ಮನೋರಂಜನೆ

ಅಭಿಷೇಕ್ ಬಚ್ಚನ್ ಗೆ ಐಶ್ವರ್ಯ ರೈ ‘ಯೆಸ್’ ಎಂದಾಗ…

Pinterest LinkedIn Tumblr


ಮುಂಬೈ: ಹತ್ತು ವರ್ಷಗಳ ಹಿಂದಿನ ಹಳೆಯ ನೆನಪುಗಳಿಗೆ ಜಾರಿದ ಬಾಲಿವುಡ್ ನಟ ಅಭಿಷೇಕ ಬಚ್ಚನ್ ತಾವು ಐಶ್ವರ್ಯಾ ರೈಗೆ ಪ್ರೇಮ ನಿವೇದನೆ ಹೇಗೆ ಮಾಡಿದ್ದು ಎಂಬುದನ್ನು ಹೇಳಿಕೊಂಡಿದ್ದಾರೆ.
ಇದಕ್ಕೆ ವೇದಿಕೆಯಾಗಿದ್ದು ಸಾಮಾಜಿಕ ಜಾಲತಾಣ ಟ್ವಿಟ್ಟರ್. ಅದರಲ್ಲಿ ಬಚ್ಚನ್ ತಮ್ಮ ವಿಶೇಷ ಸಂದರ್ಭದ ಘಳಿಗೆಯನ್ನು ಹಂಚಿಕೊಂಡಿದ್ದಾರೆ.
10 ವರ್ಷಗಳ ಹಿಂದೆ ಹಿಮದಿಂದ ಆವರಿಸಲ್ಪಟ್ಟಿದ್ದ ನ್ಯೂಯಾರ್ಕ್ ನ ಬಾಲ್ಕನಿಯಲ್ಲಿ ತಾವು ಪ್ರಪೋಸ್ ಮಾಡಿದಾಗ ಐಶ್ವರ್ಯಾ ಯೆಸ್ ಎಂದಳು ಎಂದು ಬರೆದುಕೊಂ ಡು ಒಂದು ಉಂಗುರ ಮತ್ತು ಪ್ರೀತಿಯ ಸಂಕೇತವನ್ನು ಹಾಕಿಕೊಂಡಿದ್ದಾರೆ.
ಅದು ಅವರಿಬ್ಬರು ನಟಿಸಿದ ಗುರು ಚಿತ್ರ ವಿಶ್ವಮಟ್ಟದಲ್ಲಿ ಪ್ರೀಮಿಯರ್ ಕಂಡ ಸಂದರ್ಭ. ನ್ಯೂಯಾರ್ಕ್ ನಲ್ಲಿ ಚಿತ್ರ ಪ್ರದರ್ಶನದ ವೇಳೆ ಈ ಜೋಡಿ ಅಲ್ಲಿಗೆ ಹೋಗಿದ್ದರು.
ಅದಾಗಿ 2007, ಏಪ್ರಿಲ್ 20ರಂದು ಇವರಿಬ್ಬರು ಮದುವೆಯಾದರು. ಇವರ ಪ್ರೀತಿಯ ಸಂಕೇತವಾಗಿ 2011, ನವೆಂಬರ್ 16ರಂದು ಮಗಳು ಆರಾಧ್ಯ ಜನಿಸಿದ್ದಳು.

Comments are closed.