ಕರ್ನಾಟಕ

ಭಟ್ಕಳ: ಮೊಬೈಲ್ ಆ್ಯಪ್‌ನಲ್ಲಿ ಹೈಟೆಕ್ ಜೂಜಾಟ

Pinterest LinkedIn Tumblr

rerrehrhrhrthtjhಭಟ್ಕಳ: ಪೊಲೀಸ್‌ ಇಲಾಖೆ ಆರೋಪಿಗಳನ್ನು ಹಿಡಿಯಲು ನಾನಾ ತಂತ್ರಗಳನ್ನು ಅನುಸರಿಸುತ್ತಿದ್ದರೆ, ಇಲ್ಲಿನ ಕಳ್ಳರು, ಜೂಜುಕೋರರು ಮೊಬೈಲ್ ಆ್ಯಪ್‌ಗಳ ಮೂಲಕವೇ ಹೈಟೆಕ್‌ ಜೂಜಾಟ ನಡೆಸುತ್ತಿರುವ ಮಾಹಿತಿ ಲಭ್ಯವಾಗಿದೆ.

ಭಟ್ಕಳದಲ್ಲಿ ಎಲ್ಲೆಡೆ ಈಗ ಮೊಬೈಲ್‌ ಆ್ಯಪ್ ಮೂಲಕ ನಡೆಸುತ್ತಿರುವ ಗ್ಯಾಂಬ್ಲಿಂಗ್‌ನದೇ ಚರ್ಚೆ. ಈ ಹಿಂದೆ ತಾಲ್ಲೂಕಿನಲ್ಲಿ ಜಾತ್ರೆ, ಯಕ್ಷಗಾನ ಬಯಲಾಟ ನಡೆಯುವ ಆಸುಪಾಸಿನಲ್ಲಿ ಇಸ್ಪೀಟ್‌ನ ಎಲೆಗಳ ಚಿತ್ರವುಳ್ಳ ಪಟವನ್ನು ಹಾಸಿಕೊಂಡು, ಗುಂಡುಗಳನ್ನು ಡಬ್ಬಿಯಲ್ಲಿ ಕುಲುಕಿ, ಹಣಕಟ್ಟಿ ಜೂಜಾಟ ಆಡಲಾಗುತ್ತಿತ್ತು. ಇದಕ್ಕೆ ಗ್ರಾಮ್ಯ ಭಾಷೆಯಲ್ಲಿ ಕುಟಕಟಿ ಮಂಡ್ಲ, ಗುಡಗಡಿ ಮಂಡ್ಲ ಎಂದು ಕರೆಯಲಾಗುತ್ತಿತ್ತು.

ಪೊಲೀಸ್‌ ಇಲಾಖೆ ಇದನ್ನು ತಡೆಯುವಲ್ಲಿ ಕಟ್ಟುನಿಟ್ಟಿನ ಕ್ರಮ ಅನುಸರಿಸಿ ನಿರ್ಭಂದಿಸಿದ್ದರು. ಈಗ ಸ್ಮಾರ್ಟ್ ಪೋನ್‌ಗಳನ್ನು ಹಿಡಿದುಕೊಂಡಿರುವ ಜೂಜು ನಡೆಸುವವರು, ಆ್ಯಪ್‌ಗಳ ಮೂಲಕ ಜೂಜಾಟವನ್ನು ಎಗ್ಗಿಲ್ಲದೇ ಹೈಟೆಕ್‌ನಲ್ಲಿ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಈ ಹೈಟೆಕ್‌ ಜೂಜಾಟ ನಡೆಯುತ್ತಿರುವ ಬಗ್ಗೆ ಎಎಸ್‌ಪಿ ಅನೂಪಕುಮಾರ್‌ ಶೆಟ್ಟಿ ಅವರನ್ನು ಕೇಳಿದಾಗ, ಇದೊಂದು ಹೊಸ ಮಾದರಿಯ ಜೂಜಾಟವಾಗಿದೆ. ಹಣಕಟ್ಟಿ ಆಡುತ್ತಿರುವ ಬಗ್ಗೆ ಮಾಹಿತಿ ದೊರಕಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.

ಮೊಬೈಲ್ ಆ್ಯಪ್‌ನಲ್ಲಿ ಜೂಜಾಟ ಹೇಗೆ?
ಆ್ಯಂಡ್ರಾಯ್ಡ್ ಸ್ಮಾರ್ಟ್ ಪೋನ್‌ಗಳಲ್ಲಿ ಉಚಿತವಾಗಿ ಲಭ್ಯವಿರುವ ಕ್ಯಾಸಿನೋ ಗೇಮ್ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಂಡು ಈ ಜೂಜನ್ನು ಆಡಬಹುದಾಗಿದೆ. ಈಗ ಪಟ್ಟಣದ ಹಲವೆಡೆ ಎಲ್ಲೆಂದರಲ್ಲಿ ನಿರ್ಭಯವಾಗಿ ಹೈಟೆಕ್‌ ಜೂಜು ನಡೆಯುತ್ತಿದೆ. ಗ್ರಾಮೀಣ ಭಾಗದಲ್ಲೂ ಮೊಬೈಲ್ ಆ್ಯಪ್‌ ಬಳಕೆಯ ಹೈಟೆಕ್‌ ಜೂಜಾಟ ನಿಧಾನವಾಗಿ ಜ್ವರದಂತೆ ಏರುತ್ತಿದೆ.

** *** **
ಮೊಬೈಲ್ ಆ್ಯಪ್‌ ಬಳಸಿ ಹಣಹಾಕಿ ಜೂಜಾಟ ನಡೆಸುತ್ತಿರುವ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಕ್ರಮ ಕೈಗೊಳ್ಳಲಾಗುವುದು.
ಅನೂಪಕುಮಾರ್‌ ಶೆಟ್ಟಿ, ಎ.ಎಸ್‌.ಪಿ ಭಟ್ಕಳ

Comments are closed.