ಮುಂಬೈ: ಗ್ಯಾಂಗ್ರೀನ್ (ಕಾಲು ಕೊಳೆಯುವ ರೋಗ ಅಥವಾ ಡಯಾಬಿಟಿಸ್ ಫೂಟ್ ಅಲ್ಸರ್) ರೋಗದಿಂದ ನರಳುತ್ತಿರುವ ಅಂತರರಾಷ್ಟ್ರೀಯ ಭಯೋತ್ಪಾದಕ ಮೋಸ್ಟ್ ವಾಂಟೆಡ್ ಪಾತಕಿ ದಾವೂದ್ ಇಬ್ರಾಹಿಂ ಮತ್ತೆ ಈಗ ಸುದ್ದಿಯಲ್ಲಿದ್ದಾನೆ.
ಕುಖ್ಯಾತ ಪಾತಕಿಯ ಸಹೋದರಿ ಪುತ್ರನ ವಿವಾಹ ನಾಳೆ ಮುಂಬೈನಲ್ಲಿ ನಡೆಯಲಿದ್ದು, ಸ್ಕೈಪಿ ಮೂಲಕ ಪಾಕಿಸ್ತಾನದಿಂದ ವಿವಾಹ ಸಮಾರಂಭವನ್ನು ದಾವೂದ್ ವೀಕ್ಷಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ದಾವೂದ್‍ಗೆ ತಾನು ಆಶ್ರಯ ನೀಡಿಲ್ಲವೆಂದು ಹೇಳುತ್ತಿದ್ದ ಪಾಕಿಸ್ತಾನದ ಮಹಾದ್ರೋಹ ಈಗ ಇದರೊಂದಿಗೆ ಮತ್ತೊಮ್ಮೆ ಬಯಲಾಗಿದೆ.
ದಾವೂದ್‍ನ ಸಹೋದರಿ ಮೃತ ಹಸೀನಾ ಪಾರ್ಕರ್‍ಳ ಕಿರಿಯ ಪುತ್ರ ಅಲಿಶಹ ಪಾರ್ಕರ್ ವಿವಾಹವು (ನಿಖಾ) ವಾಣಿಜ್ಯ ನಗರಿ ಮುಂಬೈನ ದಕ್ಷಿಣ ಭಾಗದಲ್ಲಿರುವ ರಸೂಲ್ ಮಸೀದಿಯಲ್ಲಿ ಬುಧವಾರ ನಡೆಯಲಿದ್ದು, ಅದೇ ದಿನ ಸಂಜೆ ಜುಹು ಪ್ರದೇಶದ ಟುಲಿಪ್ ಸ್ಟಾರ್ ಹೋಟೆಲ್‍ನಲ್ಲಿ ಭವ್ಯ ಆರಕ್ಷತೆ ಸಮಾರಂಭ ಜರುಗಲಿದೆ. ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ದಿಟ್ಟ ಕ್ರಮಗಳಿಂದ ದಾವೂದ್ ಬೇಟೆಗೆ ಭಾರತವು ತುದಿಗಾಲಲ್ಲಿ ನಿಂತಿರುವುದರಿಂದ ತನ್ನ ಸಹೋದರಿ ಪುತ್ರನ ವಿವಾಹ ಸಮಾರಂಭದಲ್ಲಿ ಪಾತಕಿ ಪಾಲ್ಗೊಳ್ಳುತ್ತಿಲ್ಲ. ಇದೇ ಕಾರಣಕ್ಕಾಗಿ ಹಸೀನಾ ಕುಟುಂಬವು ಪಾಕಿಸ್ತಾನದಲ್ಲಿ (ಕರಾಚಿ) ನೆಲೆಸಿರುವ ದಾವೂದ್ ಮತ್ತು ಆತನ ಬಂಟರು ಸ್ಕೈಫಿ ಮೂಲಕ ವಿವಾಹ ಮತ್ತು ಆರತಕ್ಷತೆ ಸಮಾರಂಭ ವೀಕ್ಷಿಸಲು ವಿಶೇಷ ವ್ಯವಸ್ಥೆ ಮಾಡಿದೆ.
ದಾವೂದ್ ಸಹೋದರಿ ಹಸೀನಾಳ ಮೊದಲನೆ ಮಗ ಡ್ಯಾನಿಶ್ 2006ರಲ್ಲಿ ರಸ್ತೆ ಅಪಘಾತವೊಂದರಲ್ಲಿ ಕೊನೆಯುಸಿರೆಳೆದ. ಈ ಹಿನ್ನೆಲೆಯಲ್ಲಿ ಬದುಕಿರುವ ಕಿರಿಯ ಮಗ ಅಲಿಶಹ ನಿಖಾವನ್ನು ಅತ್ಯಂತ ವೈಭವೋಪೇತವಾಗಿ ನೆರವೇರಿಸಲು ಸಕಲ ಸಿದ್ದತೆಗಳು ಪೂರ್ಣಗೊಂಡಿದೆ. ಅಲಿಶಹ ಸಹೋದರಿ ಉಮೈರಾ ವಿವಾಹವು ಮೇ 2015ರಂದು ನಡೆದಿತ್ತಾದರೂ, ಅದೇ ವರ್ಷದಲ್ಲಿ ಹಸೀನಾ ನಿಧನಳಾದ ಕಾರಣ ನಿಖಾ ಸರಳವಾಗಿ ನೆರವೇರಿತ್ತು.
ಮುಂಬೈನಲ್ಲಿ ದೊಡ್ಡ ಮಟ್ಟದ ರಿಯಲ್ ಎಸ್ಟೇಟ್ ಮತ್ತು ನಿರ್ಮಾಣ ವಹಿವಾಟು ನಡೆಸುತ್ತಿರುವ ಅಲಿಶಹ ಮೊಮೊನ್ ಕುಟುಂಬದ ಆಯೇಷಾ ನಗಾನಿಯನ್ನು ಮದುವೆಯಾಗುತ್ತಿದ್ದಾನೆ.
ಮುಂಬೈನಲ್ಲಿ ನಡೆಯಲಿರುವ ತನ್ನ ಸಹೋದರಿಯ ಪುತ್ರನ ವಿವಾಹಕ್ಕೆ ಯಾವುದೇ ರೀತಿಯ ತೊಂದರೆ ಆಗದಂತೆ ವ್ಯಾಪಕ ವ್ಯವಸ್ಥೆ ಮಾಡಬೇಕೆಂದು ವಾಣಿಜ್ಯ ನಗರಿಯಲ್ಲಿರುವ ತನ್ನ ಸಹಚರರಿಗೆ ದಾವೂದ್ ಸ್ಪಷ್ಟ ಆದೇಶ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ದಾವೂದ್ ಸಹೋದರ ಇಕ್ಬಾಲ್ ಕಸ್ಕರ್, ಮತ್ತು ಆತನ ಸಹೋದರಿಯರಾದ ಜೈಟೂನ್ ಮತ್ತು ಫರ್‍ಝಾನಾ ಅವರೂ ತಮ್ಮ ಪತಿಯರೊಂದಿಗೆ ವಿವಾಹದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ನಿಖಾ ಮತ್ತು ರಿಸೆಪ್ಷನ್‍ನಲ್ಲಿ ಭಾಗವಹಿಸುವ ಫೋ ಲೀಸರಿಗೆ ಅಗತ್ಯವಾಗಿ ಬೇಕಾದ ದಾವೂದ್‍ನ ಬಂಟರು, ಅತಿಥಿಗಳು ಮತ್ತು ಗಣ್ಯರ ಮೇಲೆ ಕಣ್ಣಿಟ್ಟಿರುವಂತೆ ಮುಂಬೈ ಅಪರಾಧ ತಡೆ ವಿಭಾಗದ ಉನ್ನತ ಅಧಿಕಾರಿಗಳು ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಮದುವೆ ಸಮಾರಂಭದಲ್ಲಿ ದಾವೂದ್‍ನ ಬದ್ಧ ವೈರಿಗಳು ಆಕ್ರಮಣ ಮಾಡುವ ಸಾಧ್ಯತೆ ಇರುವುದಿಂದ ಮುಂದಾಗಬಹುದಾದ ಗ್ಯಾಂಗ್‍ವಾರ್ ತಪ್ಪಿಸಲು ಪೊಲೀಸರ ಹದ್ದಿನ ಕಣ್ಣಿನ ನಿಗಾ ಇಟ್ಟಿದ್ದಾರೆ. ದಾವೂದ್ ಕಳೆದ ಕೆಲವು ತಿಂಗಳುಗಳಿಂದ ಗ್ಯಾಂಗ್ರೀನ್ ರೋಗದಿಂದ ಬಳಲುತ್ತಿದ್ದು, ಪಾಕಿಸ್ತಾನದ ವೈದ್ಯರು ವಿಶ್ರಾಂತಿ ಪಡೆಯಲು ಸಲಹೆ ಮಾಡಿದ್ದಾರೆ.
ಕೈತಪ್ಪಿದ ದಾವೂದ್ ಬೇಟೆ:
ಕುಪ್ರಸಿದ್ದ ಅಂತಾರಾಷ್ಟ್ರೀಯ ಭಯೋತ್ಪಾದಕ ಹಾಗೂ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಪಾಕಿಸ್ತಾನ ಸೇನೆಯು ನೀಡುತ್ತಿದ್ದ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ನವದೆಹಲಿಯ ಗುಪ್ತಚರ ಇಲಾಖೆಯ ಇತ್ತೀಚೆಗೆ ವರದಿ ವರದಿ ಮಾಡಿತ್ತು. ಸುಮಾರು ಒಂದೂವರೆ ವರ್ಷದ ಹಿಂದೆ ಭಾರತೀಯ ಕಮಾಂಡೋಗಳು ಕುಖ್ಯಾತ ಅಂತಾರಾಷ್ಟ್ರೀಯ ಭಯೋತ್ಪಾದಕ ದಾವೂದ್ ಇಬ್ರಾಹಿಂನನ್ನು ಮುಗಿಸುವ ಅವಕಾಶ ಪಡೆದಿದ್ದರು. ಆದರೆ ಕೊನೆ ಕ್ಷಣದಲ್ಲಿ ಬಂದ ಒಂದು ರಹಸ್ಯ ಫೋನ್ ಕಾಲ್ ಕುಪ್ರಸಿದ್ಧ ಪಾತಕಿಯ ಭರ್ಜರಿ ಬೇಟೆಯನ್ನು ನಿಷ್ಫಲಗೊಳಿಸಿತು ಎಂಬ ಸ್ಫೋಟಕ ಸತ್ಯ ಕೂಡ ಬೆಳಕಿಗೆ ಬಂದಿತ್ತು. ಅಮೆರಿಕದ ಕಮಾಂಡೋಗಳು ಪಾಕಿಸ್ತಾನಕ್ಕೆ ಬಂದು ವಿಶ್ವಕ್ಕೆ ಕಂಟಕನಾಗಿದ್ದ ಅಲೈಖೈದಾ ಪರಮೋಚ್ಚ ನಾಯಕ ಒಸಮಾ ಬಿನ್ ಲಾಡೆನ್‍ನನ್ನು ಹೇಗೆ ಯಶಸ್ವಿ ಕಾರ್ಯಾಚರಣೆ ನಡೆಸಿ ಕೊಂದ ಮಾದರಿಯಲ್ಲೇ ನಮ್ಮ ದೇಶದ ಸಮರ್ಥ ಕಮಾಂಡೋಗಳು ಇನ್ನೇನು ಭೂಗತ ಪಾತಕಿ ದಾವೂದ್‍ನನ್ನು ಹೊಡೆದುರುಳಿಸಬೇಕು ಅನ್ನುವಷ್ಟರಲ್ಲಿ ಒಂದು ಬಂದ ಫೋ ನ್ ಕರೆಯೊಂದು ‘ದಾವೂದ್‍ನನ್ನು ಹತ್ಯೆ ಮಾಡಬೇಡಿ. ಕಾರ್ಯಾಚರಣೆ ನಿಲ್ಲಿಸಿ ಹಿಂದಿರುಗಿ’ ಎಂಬ ಸ್ಪಷ್ಟ ಸಂದೇಶ ದಾವೂದ್‍ಗೆ ಜೀವದಾನ ಮಾಡಿದೆ.
ದೇಶದ ಮೋಸ್ಟ್ ವಾಂಟೆಡ್ ಭಯೋತ್ಪಾದಕ, 1993ರ ಮುಂಬೈ ಸರಣಿ ಸ್ಫೋಟದ ಹಿಂದಿರುವ ಪ್ರಮುಖ ಆರೋಪಿ ಈಗ ಪಾಕಿಸ್ತಾನದ ರಕ್ಷಣೆಯಲ್ಲಿದ್ದಾನೆ. ಭಾರತೀಯ ಕಮಾಂಡೋಗಳ ಒಂದು ತಂಡ ದಾವೂದ್ ಶಿಕಾರಿಗಾಗಿ ಗುಪ್ತವಾಗಿ ಪಾಕಿಸ್ತಾನಕ್ಕೆ ಹೋಗಿತ್ತು. ತಮ್ಮ ರಹಸ್ಯ ಕಾರ್ಯಾಚರಣೆಯಲ್ಲಿ ಬಹುತೇಕ ಯಶಸ್ವಿಯಾಗಿದ್ದ ಅವರು ಇನ್ನೇನು ಆತನನ್ನು ಬೇಟೆಯಾಡಿ ಮುಗಿಸಬೇಕು ಎನ್ನುವಷ್ಟರಲ್ಲಿ ಬಂದ ಫೋ ನ್ ಕರೆಯೊಂದು ಕಮ್ಯಾಂಡೋಗಳ ಹಂಟಿಂಗ್ ಆಪರೇಷನ್‍ಗೆ ಅಡ್ಡಿಯಾಯಿತು ಎಂಬ ದೊಡ್ಡ ಸಂಗತಿಯನ್ನು ವಿಶ್ವಸನೀಯ ಮೂಲಗಳು ತಿಳಿಸಿವೆ.
Comments are closed.