ಮುಂಬೈ

ಸಿನೆಮಾದಲ್ಲಿ ಅವಕಾಶ ಕೊಡುವುದಾಗಿ ನಂಬಿಸಿ, ನಟಿಯನ್ನು ಮಂಚಕ್ಕೆ ಕರೆದ ನಿರ್ಮಾಪಕನ ಬಂಧನ !

Pinterest LinkedIn Tumblr

ಮುಂಬೈ: ಉದಯೋನ್ಮುಖ ನಟಿಗೆ ಚಿತ್ರದಲ್ಲಿ ಅವಕಾಶ ಕೊಡುವುದಾಗಿ ನಂಬಿಸಿ ಲೈಂಗಿಕ ಕಿರುಕುಳ ನೀಡಿದ ಅನಿವಾಸಿ ಭಾರತೀಯ ನಿರ್ಮಾಪಕನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ನಿರ್ಮಾಪಕ ರಾಜೇಂದ್ರ ಬಜಾಜ್, ಮಹಿಳೆಯ ಮನೆಯೊಳಗೆ ಪ್ರವೇಶಿಸಿ ಮುಂಬರುವ ಸಿನೆಮಾದಲ್ಲಿ ಅವಕಾಶ ಕೊಡುವುದಾಗಿ ನಂಬಿಸಿ, ಲೈಂಗಿಕ ಕಿರುಕುಳ ನೀಡಿರುವುದಾಗಿ ದೂರಿನಲ್ಲಿ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ನಿರ್ಮಾಪಕ ಬಜಾಜ್, ವಿವಾಹವಾಗುವಂತೆ ಕೋರಿದ್ದರು. ಆದರೆ ವಿವಾಹವಾಗಲು ನಾನು ನಿರಾಕರಿಸಿದ್ದರಿಂದ ಮನೆಯಿಂದ ತೆರಳುವ ಮುನ್ನ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾಳೆ.

ಮಹಿಳೆಗೆ ಅಪಮಾನ ಮಾಡಿದ್ದಲ್ಲದೇ ಲೈಂಗಿಕ ಕಿರುಕುಳ ನೀಡಿದ ಆರೋಪಗಳನ್ನು ನಿರ್ಮಾಪಕ ಬಜಾಜ್ ಮೇಲೆ ಹೊರಿಸಲಾಗಿದ್ದು, 20 ಸಾವಿರ ರೂಪಾಯಿ ಭದ್ರತಾ ಠೇವಣಿಯ ಜಾಮೀನಿನ ಮೇಲೆ ಅವರನ್ನು ಬಿಡುಗಡೆಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Comments are closed.