿ ಕುಂಬ್ಳೆ ಪತ್ನಿ ಚೇತನಾ ಸಮೇತ ಹಾಜರಾಗಿದ್ದು ಎಲ್ಲರ ಗಮನ ಸೆಳೆಯಿತು.

ಹಳೆಯ ಕಹಿ ಮರೆತು ವಿರಾಟ್, ಅನಿಲ್ ಕುಂಬ್ಳೆಯನ್ನು ಆರತಕ್ಷತೆಗೆ ಆಹ್ವಾನಿಸಿದ್ದರು. ಅನಿಲ್ ಕುಂಬ್ಳೆ ಕೂಡಾ ಅಷ್ಟೇ ಪ್ರೀತಿಯಿಂದ ಹಳೆಯ ಶಿಷ್ಯನಿಗೆ ಆಶೀರ್ವದಿಸಿ ತೆರಳಿದ್ದಾರೆ.

Comments are closed.