ಮುಂಬೈ

ನವಿ ಮುಂಬೈಯ ಬ್ಯಾಂಕ್‌ ಆಫ್ ಬರೋಡದಲ್ಲಿ ದರೋಡೆಗೆ 25 ಅಡಿ ಸುರಂಗ ಕೊರೆದರು !

Pinterest LinkedIn Tumblr

ಮುಂಬೈ: ನವಿ ಮುಂಬೈ ಉಪನಗರದ ಜೂಯಿ ನಗರ ಎಂಬಲ್ಲಿನ ಬ್ಯಾಂಕ್‌ ಆಫ್ ಬರೋಡದ ಶಾಖೆಯಲ್ಲಿ ದರೋಡೆ ಮಾಡಲು ಕಳ್ಳರು 25 ಅಡಿ ಉದ್ದದ ಸುರಂಗ ಕೊರೆದಿದ್ದಾರೆ.

ಬ್ಯಾಂಕ್‌ನಲ್ಲಿದ್ದ 225 ಲಾಕರ್‌ಗಳಲ್ಲಿ 25 ಲಾಕರ್‌ಗಳಲ್ಲಿ ಕಳುವಾಗಿದ್ದು, ಅದರಲ್ಲಿದ್ದ ವಸ್ತುಗಳ ಮೌಲ್ಯ ಎಷ್ಟು ಎಂಬುದು ತಿಳಿದು ಬಂದಿಲ್ಲ. ಈ ವಿಷಯ, ಸಿಬ್ಬಂದಿ ಸೋಮವಾರ ಬ್ಯಾಂಕ್‌ಗೆ ಬಂದಾಗಷ್ಟೇ ತಿಳಿದುಬಂದಿದೆ.

‘ಬ್ಯಾಂಕ್‌ ಸಮೀಪದ ಕೋಣೆಯನ್ನು ಆರೋ‍ಪಿಗಳು ಮೇ ತಿಂಗಳಲ್ಲಿ ಬಾಡಿಗೆಗೆ ಪಡೆದಿದ್ದರು. ಅಲ್ಲಿಂದಲೇ ಲಾಕರ್‌ ಇದ್ದ ಸ್ಥಳದವರೆಗೆ ಸುರಂಗ ಕೊರೆದಿದ್ದಾರೆ’ ಎಂದು ನವಿ ಮುಂಬೈ ಪೊಲೀಸ್ ಆಯುಕ್ತ ಹೇಮಂತ್‌ ನಾಗರಾಳೆ ತಿಳಿಸಿದ್ದಾರೆ.

Comments are closed.