ಮುಂಬೈ

ಅಪಘಾತದಲ್ಲಿ ಪೋಷಕರ ಸಾವು: 7 ವರ್ಷಗಳ ಬಳಿಕ ನಿರುದ್ಯೋಗಿ ಮಗನಿಗೆ 1.2 ಕೋಟಿ ರುಪಾಯಿ ಪರಿಹಾರ

Pinterest LinkedIn Tumblr


ಮುಂಬೈ: ಕಳೆದ ಏಳು ವರ್ಷಗಳ ಹಿಂದೆ ಅಪಘಾಕತವೊಂದರಲ್ಲಿ ತನ್ನ ಪೋಷಕರನ್ನು ಕಳೆದುಕೊಂಡಿದ್ದ ಮಗನಿಗೆ 1.20 ಕೋಟಿ ರುಪಾಯಿ ಪರಿಹಾರ ನೀಡುವಂತೆ ಮೋಟಾರ್ ಅಪಘಾತಗಳು ಟ್ರಿಬ್ಯೂನಲ್ ಹಕ್ಕು ಆದೇಶಿಸಿದೆ.

ಟ್ರಿಬ್ಯೂನಲ್ ಕೋರ್ಟ್ ಟ್ರಕ್ ಮಾಲೀಕ, ಚಾಲಕ ಮತ್ತು ವಿಮಾ ಸಂಸ್ಥೆಗೆ ಪರಿಹಾರವಾಗಿ 1.20 ಕೋಟಿ ರುಪಾಯಿಯನ್ನು ಅಪಘಾತದಲ್ಲಿ ಮೃತಪಟ್ಟ ದಂಪತಿಯ ಮಗನಿಗೆ ನೀಡುವಂತೆ ಆದೇಶಿಸಿದೆ.

ವಿನೀತ್ ಗಾವಂಕಾರ್ ಏಳು ವರ್ಷಗಳ ಹಿಂದೆ ಅಪಘಾತವೊಂದರಲ್ಲಿ ತಂದೆ 59 ವರ್ಷದ ಹರೀಶ್ ಮತ್ತು ತಾಯಿ 54 ವರ್ಷದ ಸಂಜೀವಿನಿ ಅವರನ್ನು ಕಳೆದುಕೊಂಡಿದ್ದರು. ಇನ್ನು ಮೃತ ಹರೀಶ್ ಅವರು ವಾಸ್ತುಶಿಲ್ಪಿಯಾಗಿದ್ದು ತಾಯಿ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದರು.

2010ರ ಅಕ್ಟೋಬರ್ 28ರಂದು ಮುಂಜಾನೆ 1.45 ಸುಮಾರಿಗೆ ರಾಮ್ ಇಂಜಿನಿಯರಿಂಗ್ಸ್ ಮತ್ತು ಕನ್‌ಸ್ಟ್ರಕ್ಷನ್ ಕಂ. ಟ್ರಕ್ ಚಾಲಕ ಕಾರಿಗೆ ಡಿಕ್ಕಿ ಹೊಡೆದಿದ್ದ ಪರಿಣಾಮ ಕಾರಿನಲ್ಲಿದ್ದವರು ಮೃತಪಟ್ಟಿದ್ದರು. ಈ ಸಂಬಂಧ ಮಗ ವಿನೀತ್ ಗಾವಂಕರ್ ಡಿಸೆಂಬರ್ ತಿಂಗಳಲ್ಲಿ ವಿಮಾ ಕಂಪನಿ, ಚಾಲಕ ಬರ್ಕಾತ್ತುಲ್ಲಾ ಖಾನ್ ಮತ್ತು ರಾಮ್ ಇಂಜಿನಿಯರಿಂಗ್ಸ್ ಮತ್ತು ಕನ್‌ಸ್ಟ್ರಕ್ಷನ್ ಕಂ. ಮಾಲೀಕರ ವಿರುದ್ಧ ದೂರು ದಾಖಲಿಸಿದ್ದರು.

Comments are closed.