ಮುಂಬೈ

ಪಾರಿವಾಳ ಓಡಿಸಲು ಹೋಗಿ ಪ್ರಾಣ ಕಳೆದುಕೊಂಡ ಮಹಿಳೆ

Pinterest LinkedIn Tumblr


ಮುಂಬಯಿ: ಮನೆಯೊಳಗೆ ಪಾರಿವಾಳ ಬರುವುದನ್ನು ತಪ್ಪಿಸಲು ನಾನಾ ಕಸರತ್ತುಗಳನ್ನು ಮಾಡುವುದು ಸಾಮಾನ್ಯ. ಅದರಂತೆ ಬೆಡ್‌ರೂಂನ ಕಿಟಕಿಯ ಗ್ರಿಲ್‌ ಮೂಲಕ ಪಾರಿವಾಳ ಒಳ ಪ್ರವೇಶಿಸಿ ಗಲೀಜು ಮಾಡುತ್ತಿರುವುದನ್ನು ತಪ್ಪಿಸಲೆಂದು ಮಹಿಳೆಯೊಬ್ಬರು ಗ್ರಿಲ್‌ಗೆ ತಂತಿ ಕಟ್ಟಲು ಹೋದಾಗ ಗ್ರಿಲ್‌ ಕುಸಿದು ಪ್ರಾಣ ಕಳೆದುಕೊಂಡಿದ್ದಾರೆ.

ಕುರ್ಲಾದ ಫ್ಲ್ಯಾಟ್‌ನ ಐದನೇ ಮಹಡಿಯಲ್ಲಿ ವಾಸವಿದ್ದ ಕರುಣಾ(57)ಮೃತಪಟ್ಟವರು. ಪಾರಿವಾಳ ಒಳಗೆ ಬರದಂತೆ ಗ್ರಿಲ್‌ಗೆ ತಂತಿ ಜೋಡಿಸಲೆಂದು ಗ್ರಿಲ್‌ ಹತ್ತಿದಾಗ ಅದು ಕುಸಿದು ಕರುಣಾ ಅವರೂ ಜತೆಯಲ್ಲೇ ಕೆಳಗೆ ಬಿದ್ದು ತಲೆ ಬುರುಡೆ ಒಡೆದು ಹೋಗಿದೆ.

ಈ ಗ್ರಿಲ್‌ 6 ಮಿಲಿಮೀಟರ್‌ ಅಷ್ಟೇ ದಪ್ಪವಿದೆ. ಅದಕ್ಕೆ ಜೋಡಿಸಿರುವ ಸ್ಕ್ರೂಗಳು ಕೂಡ ಕಳಪೆಯಾಗಿವೆ ಎಂಬುದು ಕಂಡುಬಂದಿದೆ. ಇದು ಬಹಳ ಗಟ್ಟಿಯಾಗಿದೆ ಎಂದೇ ನಂಬಿಕೊಂಡಿರುವ ಫ್ಲ್ಯಾಟ್‌ನ ನಿವಾಸಿಗಳ ಮಕ್ಕಳು ಕೂಡ ಅಲ್ಲಿ ಆಟವಾಡುತ್ತಿರುತ್ತಾರೆ. ಕೆಲವರು ಕೆಲವು ಭಾರವಾದ ಅನವಶ್ಯಕ ವಸ್ತುಗಳನ್ನು ಕೂಡ ಇದೇ ಗ್ರಿಲ್‌ನಲ್ಲಿ ರಾಶಿ ಹಾಕಿಟ್ಟಿರುತ್ತಾರೆ. ಈ ಘಟನೆಯಿಂದ ಆ ಗ್ರಿಲ್‌ ಹೆಚ್ಚು ಭಾರ ತಡೆಯುವ ಸಾಮರ್ಥ್ಯ ಹೊಂದಿಲ್ಲ ಎಂಬುದು ಅವರಿಗೆ ಮನವರಿಕೆಯಾಗಿದೆ.

ಈ ರೀತಿಯಾಗಿ ಗ್ರಿಲ್‌ ಕುಸಿದು ಬಿದ್ದಿರುವುದನ್ನು 25 ವರ್ಷಗಳ ನನ್ನ ವೃತ್ತಿಯಲ್ಲಿ ನೋಡಿಲ್ಲ. ಸ್ಕ್ರೂಗಳು ಕೆಲವೊಮ್ಮೆ ಸ್ವಲ್ಪ ಸಡಿಲವಾಗುವುದು, ತುಕ್ಕು ಹಿಡಿಯುವುದು ಇರುತ್ತವೆ. ಬಹುಶಃ ಗೋಡೆ ಜರುಗಿರಬೇಕು ಎಂದು ಫ್ಯಾಬ್ರಿಕೇಟಿಂಗ್‌ ಗ್ರಿಲ್‌ ಪರಿಣತ ಹರೂನ್‌ ಖಾನ್ ಹೇಳಿದ್ದಾರೆ.

Comments are closed.