ಮುಂಬೈ

ದೂರು ನೀಡಲು ಪೊಲೀಸ್ ಠಾಣೆಗೆ ಬಂದಾತನಿಗೆ ಪೊಲೀಸರು ನೀಡಿದ ಶಾಕ್ ಏನು ಗೊತ್ತೇ…?

Pinterest LinkedIn Tumblr

ಪೊಲೀಸರೆಂದರೆ ಜನಸಾಮಾನ್ಯರಿಗೆ ಅದೇನೋ ಭಯ. ಯಾರೋ ಪೊಲೀಸಪ್ಪ ಮನೆ ಬಾಗಿಲಿಗೆ ಸಮವಸ್ತ್ರದಲ್ಲಿ ಬಂದು ನಿಂತನೆಂದರೆ ಸಾಕು ಒಂದು ಕ್ಷಣ ಪೆಚ್ಚಾಗುತ್ತಾರೆ ಜನ. ಹಾಗಾಗಿಯೇ ಪೊಲೀಸರ ಕೆಲವು ಹೃದಯ ಸ್ಪರ್ಶಿ ಕೆಲಸಗಳ ಸುದ್ದಿ ವೈರಲ್‌ ಆಗುತ್ತವೆ. ಇಂಥದ್ದೇ ಒಂದು ಪ್ರಕರಣ, ಮುಂಬೈನಲ್ಲೂ ನಡೆದಿದೆ. ಭಾನುವಾರ (ಅ. 15) ಬೆಳಗ್ಗೆ ಸಾಕಿನಾಕಾ ಪೊಲೀಸ್‌ ಠಾಣೆಗೆ ದೂರೊಂದನ್ನು ದಾಖಲಿಸಲು ಅನೀಶ್‌ ಎಂಬ ಯುವಕನೊಬ್ಬ ಬಂದಿದ್ದ. ದೂರು ದಾಖಲಿಸುವ ವೇಳೆ ದೂರುದಾರನ ಸ್ವಯಂ ವಿವರ ದಾಖಲಿಸುವಾಗ ಅನೀಶ್‌ನ ಜನ್ಮದಿನ ಅಂದೇ ಇದೆ ಎಂದು ಗೊತ್ತಾಗಿದೆ. ತಕ್ಷಣವೇ ಠಾಣೆಗೆ ಕೇಸ್‌ ತರಿಸಿದ ಅಧಿಕಾರಿಗಳು ಆತನಿಗೆ ಕೇಕ್‌ ತಿನ್ನಿಸಿ ಕಳುಹಿಸಿದ್ದಾರೆ.

Comments are closed.