ಮುಂಬೈ: ಕಾರಿನಲ್ಲಿ ಮಗುವಿಗೆ ಎದೆಹಾಲುಣಿಸುತ್ತಿದ್ದ ಮಹಿಳೆಯ ಕಾರನ್ನು ಟೋ ಮಾಡಿದ್ದ, ಮುಂಬೈ ಪೊಲೀಸರ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಕಾರಿನಲ್ಲಿದ್ದ ಮಹಿಳೆಯನ್ನು ಕೆಳಗಿಳಿಯುವಂತೆ ಸೂಚನೆಯನ್ನೂ ಮುಂಬೈ ಪೊಲೀಸ್ ಪೇದೆಗಳು ನೀಡದೇ ಏಕಾಏಕಿ ಕಾರನ್ನು ಟೋ ಮಾಡಿದ್ದಾರೆ.
ಮಗು ಅಳುತ್ತಿದ್ದ ಹಿನ್ನೆಲೆಯಲ್ಲಿ ನೋ ಪಾರ್ಕಿಂಗ್ ಪ್ರದೇಶದಲ್ಲಿ ಕಾರನ್ನು ನಿಲ್ಲಿಸಿದ್ದ ಮಹಿಳೆ ಎದೆಹಾಲುಣಿಸುತ್ತಿದ್ದರು. ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಹಿನ್ನೆಲೆಯಲ್ಲಿ ಟೋ ಮಾಡಿದ್ದಾರೆ. ಈ ಘಟನೆಗೆ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ, ಎಚ್ಚೆತ್ತಿರುವ ಮುಂಬೈ ಜಂಟಿ ಆಯುಕ್ತರು ಘಟನೆ ಕುರಿತು ತನಿಖೆಗೆ ಆದೇಶಿಸಿದ್ದಾರೆ.