ಮುಂಬೈ

ತೀಯಾ ಸಮಾಜ ದ 72ನೇ ವಾರ್ಷಿಕೋತ್ಸವ, ಅರಸಿನ ಕುಂಕುಮ ಕಾರ್ಯಕ್ರಮ

Pinterest LinkedIn Tumblr

thiya_samaja_prgrm_1

ವರದಿ : ಈಶ್ವರ ಎಂ. ಐಲ್

ಮುಂಬಯಿ, ಕುಲಗುರು ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಗಳನ್ನೇ ಅನುಸರಿಸುತ್ತಿರುವ ತೀಯಾ ಸಮುದಾಯದ ಹಿರಿಯರು 72 ವರ್ಷಗಳ ಹಿಂದೆ ಇಂತಹ ಸಂಘಟನೆಯನ್ನು ಸ್ಥಾಪಿಸಿದ್ದು ಅವರನ್ನು ಸ್ಮರಿಸುವ ಅಗತ್ಯವಿದ್ದು ಸಮಾಜದಲ್ಲಿನ ಸಾಧಕರ ಮಾಡುತ್ತಿರುವ ಸನ್ಮಾನ ಸಮಾಜಾಭಿವೃದ್ದಿಗೆ ಪೂರಕವಾಗಿದೆ. ತೀಯಾ ಸಮಾಜಕ್ಕೆ ಚಂದ್ರಶೇಖರ ಬೆಳ್ಚಡರು ಐದನೇ ಬಾರಿ ನಿರಂತರವಾಗಿ ಅಧ್ಯಕ್ಷರಾಗಿರುವುದು ಅಭಿಮಾನವೆನಿಸುತ್ತಿದೆ. ಸಂಸ್ಥೆಯು 75 ವರ್ಷದತ್ತ ಮುನ್ನಡೆದು ಇವರ ಸಾರಥ್ಯದಲ್ಲೇ ಅಮೃತಮ ಹೋತ್ಸವ ಸಂಭ್ರಮಿಸುವಂತಾಗಲಿ ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ಜಯಕೃಷ್ಣ ಎ.ಶೆಟ್ಟಿ ನುಡಿದರು.

ತೀಯಾ ಸಮಾಜ ಮುಂಬಯಿಯ 72ನೇ ವಾರ್ಷಿಕೋತ್ಸವ ಸಮಾರಂಭವು ಇತ್ತೀಚೆಗೆ ಸಂತಾಕ್ರೂಸ್ ಬಿಲ್ಲವ ಭವನದಲ್ಲಿ ಜರಗಿದ್ದು ಮುಖ್ಯ ಅತಿಥಿಯಾಗಿ ಸಮಾರಂಭವನ್ನು ಉದ್ಘಾಟಿಸಿ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು.

thiya_samaja_prgrm_2 thiya_samaja_prgrm_3 thiya_samaja_prgrm_4 thiya_samaja_prgrm_5 thiya_samaja_prgrm_6 thiya_samaja_prgrm_7 thiya_samaja_prgrm_8 thiya_samaja_prgrm_9 thiya_samaja_prgrm_10

ಈ ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜಯರಾಮ ಶೆಟ್ಟಿ, ಸ್ತ್ರೀಶಕ್ತಿ ಮಹಿಳಾ ಮಂಡಳಿ ಥಾಣೆ ಅಧ್ಯಕ್ಷೆ ಉಷಾ ಕೆ.ಹೆಗ್ಡೆ, ತುಳು ಕನ್ನಡ ವೆಲ್ಫೇರ್ ಅಸೋಸಿಯೇಶನ್ ಕಮೋಟೆ ನವಿಮುಂಬಯಿ ಅಧ್ಯಕ್ಷ ಬೋಳ ರವಿ ಕೆ.ಪೂಜಾರಿ, ಸಮಾಜ ಸೇವಕಿ ವತ್ಸಲಾ ಕೆ.ಪೂಜಾರಿ, ಬಂಟರ ಸಂಘ ಪ್ರಾದೇಶಿಕ ಸಮಿತಿ ಡೊಂಬಿವಲಿ ಇದರ ಗೌರವ ಕಾರ್ಯದರ್ಶಿ ಆನಂದ ಡಿ.ಶೆಟ್ಟಿ ಎಕ್ಕಾರು ಉಪಸ್ಥಿತರಿದ್ದರು. ಸಮಾಜದ ವಿಶ್ವಸ್ಥ ಮಂಡಳಿ ಕಾರ್ಯಾಧ್ಯಕ್ಷ ರೋಹಿದಾಸ್ ಎಸ್.ಬಂಗೇರ, ಉಪಾಧ್ಯಕ್ಷ ಸುಧಾಕರ್ ಉಚ್ಚಿಲ್, ಪ್ರಧಾನ ಕಾರ್ಯದರ್ಶಿ ಈಶ್ವರ ಎಂ. ಐಲ್, ಗೌರವ ಕೋಶಾಧಿಕಾರಿ ರಮೇಶ್ ಎನ್.ಉಳ್ಳಾಲ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರುಗಳಾದ ದಿವ್ಯ ಆರ್. ಕೋಟ್ಯಾನ್, ಪದ್ಮಿನಿ ಕೋಟೆಕಾರ್, ಪೂರ್ವ ವಲಯ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಮೋಹನ್ ಬಿ.ಎಂ., ಹಾಗೂ ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷೆ ಪ್ರತಿಮಾ ಬಂಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ವಿಶ್ವ ತುಳು ಒಕ್ಕೂಟ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ, ರಾಷ್ಟ್ರೀಯ ಭೂಷನ ಪ್ರಶಸ್ತಿ ಪುರಸ್ಕೃತ ಕಲಾವಿದ ಪದ್ಮನಾಭ ಸಸಿಹಿತ್ಲು, ತೀಯಾ ಸಮಾಜದ ಗಣ್ಯರಾದ ಜಯ ಸಿ.ಸಾಲಿಯಾನ್, ಸುನೀಲ್ ಕುಮಾರನ್, ಗೋಪಾಲ ಸಾಲ್ಯಾನ್, ತೋನ್ಸೆ ಲಾಜರ್ ಕೋಟ್ಯಾನ್, ನಾರಾಯಣ ಸಾಲ್ಯಾನ್, ಐಲ್ ಬಾಬು, ರಂಗನಟಿ ಪ್ರತಿಮಾ ಬಂಗೇರ, ತೀಯಾ ಬೆಳಕು ಸಂಪಾದಕ ಶ್ರೀಧರ್ ಎಸ್.ಸುವರ್ಣ ಅವರನ್ನು ಅತಿಥಿಗಳು ಸನ್ಮಾನಿಸಿ ಅಭಿನಂದಿಸಿದರು.

thiya_samaja_prgrm_11 thiya_samaja_prgrm_12 thiya_samaja_prgrm_13 thiya_samaja_prgrm_14 thiya_samaja_prgrm_15 thiya_samaja_prgrm_16 thiya_samaja_prgrm_17 thiya_samaja_prgrm_18 thiya_samaja_prgrm_19 thiya_samaja_prgrm_20 thiya_samaja_prgrm_21 thiya_samaja_prgrm_22 thiya_samaja_prgrm_23  thiya_samaja_prgrm_24 thiya_samaja_prgrm_25 thiya_samaja_prgrm_26 thiya_samaja_prgrm_27 thiya_samaja_prgrm_28 thiya_samaja_prgrm_29

ಲತಾ ಶೆಟ್ಟಿ ಯವರು ಮಾತನಾಡಿ ತೀಯಾ ಸಮಾಜದ 72ರ ಸೇವಾವಧಿ ಹೆಮ್ಮರವಾಗಿ ಸಮಾಜಕ್ಕೆ ಆಧಾರವಾಗಿದೆ. ಕರ್ಮಭೂಮಿಯಲ್ಲಿ ಜನ್ಮಭೂಮಿಕ್ಕಿಂತ ಮಿಗಿಲಾದ ಸೇವೆ ಅರ್ಥಗರ್ಭಿತವಾಗಿದೆ. ಸಂಸ್ಕೃತಿ ಮತ್ತು ವಿದ್ಯೆ ನಾಣ್ಯದ 2 ಮುಖಗಳಂತಿದ್ದು ಇವೆರಡರ ಕೂಡುವಿಕೆಯಿಂದ ಸಂಸ್ಕಾರಯುತ ಬದುಕು ಸಾಧ್ಯ. ಸಮಾಜದ ಸ್ತ್ರೀಯರು ಲಕ್ಷ್ಮೀ ಸ್ವರೂಪ ಭಾಗ್ಯದ ಹಳದಿ ಕುಂಕುಮ ಕಾರ್ಯಕ್ರಮದ ಮಹತ್ವ ವನ್ನು ತಿಳಿದು ಮುಂದಿನ ಪೀಳಿಗೆಗೆ ತಿಳಿಪಡಿಸುವ ಅಗತ್ಯವಿದೆ ಎಂದರು.

ಮಹಿಳೆಯರ ಏಕೀಕರಣಕ್ಕೆ ಇದು ಸೂಕ್ತ ವೇದಿಕೆ. ಇದು ಸ್ತ್ರೀಶಕ್ತಿಯನ್ನು ಬಲಪಡಿಸುವಲ್ಲಿ ಸಫಲೆತೆ ಹೊಂದಲಿ ಎಂದು ಉಷಾ ಹೆಗ್ಡೆ ತಿಳಿಸಿದರು.
ಆನಂದ ಶೆಟ್ಟಿ ಮಾತನಾಡಿ ಬೀಜ ಹಾಕಿ ಗಿಡವಾಗಿಸಿದ ಸಂಸ್ಥೆಯ ಹಿರಿಯರ ತ್ಯಾಗಮಯ ಜೀವನ ನೆನಪಿಸಿಕೊಳ್ಳಲೇ ಬೇಕು. ಸಂಸ್ಥೆ ಇಂದು ಮರವಾಗಿ ಎತ್ತರಕ್ಕೆ ಬೆಳೆಸಲು ಅವಿರತ ಶ್ರಮವೇ ಕಾರಣ. ಇದನ್ನು ನಡೆಸುವ ಇಂದಿನ ಪದಾಧಿಕಾರಿಗಳು ಸಂತಸಮಯವಾಗಿ ಸಂಸ್ಥೆಯನ್ನು ಮುನ್ನಡೆಸುತ್ತಾ ಕೂಡು ಕುಟುಂಬವಾಗಿ ಬೆಳೆಯಲು ಪ್ರೇರಕವಾಗಲಿ ಎಂದರು.

ಸನ್ಮಾನಕ್ಕೆ ಉತ್ತರಿಸಿದ ಧರ್ಮಪಾಲ ದೇವಾಡಿಗರು ಸಮಾಜದ ಜನತೆಯ ಅಶೋತ್ತರಕ್ಕೆ ಸ್ಪಂದಿಸುತ್ತಾ 72ರ ಸೇವೆಯಲ್ಲಿರುವುದು ಅಭಿನಂದನೀಯ. ಚಂದ್ರಶೇಖರ ಬೆಳ್ಚಡ ಅವರ ನೇತೃತ್ವದಲ್ಲಿ ಶೀಘ್ರವೇ ತೀಯಾ ಭವನ ರೂಪುಗೊಳ್ಳಲಿ ಎಂದು ಆಶಯ ವ್ಯಕ್ತಪಡಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸಮಾಜದ ಅಧ್ಯಕ್ಷರಾದ ಚಂದ್ರಶೇಖರ ಬೆಳ್ಚಡ ಅವರು ಮಾತನಾಡುತ್ತಾ ನಮ್ಮ ಪೂರ್ವಜರು ದೂರದೃಷ್ಠಿತ್ವ ಹೊಂದಿ ಭವಿಷ್ಯತ್ತಿನ ಪೀಳಿಗೆಗಾಗಿ ವರವಾಗಿಸಿದ್ದ ಸಂಸ್ಥೆಗಳನ್ನು ನಾವು ನಡೆಸುತ್ತಾ ನಮ್ಮ ಪೀಳಿಗೆಗೆ ಮುನ್ನಡೆಸುವುದು ನಮ್ಮ ಆದ್ಯಕರ್ತವ್ಯ. ಸಮುದಾಯದ ಜನತೆ ಒಗ್ಗಟ್ಟಾದಾಗ ಮಾತ್ರ ಸಂಘಟನೆ ಬಲಗೊಳ್ಳುತ್ತದೆ ಹಾಗೂ ಉದ್ದೇಶಗಳೂ ಈಡೇರುತ್ತವೆ. ಎಲ್ಲರಂತೆ ನಾವೂ ಒಗ್ಗಟ್ಟಿನೊಂದಿಗೆ ಸಂಘಟಿತರಾಗೋಣ. ಸಮಾನತೆಯಿಂದ ಸಂಘ್ಹಟನೆ ಮತ್ತು ಸಮುದಾಯವನ್ನು ಭದ್ರಪಡಿಸೋಣ ಎಂದರು.

ಕಾರ್ಯಕ್ರಮದಲ್ಲಿ ವಿಶ್ವಸ್ಥ ಸದಸ್ಯರುಗಳಾದ ಶಂಕರ್ ಸಿ.ಸಾಲ್ಯಾನ್, ಬಾಬು ಟಿ.ಬಂಗೇರ, ಜತೆ ಕಾರ್ಯದರ್ಶಿ ನ್ಯಾ| ಬಿ.ಕೆ ಸದಾಶಿವ ಜತೆ ಕೋಶಾಧಿಕಾರಿ ಚಂದ್ರಶೇಖರ್ ಕೆ.ಬಿ, ಹಾಗೂ ತೀಯಾ ಸಮಾಜ ಬಾಂಧವರು ಅಭಿಮಾನಿಗಳು ಉಪಸ್ಥಿತರಿದ್ದು ವಾರ್ಷಿಕೋತ್ಸವದ ಯಶಸ್ಸಿಗೆ ಸಹಕರಿಸಿದ್ದರು. ಮಾಧವ ಸುವರ್ಣ ಉಳ್ಳಾಲ, ನಗರ ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳದ ಕುತ್ಪಾಡಿ ರಾಮಚಂದ್ರ ಎಂ.ಗಾಣಿಗ, ಬಿ.ಮುನಿರಾಜ ಜೈನ್ ಅಜಿಲ, ಕವಿ ಶಿಮಂತೂರು ಚಂದ್ರಹಾಸ ಸುವರ್ಣ, ಕೆ.ಶಂಕರ ಸುವರ್ಣ ಖಾರ್, ಅಶೋಕ್ ಕುಕ್ಯಾನ್ ಸಸಿಹಿತ್ಲು, ಡಾ| ಯು.ಧನಂಜಯ ಕುಮಾರ್, ಹ್ಯಾರಿ ಆರ್.ಸಿಕ್ವೇರಾ, ಕುರುಣಾಕರ ಕಾಪು, ಕು| ಕಾಜಲ್ ಕುಂದರ್ ಸಸಿಹಿತ್ಲು ಮತ್ತಿತರರನ್ನು ಅಧ್ಯಕ್ಷರು ಗೌರವಿಸಿದರು.
ತೀಯಾ ಸಮಾಜ ಮುಂಬಯಿ ಇದರ ಪಶ್ಚಿಮ ಮಲಯದ ಮಹಿಳಾ ವಿಭಾಗವು ವಿಭಾಗಧ್ಯಕ್ಷೆ ದಿವ್ಯಾ ಆರ್.ಕೋಟ್ಯಾನ್ ಮುಂದಾಳುತ್ವದಲ್ಲಿ ಅರಸಿನ ಕುಂಕುಮ ಕಾರ್ಯಕ್ರಮ ನೆರವೇರಿಸಿತು. ವಿಭಾಗದ ಉಪ ಕಾರ್ಯಾಧ್ಯಕ್ಷೆ ಸುಜತಾ ಎಸ್.ಉಚ್ಚಿಲ್, ಗೌರವ ಕಾರ್ಯದರ್ಶಿ ಚಂದ್ರ ಎಂ.ಸುವರ್ಣ, ಗೌರವ ಕೋಶಾಧಿಕಾರಿ ರಂಜನಿ ಎ.ಸುವರ್ಣ ಮೊದಲಾದವರು ಸಹಕರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಭಿನಯ ಮಂಟಪ ಮುಂಬಯಿ ತಂಡವು `ಒಯಿಕ್‍ಲಾ ದಿನ ಬರೊಡು’ ತುಳು ನಾಟಕ ಪ್ರದರ್ಶಿಸಿತು.

ಯಶವಂತಿ ಉಚ್ಚಿಲ್ ಪ್ರಾರ್ಥನೆಗೈದರು. ವಿಶ್ವನಾಥ ಯು.ಕೆ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಗೌರವ ಪ್ರಧಾನ ಕಾರ್ಯದರ್ಶಿ ಈಶ್ವರ ಎಂ.ಐಲ್ ಮತ್ತು ಚಂದ್ರ ಎಂ.ಸುವರ್ಣ ಸನ್ಮಾನಿತರನ್ನು ಪರಿಚಯಿಸಿದರು. ಶ್ರೀಮತಿ ದಿವಿಜಾ ಚಂದ್ರಶೇಖರ್, ಹರ್ಷಾ ಚಂದ್ರಶೇಖರ್ ಮತ್ತು ಭಾಸ್ಕರ್ ಸುವರ್ಣ ಸಸಿಹಿತ್ಲು ಕಾರ್ಯಕ್ರಮವನ್ನು ನಿರೂಪಿಸಿದರು.

Comments are closed.