ಮನೋರಂಜನೆ

ವರ್ಲಿಯಲ್ಲಿ 34 ಕೋಟಿಯ ಮನೆ ಖರೀದಿಸಿದ ಕೊಹ್ಲಿ!

Pinterest LinkedIn Tumblr

virat-kohli-new-look-2-HD-e1466167451950ಮುಂಬೈ: ಟೀಮ್ ಇಂಡಿಯಾದ ಟೆಸ್ಟ್ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರು ಮುಂಬೈನ ವರ್ಲಿಯಲ್ಲಿ 34 ಕೋಟಿ ರು.ನ ಮನೆ ಖರೀದಿಸಿದ್ದಾರೆ.

ಸ್ಕೈ ಬಂಗ್ಲೆಯ ‘ಸಿ 35’ನೇ ಮಹಡಿಯಲ್ಲಿ ಕೊಹ್ಲಿ ಮನೆ ಖರೀದಿಸಿದ್ದಾರೆ. ಈ ಕಟ್ಟಡದ 29ನೇ ಮಹಡಿಯಲ್ಲಿ ಅರ್ಜುನ್ ಅವಾರ್ಡ್ ಗೆದ್ದ ಸಹ ಆಟಗಾರ ಯುವರಾಜ್ ಸಿಂಗ್ ಕೆಲ ವರ್ಷಗಳ ಹಿಂದೆ ಮನೆ ಖರೀದಿ ಮಾಡಿದ್ದರು. ಫ್ಲ್ಯಾಟ್ ಕೊಳ್ಳುವ ಕುರಿತು ಕೆಲ ತಿಂಗಳುಗಳಿಂದ ಬಿಲ್ಡರ್ಸ್ ಜತೆಗೆ ಮಾತುಕತೆ ನಡೆಸಿದ್ದ ಕೊಹ್ಲಿ ಅಂತಿಮವಾಗಿ ಮನೆ ಖರೀದಿ ಮಾಡಿದ್ದಾರೆ.

ಕೆಲ ತಿಂಗಳುಗಳ ಹಿಂದೆ ಗೆಳತಿ ಅನುಷ್ಕಾ ಶರ್ಮಾ ಜತೆ ಅನೇಕ ಅಪಾರ್ಟಮೆಂಟ್ಗಳಲ್ಲಿ ಫ್ಲ್ಯಾಟ್ ವೀಕ್ಷಿಸಿದ್ದರು. ಇದೀಗ ಕೊಂಡುಕೊಂಡಿರುವ ಮನೆಯಿಂದ ಅರಬ್ಬಿ ಸಮುದ್ರದ ವಿಹಂಗಮ ನೋಟ ಕಾಣಿಸಲಿದ್ದು, ವಿಶಾಲವಾದ ಬೆಡ್ರೂಮ್ಳು, ಜಿಮ್ ಡೈನಿಂಗ್ ಹಾಲ್, ಸಿಟಿಂಗ್ ಬಾಲ್ಕನಿ, ಲಿವಿಂಗ್ ರೂಮ್ ಸಿಗಾರ್ ರೂಮ್ ಜತೆಗೆ ಪ್ರತ್ಯೇಕವಾದ ಅಡುಗೆಮನೆ ಹೊಂದಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

Comments are closed.