ಮುಂಬೈ

ವಿವಾಹ-ಪೂರ್ವದ ಎಲ್ಲಾ ಲೈಂಗಿಕ ಸಂಬಂಧ ಅತ್ಯಾಚಾರವಲ್ಲ

Pinterest LinkedIn Tumblr


ಮುಂಬೈ (ಜ.21): ಪ್ರತಿ ಅತ್ಯಾಚಾರ ಪ್ರಕರಣದಲ್ಲಿ ಮದುವೆಯಾಗುವುದಾಗಿ ನಂಬಿಸುವುದನ್ನು ಮನವೊಲಿಸುವಿಕೆಯೆಂದು ಪರಿಗಣಿಸುವಂತಿಲ್ಲವೆಂದು ಬಾಮಬೆ ಹೈಕೋರ್ಟ್ ಹೇಳಿದೆ. ಬಾಯ್’ಫ್ರೆಂಡ್’ನಿಂದ ತ್ಯಜಿಸಲ್ಪಟ್ಟ ಬಳಿಕ ಸುಶಿಕ್ಷಿತ ಯುವತಿಯರು ಆತ ತನ್ನನ್ನು ರೇಪ್ ಮಾಡಿದ್ದಾನೆಂದು ಆರೋಪಿಸುವಂತಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಮದುವೆಯಾಗುವುದಾಗಿ ನಂಬಿಸುವುದು ಪ್ರತಿ ಅತ್ಯಾಚಾರ ಪ್ರಕರಣದಲ್ಲಿ ಆಧಾರವೆಂದು ಪರಿಗಣಿಸುವಂತಿಲ್ಲವೆಂದು ನ್ಯಾ. ಮೃದುಲಾ ಭಾಟ್ಕರ್ ಅತ್ಯಾಚಾರ 21-ವರ್ಷ ಪ್ರಾಯದ ಆರೋಪಿ ಯುವಕನೋರ್ವನಿಗೆ ಜಾಮೀನು ನೀಡಿದ್ದಾರೆ.
ಪರಸ್ಪರರು ಸಮ್ಮತಿಯಿಂದೇರ್ಪಡುವ ವಿವಾಹ-ಪೂರ್ವ ಲೈಂಗಿಕ ಸಂಬಂಧಕ್ಕೆ ಸುಶಿಕ್ಷಿತ ಯುವತಿಯು ಕೂಡಾ ಖುದ್ದು ಹೊಣೆಗಾರರರಾಗಿರುತ್ತಾಳೆ, ಎಂದು ಅವರು ಹೇಳಿದ್ದಾರೆ.
ಆದರೆ ಮೋಸದ ಮೂಲಕ ಸಮ್ಮತಿಯನ್ನು ಪಡೆದಿದ್ದಲ್ಲಿ, ಅದಕ್ಕೆ ಸಾಕ್ಷ್ಯಾಧಾರಗಳಿದ್ದಲ್ಲಿ ಅದನ್ನು ಅಪರಾಧವಾಗಿ ಪರಿಗಣಿಸಬಹುದೆಂದು ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಮದುವೆಯಾಗಿ ನಂಬಿಸಿ ಅತ್ಯಾಚಾರ ನಡೆಸಿರುವ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಉಲ್ಲೇಖಿಸಿದ ಕೋರ್ಟ್, ಅಂತಹ ಪ್ರಕರಣಗಳನ್ನು ಸೂಕ್ಷವಾಗಿ ಗ್ರಹಿಸುವ ಅಗತ್ಯವಿದೆಯೆಂದು ಹೇಳಿದೆ.

Comments are closed.