ಮುಂಬೈ

ಇದು ಕಳೆದ 10 ವರ್ಷಗಳ ಕೆಟ್ಟ ಆಡಳಿತ: ಶಿವಸೇನೆ

Pinterest LinkedIn Tumblr


ನವದೆಹಲಿ(ಜ.06): ಕೇಂದ್ರ ಸರ್ಕಾರದ ನೋಟು ಅಮಾನ್ಯ ಕ್ರಮದ ವಿರುದ್ಧ ಶಿವಸೇನೆ ತೀವ್ರ ವಾಗ್ದಾಳಿ ನಡೆಸಿದೆ. ಕಳೆದ 10 ವರ್ಷಗಳಲ್ಲಿ ಇದೊಂದು ಕೆಟ್ಟ ಆಡಳಿತವಾಗಿದೆ ಎಂದು ಶಿವಸೇನೆ ನೋಟು ನಿಷೇಧವನ್ನು ಬಣ್ಣಿಸಿದೆ.
ಬಿಜೆಪಿ ನಾಯಕರು ಭ್ರಮೆಯ ಸ್ವರ್ಗದಲ್ಲಿದ್ದಾರೆ. ದೇಶದಲ್ಲಿರುವ ಕಪ್ಪುಹಣವನ್ನು ತೊಡೆದು ಹಾಕುತ್ತದೆ ಎಂದು ಮೂರ್ಖರಂತೆ ಯೋಚಿಸುತ್ತಿದ್ದಾರೆ. ನೋಟು ನಿಷೇಧವು ಕಾಳಧನಿಕರಿಗೆ ಪೆಟ್ಟು ನೀಡುವ ಬದಲು ಮಧ್ಯಮ ವರ್ಗದವರಿಗೆ, ಬಡವರಿಗೆ, ನಿರುದ್ಯೋಗಿಗಳನ್ನು ಸಂಕಷ್ಟಗೀಡು ಮಾಡಿದೆ ಎಂದು ಶಿವಸೇನೆ ಹೇಳಿದೆ.
ನರೇಂದ್ರ ಮೋದಿ ಪರವಾಗಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್ ಗೆ ಕೇಳಲು ಇಚ್ಚಿಸುತ್ತೇವೆ. ಮಹಿಳೆಯರ ಕಷ್ಟವನ್ನು ಅರ್ಥ ಮಾಡಿಕೊಳ್ಳಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೆ ಇಂತಹ ನಿಷ್ಕರುಣಿ, ಜಾಣ ಕಿವುಡ ಸರ್ಕಾರವನ್ನು ಕಳೆದ 10 ವರ್ಷಗಳಲ್ಲಿ ನೋಡಿಯೇ ಇಲ್ಲವೆಂದು ಶಿವಸೇನೆ ಪಕ್ಷದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಬರೆದುಕೊಂಡಿದೆ.

Comments are closed.